ನವರಾತ್ರಿ ಉತ್ಸವದ 8 ನೇ ದಿನದ ಮಹಾಗೌರಿ ದೇವಿಯ ಮಹಾಪೂಜೆ
ಮುಗಳಖೋಡ: ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಮಹಾರಾಜರ ಬೃಹನ್ಮಠದಲ್ಲಿ ಆದಿಶಕ್ತಿಯ ಪ್ರತಿಷ್ಠಾಪನೆಯ 8 ನೇ ದಿನದ ಮಹಾಗೌರಿ ದೇವಿಯ ವಿಶೇಷ ಮಹಾಪೂಜೆಯನ್ನು ಡಾ.ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ನೆರವೇರಿಸಿದರು.
ಅವರು ಮಹಾಪೂಜೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಆದಿಶಕ್ತಿ ಮಹಾಗೌರಿ ದೇವಿಯನ್ನು ಓಳ್ಳೆಯ ಮನಸ್ಸಿನಿಂದ ಪೂಜಿಸಿ ಆರಾಧನೆ ಮಾಡಿದರೆ, ದೇವಿ ನಾಡಿನ ಎಲ್ಲ ರೈತಬಾಂದವರಿಗೆ ಮಹಿಳೆಯರಿಗೆ, ಸಮಸ್ತ ನಾಡಿನ ಜನತೆಗೆ ಸನ್ಮಂಗಳವನ್ನುಂಟು ಮಾಡುವಳು ಎಂದು ಆಶಿರ್ವಚನ ನೀಡಿದರು.
ನಂತರ 100 ಕ್ಕೂ ಹೆಚ್ಚು ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶ್ರೀಮಠದ ಸಮಸ್ತ ಸದ್ಬಕ್ತರು ಮಾಹಾಪೂಜೆಯಲ್ಲಿ ಉಪಸ್ಥಿತರಿದ್ದರು.