ಬೆಳಗಾವಿ.ಕುಡಚಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟದಲ್ಲಿ ನೂತನವಾಗಿ ಬಾಳುಮಾಮಾ ಅರ್ಬನ್ ಕೋ-ಆಪ್.ಸೊಸಾಯಿಟಿ ಲಿ. ಅನ್ನು ಪೂಜ್ಯ ಲಗಮಣ್ಣ ಬೆಕ್ಕೇರಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಪಿಎಸ್ಐ ಪ್ರೀತಮ ನಾಯಿಕ ರೈತರಿಗೆ, ಸಾರ್ವಜನಿಕರಿಗೆ ಸಹಕಾರಿ ಸಂಘಗಳು ಕಾಲ ಕಾಲಕ್ಕೆ ಆಸರೆಯಾಗುವ ಮೂಲಕ ಜೀವನದಲ್ಲಿ ಬರುವ ಕಷ್ಟಗಳನ್ನು ದೂರು ಮಾಡಲು ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಶಿರಗೂರ ಪೂಜ್ಯರು, ಅಧ್ಯಕ್ಷ ಶಂಕರ ಘಾಳಿ, ಸದಸ್ಯರಾದ ನಿಂಗಪ್ಪ ಭಾವಿ, ಸುಧೀರ ಘೊಂಗಡಿ, ವೀಣಾ ಸಂಕೇಶ್ವರ, ಮುತ್ತಪ್ಪಾ ಘಾಳಿ, ಕರೆಪ್ಪ ಪೂಜೇರಿ, ಸುನೀಲ ಪಾಟೀಲ, ಶ್ರೀಕಾಂತ ಖೋತ, ರಾಹುಲ ಪಾಟೀಲ್, ಕಲಗೌಡ ಕೋತಳಿ, ರಾಜು ಸಾರವಾಡೆ, ಮಹೇಶ ಸಾರವಾಡೆ, ಸುನೀಲ ಕರಗಾವೆ, ರಾಹುಲ ದಳವಾಯಿ, ಬಸವರಾಜ ಹಿರೇಮಠ ಹಾಗೂ ಇತರರು ಉಪಸ್ಥಿತರಿದ್ದರು.
ವ್ಯವಸ್ಥಾಪಕ ಲಗಮಣ್ಣಾ ಸಂಕೇಶ್ವರ, ಕ್ಲರ್ಕ ಸಂತೋಷ ದಳವಾಯಿ ಇದ್ದರು.





