ಅತಿಥಿ ಶಿಕ್ಷಕರ ಗೋಳು ಸರಕಾರ ಕೇಳಲಿ! ಶಾಸಕ ಮಹೇಂದ್ರ ತಮ್ಮಣ್ಣವರ ಗೇ ಮನವಿ

Share the Post Now

ಮತ್ತೆ ರಾಜ್ಯದಲ್ಲಿ ಶಿಕ್ಷಕರ ಬರ ಹಾಗೂ ಹಲವಾರು ಶಾಲೆಗಳಲ್ಲಿ ಏಕೋಪಾಧ್ಯಾಯನೇ ಶಾಲೆಯನ್ನು ಮುಂದುವರಿಸಲು ಹೆಗಲು ನೀಡಬೇಕಾಗಿದೆ.

ಸಾವಿರಾರು ಅತಿಥಿ ಶಿಕ್ಷಕರು ಶಾಲೆಯಿಂದ ಹೊರಗುಳಿದಿದ್ದು, ಇವರ ಅಳಲನ್ನು ಅರಿಯದೆ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಅಸಂವಿಧಾನಿಕ ಮತ್ತು ಅವೈಜ್ಞಾನಿಕ ಪದ್ಧತಿಯಲ್ಲಿ ಉಳಿದ ಅತಿಥಿ ಶಿಕ್ಷಕರು ಸಮಾಜವನ್ನೇ ತಿದ್ದಲು ಮತ್ತು ಸುಧಾರಿಸಲು ಹೊರಟಿರುವ ಅತಿಥಿ ಶಿಕ್ಷಕರ ಪಾಡು ಮಾತ್ರ ಕಂಡು ಕಾಣದಂತೆ ಅರಿತು ಅರಿಯದಂತೆ ರಾಜ್ಯ ಸರ್ಕಾರ ಮಾತ್ರ ಅತಿಥಿ ಶಿಕ್ಷಕರಿಗೆ

“ಮಲತಾಯಿ ಧೋರಣೆ ಮಾಡುತ್ತಿದ್ದು” ನ್ಯಾಯಾಲಯದಲ್ಲಿ ನ್ಯಾಯ ದೇವತೆಯ ಕಣ್ಣಿಗೆ ಪಟ್ಟಿ ಕಟ್ಟಿರುವ ಹಾಗೆ ಶಿಕ್ಷಣ ಇಲಾಖೆಯೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಈ ಸಾಲಿನ ಶಿಕ್ಷಣ ಪದ್ಧತಿಯನ್ನು ಮುಂದುವರಿಸಿದೆ ಮೊನ್ನೆತಾನೆ ರಾಜ್ಯದಿಂದ ಹಲವಾರು ಅತಿಥಿ ಶಿಕ್ಷಕರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡರು ಅದಕ್ಕೆ ಶಿಕ್ಷಣ ಮಂತ್ರಿಗಳು ಮತ್ತು ಹಲವಾರು ಶಿಕ್ಷಣ ತಜ್ಞರು ಸೇರಿ ಕೆಲವು ಬೇಡಿಕೆಗಳನ್ನು ಕೆಲವೇ ದಿನಗಳಲ್ಲಿ ಈಡೇರಿಸುವುದಾಗಿ ಹುಸಿ ಭರವಸೆ ನೀಡಿ ಅತಿಥಿ ಶಿಕ್ಷಕರ ಭರವಸೆಗೆ ಚುತಿ ತಂದಿದೆ ಹಾಗಾಗಿ ಮತ್ತೆ ಅತಿಥಿ ಶಿಕ್ಷಕರು ರಾಜ್ಯ ವ್ಯಾಪ್ತಿ ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅತಿಥಿ

ಶಿಕ್ಷಕರಿಂದ ಸಾಂಕೇತಿಕವಾಗಿ ಎರಡು ದಿನ ಶಾಲೆಯನ್ನು ತೊರೆಯುವ ಅಭಿಯಾನ ಕುರಿತಾಗಿ ಮನವಿಯನ್ನು ಶಿಕ್ಷಣಾಧಿಕಾರಿಗಳು ರಾಯಬಾಗ ಹಾಗೂ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಮತ್ತು ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಉಪತಶಿಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಶಿಕ್ಷಣ ಇಲಾಖೆಯ ವೈಜ್ಞಾನಿಕ ಪದ್ಧತಿ ಕಿತ್ತೊಗೆದು ಸಂವಿಧಾನಬದ್ಧವಾಗಿ ಅತಿಥಿ ಶಿಕ್ಷಕರಿಗೆ ನೆಲೆ ನೀಡಬೇಕೆಂದು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು

ಶಾಲೆಯಿಂದ ಹೊರಗುಳಿದ ಅತಿಥಿ ಶಿಕ್ಷಕರ ಕೂಗು ಇದಾಗಿದೆ. ಈ ಒಂದು ಮನವಿ ನಡೆಯುವ ಕಾರ್ಯಕ್ರಮದಲ್ಲಿ ತಾಲೂಕಿನ ಗೌರವಾಧ್ಯಕ್ಷರಾದ ಪ್ರದೀಪ ಮಾಳಿ. ತಾಲೂಕಿನ ಅಧ್ಯಕ್ಷರಾದ ರಾಜು ಪಾಸಾನೆ. ಹಾಗೂ ಸದಸ್ಯರು ಶಿವಾನಂದ ಅರಿಕೇರಿ. ದಸ್ತಗಿರ ಸರ. ಸಂತೋಷ ಸರ, ಶಿವಾನಂದ ಕೆಳಗಡೆ ಮತ್ತು ಶಿವಾನಂದ ಅರಿಕೇರಿ, ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

error: Content is protected !!