ಸನ್ಮಾರ್ಗವನ್ನು ತೋರಿಸುವುದೇ ನವರಾತ್ರಿಯ ಉತ್ಸವದ ಉದ್ದೇಶ ಶಿವಾನಂದ ಮಹಾಸ್ವಾಮಿಗಳು.

Share the Post Now

      ಹಳ್ಳೂರ.

ನವರಾತ್ರಿಯ ಉತ್ಸವ ಆಚರಣೆ ಹಿಂದೂ ಧರ್ಮದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ಪದ್ಧತಿಯಂತೆ ನವರಾತ್ರಿಯ ಉತ್ಸವ ನವ ದುರ್ಗೆಯಯರ ವೇಷ ಧರಿಸಿಭಕ್ತಿ ಸನ್ಮಾರ್ಗ ತೋರುವುದು ದೇವಿ ಪುರಾಣ ದಿಂದ ನಾನೆಂಬ ಅಹಂಕಾರದ ಅಸ್ಟ್ ಮದಗಳು ತೊರೆದು ಸನ್ಮಾರ್ಗದಲ್ಲಿ ಸಾಗುವುದೇ ದೇವಿ ಪುರಾಣ ಉದ್ದೇಶವೆಂದು ಜಡಿ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ಮಹಾಸ್ವಾಮಿಗಳು ಹೇಳಿದರು. ಹಳ್ಳೂರ ಗ್ರಾಮದ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ನೆಡೆದ ನವರಾತ್ರಿಯ ಉತ್ಸವ ನಿಮಿತ್ಯ ಹಮ್ಮಿಕ್ಕೊಂಡಿಡಿರುವ ಶ್ರೀ ದೇವಿ ಪುರಾಣ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ನವರಾತ್ರಿಯ ಉತ್ಸವದಲ್ಲಿ 9 ನವಗ್ರಹ,9 ದಿಕ್ಪಾಲಕರು,18 ಅಧ್ಯಾಯದ ಪುರಾಣವನ್ನು ಓದಿ ತಿಳಿದುಕೊಳ್ಳಬೇಕು.

ನವರಾತ್ರಿಯ ಉತ್ಸವವನ್ನು ದೇಶಾದ್ಯಂತ  ಅದ್ಧೂರಿಯಿಂದ ಆಚರಣೆ ಮಾಡುತ್ತಾರೆ. ನವರಾತ್ರಿಯಲ್ಲಿ ಹೆಣ್ಣುಮಕ್ಕಳು ಬನ್ನಿ ಮಹಾಂಕಾಳಿ ಬೆಳಿಗ್ಗೆ ಎದ್ದು ಕೂಡಲೇ ಹೋಗಿ ವಠ ಸಾವಿತ್ರಿ ವೃತ ಮಾಡಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಸಿಕೊಳ್ಳುತ್ತಾರೆ. ಬನ್ನಿ ತಪ್ಪಲಿನಲ್ಲಿ ದೈವಿ ಶಕ್ತಿ ಅಡಗಿದೆ ಅದಕ್ಕಾಗಿ ದಸರಾ ಹಬ್ಬದಂದು ಬನ್ನಿ ಮೂಡಿದು ಬನ್ನಿ ವಿನಿಮಯ ಮಾಡಿ ಬಾಂಧವ್ಯ ಬೆಸೆಯುವ ಅಸ್ತ್ರವೆಂದು ಹೇಳಿದರು.                            

        ನಾಗರಾಳ ಪರಮಾನಂದ ಯೋಗಶ್ರಮದ ಜ್ಞಾನೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ನವರಾತ್ರಿ ಉತ್ಸವದಲ್ಲಿ ದೇವಿಯನ್ನು ಭಕ್ತಿಯಿಂದ ಪೂಜಿಸ ಧ್ಯಾನಿಸಿದರೆ ಸಕಲ ಸೌಭಾಗ್ಯ ದೊರೆಯುತ್ತವೆ.ದೇವಿ ಪುರಾಣದಿಂದ ದುಷ್ಟರ ಸಂಹಾರವಾಗಿ ಸಿಸ್ಟರ ರಕ್ಷಣೆ ಆಗುತ್ತದೆ. ದೇವಿ ಪುರಾಣ ಹೇಳುವರಿಗೂ,ಕೇಳುವರಿಗೂ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಕೆಟ್ಟ ಕರ್ಮದ ಕೆಲಸ ಕಾರ್ಯ ಮಾಡಿ ಕಷ್ಟಕ್ಕೆ ಗುರಿಯಾಗದೆ ಒಳ್ಳೇದು ಮಾಡಿ ಪುಣ್ಯ ಪಡೆದುಕೊಳ್ಳಬೇಕೆಂದು ಎಂದು ಹೇಳಿದರು.                           

    ನವ ದುರ್ಗೆಯರ ಸ್ವರೂಪದಲ್ಲಿ ವೇಷ ಭೂಷಣ ಧರಿಸಿದ 100 ಕ್ಕಿಂತ ಹೆಚ್ಚು ಮುದ್ದೂ ಮಕ್ಕಳ ನೃತ್ಯವು ಜನರ ಮನ ತಣಿಸುವಂತಿತ್ತು. ದಿನಾಲು ನೂರಾರು ನವ ದುರ್ಗೆಯರಿಗೆ ಉಡಿ ತುಂಬುತ್ತಿದ್ದರು. ದಿನಾಲೂ ಸರ್ವರಿಗೂ ಒಬ್ಬೊಬ್ಬರು ಮಹಾಪ್ರಸಾದ ವ್ಯವಸ್ಥೆ ನಡೆಸುತ್ತಿದ್ದರು.ಕಾರ್ಯಕ್ರಮದಲ್ಲಿ ಆರ್ಚಕರಾದ ಚನ್ನಪ್ಪ ಬಡಿಗೇರ.ನಿಂಗಣ್ಣ ಜಂಬಗಿ ಸಂತರು ಸೇರಿದಂತೆ ಪಂಚಮ ಸಾಲಿ ದೈವ ಹಾಗೂ ತೋಟಗೇರ ದೈವದವರು ಹಾಗೂ  ದೇವಸ್ಥಾನದ ಕಮಿಟಿಯವರಿದ್ದು. ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ಸ್ವಾಗತಿಸಿ, ನಿರೂಪಿಸಿದರು, ಹನಮಂತ ಹಡಪದ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!