ಹಳ್ಳೂರ.
ಜಾತ್ರೆ ದಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ನಡೆಯುವುದರಿಂದ ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೋಳಿ ಹೇಳಿದರು.
ಅವರು ಶಿವಾಪೂರ ಗ್ರಾಮದ ಆರಾಧ್ಯ ದೇವರಾದ ಅಂಬಲಿ ಒಡೆಯ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ ಗ್ರಾಮದವರೆಲ್ಲ ಕೂಡಿಕೊಂಡು ಜಾತ್ರೆಯಲ್ಲಿ ಬಾಗವಹಿಸಿ ಮಹಾತ್ಮರ ಮಾತುಗಳನ್ನು ಕೇಳಿದರೆ ಮಾನವ ಜನ್ಮ ಪಾವನವಾಗುತ್ತದೆ.ಮಠದ ಪೀಠಾಧಿಪತಿಗಳಾದ ಶ್ರೀ ಅಡವಿಸಿದ್ದರಾಮ ಮಹಾಸ್ವಾಮಿಗಳಿಂದ ಮಠವು ಅಭಿವೃದ್ದಿ ಹೊಂದುತ್ತಿದೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹೊಸೂರ ಗಂಗಾಧರ ಮಹಾಸ್ವಾಮಿಗಳು ಮಾತನಾಡಿ ಶ್ರೇಷ್ಠ ಶ್ರಾವಣ ಮಾಸದಲ್ಲಿ ಸಂತ ಮಹಾತ್ಮರ ಮಾತುಗಳನ್ನು ಕೇಳಿ ಜೀವನ ಉದ್ದಾರ ಮಾಡಿಕೊಳ್ಳಬೇಕು ಪಾಪ ಕರ್ಮಗಳನ್ನು ಮಾಡದೆ ಇನ್ನೊಬ್ಬರಿಗೆ ಹೊರೆಯಾಗದಂತೆ ಬದುಕಿ ಪುಣ್ಯದಂತ ಕಾರ್ಯಗಳನ್ನು ಮಾಡಿದರೆ ಮಾತ್ರ ಪುಣ್ಯ ಲಬಿಸುತ್ತದೆ.ದರ್ಮದಿಂದರೆ ಧರ್ಮವು ಸದಾಕಾಲ ರಕ್ಷಣೆ ಮಾಡುತ್ತೆದೆಂದು ಹೇಳಿದರು.
ನಿಶ್ಚಲ ಸ್ವರೂಪ ಮಹಾಸ್ವಾಮಿಗಳು. ಪ್ರಭು ನೀಲಕಂಠ ಮಹಾಸ್ವಾಮಿಗಳು .
ಮಠದ ಪೀಠಾಧಿಪತಿಗಳಾದ ಶ್ರೀ ಅಡವಿಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಈ ಸಮಯದಲ್ಲಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.





