ನಮಸ್ಕಾರ ನೋಡಿ ಸರ್ ಇವತ್ತು ಪ್ರತಿಭಟನೆ ಹಮ್ಮಿಕೊಂಡಿದ್ದೀವಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ
ಅನ್ನ ಬೆಳೆವ ರೈತರು ಸಂಕಷ್ಟದಲ್ಲಿದಾರೆ..ಸಾಲ ಭಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ
ಬನ್ನಿ ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸೋಣ ರೈತರ ಹೋರಾಟಕ್ಕೆ ಕೈಜೋಡ್ಸೋಣ..
ಬಾಬಾಸಾಹೇಬರಿಗೆ ಅಪಮಾನ ಮಾಡಿದಾರೆ ಬನ್ನಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸೋಣ..!
ಎನೂ ಅರಿಯದ ಹಸುಗೂಸಿನ ಮೇಲೆ ಅತ್ಯಾಚಾರ ಮಾಡಿ ಕೊಂದುಹಾಕಿದಾರೆ. ಬನ್ನಿ ಕಾಮುಕ ಮೃಗಗಳನ್ನು ಗಲ್ಲಿಗೆ ಹಾಕಿಸೋಣ..
ದಲಿತರು ಅನ್ನೋ ಕಾರಣಕ್ಕೆ ದೌರ್ಜನ್ಯ ಮಾಡ್ತಿದಾರೆ.. ನೀರಿನ ಟ್ಯಾಂಕಿಗೆ ಮಲ ಸುರ್ದಿದಾರೆ.,ಮೂತ್ರ ಕುಡಿಸಿದಾರೆ, ಬೆಂಕಿ ಹಚ್ಚಿದಾರೆ,
ಭೂಮಿ ಕಸಿದುಕೊಂಡಿದಾರೆ,
ಕೈ ಕಡಿದಿದಾರೆ, ಚಪ್ಪಲಿ ಹಾರ ಹಾಕಿ ವಿಡಿಯೋ ಮಾಡಿದಾರೆ,
ಮೀಸೆ ಬಿಟ್ಟಿದ್ದಕ್ಕೆ ನೇಣು ಹಾಕಿದಾರೆ..
ಬನ್ನಿ ಇದನ್ನು ಹೀಗೇ ಬಿಟ್ಟರೆ ದೇಶಕ್ಕೇ ಕುತ್ತು ಬರುತ್ತೆ ಧರಣಿ ಮಾಡೋಣ ನಮ್ಮ
ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡಿದಾರೆ, ಮೀಸಲಾತಿ ಅರ್ಥ ಕೆಡಿಸ್ತಿದಾರೆ ಬನ್ನಿ ಎಲ್ಲರೂ ಒಂದಾಗಿ ಕೇಳೋಣ.!
ಅಷ್ಟೆ ಯಾಕೆ ಸರ್ ಮಹಾರಾಷ್ಟ್ರದ ಪುಂಡರು ಕರ್ನಾಟಕದ ಬಸ್ಸಿಗೆ ಮಸಿ ಬಳೆದಿದ್ದಾರೆ,ತಮಿಳರು ತೆಲುಗರು,ಮಲಯಾಳಿಗಳು,ರಾಜಸ್ಥಾನ, ಯುಪಿ,ಬಿಹಾರಿ ಬಾಬುಗಳು
ಕನ್ನಡಕ್ಕೆ ಅಪಮಾನ ಮಾಡಿದ್ದಾರೆ,ದೌರ್ಜನ್ಯ ಮಾಡ್ತಿದ್ದಾರೆ ಹಿಂದಿ ಮಾತಾಡಿಲ್ಲ ಅಂತ ಹೊಡೆದಿದ್ದಾರೆ ನಮ್ಮ ಸಾಹಿತ್ಯವನ್ನು ಹದಗೆಡಿಸ್ತಿದಾರೆ ಇತಿಹಾಸ ತಿರುಚ್ತಿದಾರೆ,
ಊಟ ಮಾಡಿದ್ದಕ್ಕೆ, ಪೂಜೆ ಮಾಡಿದ್ದಕ್ಕೆ.. ವಾಚು ಕಟ್ಟಿದ್ದಕ್ಕೆ… ಪ್ರೀತಿ ಮಾಡಿದ್ದಕ್ಕೆ. ಹೊಡೆದು,ಬಡೆದು,ಸಾಯಿಸಿ,ಮರ್ಯಾದೆ ಹತ್ಯೆಗಳನ್ನ ಮಾಡಿ ಮನುಷ್ಯತ್ವವನ್ನೆ ಮರೀತಿದಾರೆ…
ದಯವಿಟ್ಟು ಬನ್ನಿ ನಾವು ಪ್ರತಿಭಟಿಸದಿದ್ದರೆ ಸಂವಿಧಾನಕ್ಕೆ ಅಪಚಾರ ಮಾಡ್ದಂಗಾಗುತ್ತೆ.ಅಂದಾಗೆಲ್ಲ
ಅಯ್ಯೋ ಆಗಲ್ಲರೀ ನಾವು ಸರ್ಕಾರಿ ನೌಕರರು ಅನ್ನು ತ್ತಿದ್ದವರೆಲ್ಲಾ ಇಂದು
ಅಯ್ಯೋ ಈ ವರ್ಷನೂ ನಮ್ಮ ಸಂಬಳ ಜಾಸ್ತಿ ಮಾಡಲ್ವಂತೆ.ಈ ಸರ್ಕಾರಕ್ಕೆ ಬುದ್ದಿ ಇದೆ ಏನ್ರಿ??
ಬನ್ನಿ ಪ್ರತಿಭಟನೆ ಮಾಡೋಣ..
ಎಂಥಾ ಅನ್ಯಾಯಾರಿ ಇದು ಇವತ್ತು ನಾವು ಬಾಯಿಮುಚ್ವಿಕೊಂಡು ಸುಮ್ಮನಿದ್ದರೆ ದೇಶ ಉಳಿಯಲ್ಲ, ನಡೀರಿ ಪ್ರತಿಭಟನೆ ಮಾಡೋಣ…ಕೆಲಸಕ್ಕೆ ಹೋಗದೆ ಮನೆಯಲ್ಲೆ ಉಳಿದು ಸರ್ಕಾರಕ್ಕೆ ಬುದ್ದಿ ಕಲಿಸೋಣ ಅನ್ನುತ್ತಿದ್ದಾರೆ. ಈಗ ಅವರು ಹೇಳುವ ಮಾತೆಂದರೆ ನಮಗೂ ಕುಟುಂಬ ಇದೆ,ನಮ್ಮದೆ ಆದಾಯದ ಅವಲಂಬಿತರಿದ್ದಾರೆ ನಮ್ಮ ಪ್ರತಿಭಟನೆ ಅನಿರ್ದಿಷ್ಟವಾಗಿ ನಡೆಯಲಿದೆ ಅಂತ.
ಇದಕ್ಕಾಗಿ
ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಸಲು ಮಾನ್ಯ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅನಿವಾರ್ಯವಾಗಿ ಆದಾಯ ಹೊಂದಿಸಲು ಬಡ ಮತ್ತು ಮಧ್ಯಮ ವರ್ಗದವರಿಗೆ ಟ್ಯಾಕ್ಸ ಬರೆ ಹಾಕಲಿದೆ.ಮತ್ತೆ ದಿನಬಳಕೆ ವಸ್ತುಗಳ ಬೆಲೆ ಹಚ್ಚಾಗಲಿದೆ.
ಸಂಬಳ ಸಾಲುತ್ತಿಲ್ಲ ಅನ್ನುವವರು ಬೇಕಿದ್ದರೆ ರಾಜಿನಾಮೆ ಕೊಟ್ಟರೆ ಬಹುಶ ನಿರುದ್ಯೋಗಿ ಯುವಕ ಯುವತಿರು,ಪದವೀಧರರು, ಎಸ್ಎಸ್ ಎಲ್ ಸಿಗೆ ಶಿಕ್ಷಣ ಮೊಟಕುಗೊಳಿಸಿದವರು ಇವರಿಗೆ ಕೊಡುವ ಅರ್ಧ ಸಂಬಳದಲ್ಲೆ ದುಡಿಯಲು ಸಿದ್ದರಿದ್ದಾರೆ.
ನನ್ನ ಈ ಮೆಸೆಜ್ ಸರ್ಕಾರಿ ನೌಕರರ ವಿರುದ್ಧವಾಗಲಿ ಅಥವಾ ಅವರ ಕುಟುಂಬವರ ವಿರುದ್ದವಾಗಲಿ ಅಲ್ಲ ಸಂಬಳ ಹೆಚ್ಚಿದ ಮೇಲಾದರೂ ಆದಾಯ ಮತ್ತು ಜಾತಿ ಸರ್ಟಿಫಿಕೇಟ್ ಕೊಡುವಾಗ,ರೈತರ ಗೇಣಿ ಮತ್ತು ಪಹಣಿ ಪತ್ರ ಕೊಡುವಾಗ,ಸರ್ಕಾರಿ ಯೋಜನೆಗೆ ಅರ್ಹ ಫಲಾನುಭವಿಗಳ ಆಯ್ಕೆ ಮಾಡುವಾಗ,ಸರ್ಕಾರದ ಯೋಜನೆಯನ್ನು ಜನಸಾಮಾನ್ಯರಿಗೆ ತಲುಪಿಸುವಾಗ ಎಂಜಲು ಕಾಸಿಗೆ,ಲಂಚಕ್ಕಾಗಿ ಕೈ ಒಡ್ಡದಿರಲಿ ಅಲ್ಲವಾ???
ನಿಮ್ಮ ಸಂಬಳವನ್ನು ಶೇಕಡ ಹದಿನೇಳು,ಇಪ್ಪತ್ತು ಅಥವಾ ನೀವು ಬೇಡಿಕೆ ಇಟ್ಟಷ್ಟು ಹೆಚ್ಚಿಸುವ ಯಾವ ರಾಜಕಾರಣಿಗಳಾಗಲಿ,ಮುಖ್ಯಮಂತ್ರಿ ಅಥವಾ ಸಚೀವರಾಗಲಿ ಅವರ ಮನೆ ಅಥವಾ ಆಸ್ತಿ ಮಾರಿ ನಿಮಗೆ ಸಂಬಳ ಕೊಡುವದಿಲ್ಲ.ನಿಮ್ಮ ಸಂಬಳದ ಹೆಚ್ಚಳವಾದರೆ ಅದು ಬಡವರಿಗೆ,ಮತ್ತು ಮಧ್ಯಮವರ್ಗದವರಿಗೆ ಖಂಡಿತ ಹೊರೆಯಾಗಲಿದೆ,ಗ್ಯಾಸ್,ಪೆಟ್ರೋಲ್, ವಿದ್ಯುತ್ ಮತ್ತು ನಲ್ಲಿ ನೀರಿನ ಬೆಲೆಯ ಜೊತೆಗೆ ಲೀಟರ್ ಹಾಲಿನ ಮೇಲೆಯೂ ಟ್ಯಾಕ್ಸ್ ಹಾಗು ಹೆಚ್ಚಿಸುವ ಮೂಲಕ ನಿಮ್ಮ ಸಂಬಳ ಹೆಚ್ಚಲಿದೆ ಅನ್ನುವದು ನಿಮಗೆ ನೆನಪಿರಲಿ