ಸಂಘಟನೆಯಿಂದ ಸಮಾಜಕ್ಕೆ ಸಹಕಾರಿಯಾಗಲಿ :ಸರ್ವೋತ್ತಮ ಜಾರಕಿಹೊಳಿ 

Share the Post Now

ಬೆಳಗಾವಿ.    ಹಳ್ಳೂರ .ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮತ್ತು ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಅಂಬೇಡ್ಕರ ವಾದ ನೂತನ ಶಾಖೆಯಿಂದ ಸಮಾಜದಲ್ಲಿ ಇನ್ನೊಬ್ಬರಿಗೆ ಅನ್ಯಾಯ ವಾಗದಂತೆ ನೋಡಿಕೊಂಡು ಸತ್ಯದ ಗೆಲುವಿಗೆ ಹೋರಾಟ ಮಾಡಿ ಸಮಾಜವನ್ನು ಉದ್ದಾರ ಮಾಡಲು ಸಹಕರಿಸಬೇಕೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.    

                                      ಅವರು ಗ್ರಾಮದಲ್ಲಿ ನೂತನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಅಂಬೇಡ್ಕರ್ ವಾದ ಶಾಖೆಯ ಅನಾವರಣ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಂಬೇಡ್ಕರರು ಹೇಳಿದಂತೆ ಶಿಕ್ಷಣ, ಸಂಫಟನೆ, ಹೋರಾಟ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ನೀವೂ ಕೂಡಾ ಮುಖ್ಯ ವಾಹಿನಿಗೆ ಬರಬೇಕು ಸಂಘದ ಸದಸ್ಯರು ಭೇದ ಬಾವ ಮಾಡದೆ ಒಂದಾಗಿದ್ದು ಸಂಘವು ಉತ್ತರೋತ್ತರವಾಗಿ ಬೆಳೆಯಿಲೆಂದು ಶುಭ ಹಾರೈಸಿದರು.    

             ರಾಜ್ಯ ಸಂಘಟನಾ ಸಂಚಾಲಕರಾದ ಮನೋಹರ ಅಜ್ಜನಕಟ್ಟಿ ಮಾತನಾಡಿ ಸಂಘಟನೆಯಿಂದ ಸಾಕಷ್ಟು ರೀತಿಯ ಅನುಕೂಲತೆಗಳಿವೆ. ಸಂಘಟನೆ ಹೆಸರಿಗೆ ಯಾವುದೇ ರೀತಿಯ ಚ್ಯುತಿ ಬರದಂತೆ ನೋಡಿಕೊಳ್ಳಿ. ಬಾಲಚಂದ್ರ ಜಾರಕಿಹೊಳಿ ಅವರು ದಲಿತ ಸಮಾಜ ಉದ್ದಾರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಸರಕಾರಿ ಕಚೇರಿಗೆ ತೆರಳಿ ಸರಕಾರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಂದರು.     

                    ಅತಿಥಿಗಳಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಮಾತನಾಡಿ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿರಿ ದುಶ್ಚಟ ಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿರಿ. ದಿನ ನಿತ್ಯ ಕೆಲಸ ಕಾರ್ಯ ಮಾಡಿ ಆರ್ಥಿಕ ಮಟ್ಟ ಹೆಚ್ಚಾದರೆ ಜೀವನವು ಸುಖವಾಗಿರುತ್ತದೆಂದು ಹೇಳಿದರು.       

                                  ಸಾನಿದ್ಯ ವಹಿಸಿದ ಶಿವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.             ಈ ಸಮಯದಲ್ಲಿ ವಿಠ್ಠಲ ಮಗದುಮ. ಪಿಕೆಪಿಎಸ್ ಅಧ್ಯಕ್ಷ ಮಹಾವಿರ ಛಬ್ಬಿ. ಮಾದೇವ ಮಾಸನ್ನವರ.ರಮೇಶ ಲೋಕಣ್ಣವರ.ರಾಜು ತಳವಾರ. ಲಕ್ಷ್ಮಣ ಛಬ್ಬಿ.ತುಕಾರಾಮ ಸನದಿ.ಹಣಮಂತ ಪಾಲಬಾಂವಿ.ಶ್ರೀಶೈಲ ನಾವಿ.ಸಿದ್ದು ದುರದುಂಡಿ.ನಾರಾಯಣ ಪೂಜೇರಿ.ಯಾಸಿನ ಮುಜಾವರ..ಸಿದ್ದು ಬಡಿಗೇರ.ಪ್ರಕಾಶ ಹರಿಜನ.ಎ ಎಸ್ ಐ ಬಿ ಎಸ್ ಕುಂಬಾರ. ಶಿವಪ್ಪ ಹರಿಜನ. ಲಕ್ಷ್ಮಣ ವೆಂಕಟಾಪುರ.ಬಸು ಕಲ್ಲೋಳ್ಳಿ. ಬಾಬು ಹರಿಜನ. ಕಲ್ಲಪ್ಪ ಮ್ಯಾಗಡಿ. ಶಾನೂರ ಹರಿಜನ. ಸಂತಪ್ಪ ದೊಡಮನಿ.ಸಿದ್ದವ್ವ ಹರಿಜನ. ಚಂದವ್ವ ಮ್ಯಾಗಡಿ.ಆರತಿ ಹರಿಜನ. ದುರ್ಗವ್ವ ವೆಂಕಟಾಪುರ. ಗೀತಾ ಬಾಳವ್ವಗೋಳ.ಶಂಭುಲಿಂಗ ಹರಿಜನ. ರಾಮಪ್ಪ ದೊಡಮನಿ. ಚಂದ್ರಪ್ಪ ದೊಡಮನಿ. ಪರಶುರಾಮ್ ಹರಿಜನ..ಸೇರಿದಂತೆ ಅನೇಕರಿದ್ದು ಕಾರ್ಯಕ್ರಮವನ್ನು ಹನಮಂತ ಹಡಪದ ನಿರೂಪಿಸಿ. ಜಯಶ್ರೀ, ದಾನೇಶ್ವರಿ, ಸುಹಾಸಿನಿ, ಮಾನಂದಾ ಹರಿಜನ. ವಂದನಾರ್ಪಣೆ ಗೀತೆ ಹಾಡಿದರು.

Leave a Comment

Your email address will not be published. Required fields are marked *

error: Content is protected !!