ರಾಜ್ಯಸಭಾ ಸಂಸದರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಈರಣ್ಣ ಕಡಾಡಿ ಅವರು ಇಂದು ಬೆಳಗಾವಿ ಮಹಾನಗರದ ಸರ್ಕಿಟ್ ಹೌಸ್ (ಐಬಿ)ದಲ್ಲಿ ರಾಜ್ಯ ಸರ್ಕಾರ ರೈತರಿಗೆ ನೂತನ ವಿದ್ಯುತ್ ಸಂಪರ್ಕವನ್ನು ಸ್ವಂತ ಖರ್ಚಿನಿಂದ ಪಡೆದುಕೊಳ್ಳಬೇಕೆಂಬ ಆದೇಶವನ್ನು ಕೈ ಬಿಡುವಂತೆ ಆಗ್ರಹಿಸಿ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸಂಜಯ್ ಪಾಟೀಲ್ ಬೆಳಗಾವಿ ನಗರ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ಅನಿಲ್ ಬೆನಕೆ ಬೆಳಗಾವಿ ನಗರ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ಕಲ್ಲಪ್ಪ ಶಹಾಪೂರಕರ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುಭಾಸ ಪಾಟೀಲ, ಶ್ರೀ ಸಂದೀಪ ಪಾಟೀಲ, ಶ್ರೀ ದಾದಾಗೌಡ ಬಿರಾದಾರ, ಗ್ರಾಮೀಣ ಮಂಡಲ ಅಧ್ಯಕ್ಷ ಶ್ರೀ ಧನಂಜಯ ಜಾಧವ, ಜಿಲ್ಲಾ ಮಾಧ್ಯಮ ಸಂಚಾಲಕರಾದ ಶ್ರೀ ಶರದ ಪಾಟೀಲ, ಎಫ್.ಎಸ್ ಸಿದ್ದನಗೌಡರ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ ಸಾಣಿಕೊಪ್ಪ, ಶ್ರೀ ಬಾಹುಬಲಿ ದೊಡ್ಡನ್ನವರ, ಶ್ರೀ ಮಲ್ಲಿಕಾರ್ಜುನ ಮದನ್ನವರ, ಶ್ರೀ ರಾಜು ಡೊಣಿ ಉಪಸ್ಥಿತರಿದ್ದರು.