ಬೆಳಗಾವಿ
ಬೆಳಗಾವಿ:ಅಂಬೇಡ್ಕರ್ ಅವರು ಎಲ್ಲ ಮೇರೆಗಳನ್ನು ಮೀರಿ,ಪ್ರತಿಯೊಬ್ಬರಿಗೂ ಪೂಜನೀಯರು,ಅವರು ನಡೆದ ಮಾರ್ಗ,ಅವರ ಕಾರ್ಯಗಳು,ತತ್ವ, ಆದರ್ಶಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶಕ ಎಂದು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಹೊಸಮನಿ ಅವರು ಹೇಳಿದರು.ಅವರುನಗರ ಕೇಂದ್ರ ಗ್ರಂಥಾಲಯ ಬೆಳಗಾವಿ ಯಲ್ಲಿ 67 ನೇಯ ಪರಿನಿರ್ವಾಣ ದಿನ ನಿಮಿತ್ಯ ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಮಾತನಾಡುತ್ತಿದ್ದರು.
ಅಂಬೇಡ್ಕರ್ ಅವರು ಯಾವಾಗಲೂ ಗ್ರಂಥಾಲಯಗಳಲ್ಲಿ ಸಮಯ ಕಳೆದು,ಉತ್ತಮ ಜ್ಞಾನವಂತರಾಗಿ ಭಾರತದ ಸಂವಿಧಾನದಂತಹ ಮಹಾನ್ ಗ್ರಂಥ ರಚಿಸಲು ಸಾಧ್ಯವಾಯಿತು, ಆದ್ದರಿಂದ ತಾವೆಲ್ಲರೂ ಉತ್ತಮ ಓದುಗರಾಗಿ ಮನೆಗೆ, ಊರಿಗೆ, ದೇಶಕ್ಕೇ ಕೀರ್ತಿ ತನ್ನಿ ಎಂದು ಕರೆನೀಡಿದರು. ಡಿಜಿಟಲ್ ಸಾರ್ವಜನಿಕ ಗ್ರಂಥಾಲಯದ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.
ಉಪನಿರ್ದೇಶಕರಾದ ಶ್ರೀ ರಾಮಯ್ಶಾ ಅವರು ಅಂಬೇಡ್ಕರ ಅವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿ, ನಾವು ಎಲ್ಲರೂ ಸರಿಸಮಾನರು,ಉತ್ತಮ ಬಾಂಧವ್ಯ ಬೆಸೆಯುವ ಕೆಲಸ ಮಾಡೋಣ, ರಾಷ್ಟ್ರ ನಿರ್ಮಾಣದಲ್ಲಿ ನಾವೆಲ್ಲರೂ ಒಂದಾಗೋಣ ಎಂದು ಹೇಳಿದರು. ಇನ್ನೋರ್ವ ಅತಿಥಿಗಳಾಗಿ ಗ್ರಂಥಾಲಯ ಇಲಾಖೆಯ ಆಡಳಿತಾಧಿಕಾರಿಗಳಾದ ಶ್ರೀ ಮನು ಅವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕ ಓದುಗರು,ಮತ್ತು ವಿಧ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಇ ಎನ್ ಅಂಬೇಕರ್ ಕಾರ್ಯಕ್ರಮ ನಿರ್ವಹಿಸಿದರು, ಪ್ರಕಾಶ ಇಚಲಕರಂಜಿ ವಂದಿಸಿದರು.ನಗರ ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿ ಎಲ್ಲ ಸಿಬ್ಬಂದಿ ವರ್ಗ,ವಿದ್ಯಾರ್ಥಿಗಳೂ, ಸಾರ್ವಜನಿಕರು, ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು ,ಮತ್ತು ಈ ಮಹಾನ್ ಚೇತನಕ್ಕೆ ಗೌರವ ಸಲ್ಲಿಸಿದರು.