ಮೋಬೈಲ್ ಫೋನ ಬಾರ ಅಂಗಡಿ ಮೋಜು ಮಸ್ತಿ ಮಾಡುವ ಯುವಕರ ಜೀವನ ಹಾಳು ಅಡವಿ ಸಿದ್ದರಾಮ ಮಹಾಸ್ವಾಮಿಗಳು

Share the Post Now


ಬೆಳಗಾವಿ.ಹಳ್ಳೂರ. ವಿಶ್ವದಲ್ಲಿಯೇ ಭಾರತ ದೇಶವು ಧರ್ಮ ರಕ್ಷಣೆ, ಸಂಸ್ಕೃತಿಯನ್ನು ಹೊಂದಿದ ಪವಿತ್ರ ಪುಣ್ಯಭೂಮಿ ನಮ್ಮದು ನಮ್ಮ ಸಂಸ್ಕೃತಿ ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮೊರೆ ಹೋಗಿ ಜೀವನ ಹಾಳು ಮಾಡಿಕೊಳ್ಳಬೇಡಿರೆಂದು ಮೈಗೂರ ಗುರು ಪ್ರಸಾದ ಶ್ರೀಗಳು ಹೇಳಿದರು.


ಅವರು ಗ್ರಾಮದ ಜೈ ಹನುಮಾನ ಮಂದಿರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಹನುಮ ಮಾಲಾದಾರಿಗಳಿಂದ ನಡೆದ ಸತ್ಸಂಗ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಯುಗಾದಿ ಹಬ್ಬ ಹೊಸ ವರ್ಷವೆಂದು ಆಚರಿಸಬೇಕು,ಪ್ರತಿಯೊಬ್ಬರೂ ಭಾರತೀಯ ಹಬ್ಬ ಹರಿದಿನಗಳನ್ನೂ ಆಚರಿಸಿಕೊಂಡು ದೇಶದ ಹಿತ ರಕ್ಷಣೆ ಕಾಪಾಡಿಕೊಂಡು ಹೋಗಬೇಕು, ಯುವಕರು ದುಶ್ಚಗಳಿಗೆ ಬಲಿಯಾಗಿ ಶ್ರೇಷ್ಠ ಜೀವನ ಕಳೆದುಕೊಳ್ಳಬೇಡಿರಿ ಹನುಮ ಮಾಲಾದಾರಿಗಳು ಜೀವನ ಪೂರ್ತಿ ಶ್ರೀ ರಾಮ್ ನ ತತ್ತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ದೇವರ ಪ್ರೀತಿಗೆ ಪಾತ್ರರಾಗಬೇಕೆಂದು ಹೇಳಿದರು.


ಸಾನಿಧ್ಯ ವಹಿಸಿದ ಅಡವಿ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ ದೇಶದ ಎರಡೂ ಕಣ್ಣು ಅನ್ನದಾತ, ಸೈನಿಕ ಇವರ ಜೊತೆಗೆ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಒಳ್ಳೆ ಕೆಲಸ ಮಾಡುತ್ತಿದೆ. ಹಬ್ಬ ಹರಿದಿನಗಳಲ್ಲಿ ದೇವಸ್ಥಾನಕ್ಕೆ ಹೋಗದೆ ಬಾರ ಅಂಗಡಿ, ಮೋಜು  ಮಸ್ತಿ ಮಜಾ ಮಾಡಿ ಮೋಬೈಲ್ ಫೋನ ಗೆ ಅಂಟಿಕೊಂಡು ಯುವಕರು ಚಿಕ್ಕ ವಯಸ್ಸಿನಲ್ಲಿಯೇ ಜೇವನ ಕಳೆದುಳ್ಳುತ್ತಿದ್ದಾರೆ. ತಂದೆ ತಾಯಿಗಳು ಮಕ್ಕಳಿಗೇ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಸಂಸ್ಕಾರ ನೀಡಿ ಸನ್ಮಾರ್ಗವನ್ನು ಹಿಡಿಸಬೇಕೆಂದು ಹೇಳಿದರು.


ಪ್ರಾರಂಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳ ಶ್ರೀ ರಾಮನ ಭಾವ ಚಿತ್ರದೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು. ಗ್ರಾಮದ ಹಾಗೂ ಸುತ್ತಮುತ್ತಲಿನ ಹನುಮ ಮಾಲಾದಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು.ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ನಡೆಯಿತು.
ವರದಿ ಮುರಿಗೆಪ್ಪ ಮಾಲಗಾರ

Leave a Comment

Your email address will not be published. Required fields are marked *

error: Content is protected !!