ವರದಿ: ರಾಜಶೇಖರ ಶೇಗುಣಸಿ
ರಾಯಬಾಗ :ತಾಲೂಕಿನ ಹಾರೂಗೇರಿ ಪಟ್ಟಣದ ಶ್ರೀ ಮಹಾತ್ಮಾ ವಿದ್ಯಾವರ್ಧಕ ಸಂಘ (ರಿ) ಯುನಿವರ್ಸಲ್ ಪ ಪೂ ಕಾಲೇಜು ಹಾಗೂ ಶ್ರೀ ವಿದ್ಯಾಗಂಗಾ ಪ್ರೌಢ ಶಾಲೆ &ಸುಮಧುರ ಕ ಮಾ ಪ್ರಾಥಮಿಕ ಶಾಲೆ ಹಾರೂಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 5-6-2024ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. “ಹಸಿರುಉಳಿಸೋಣ ಗಿಡಮರಗಳ ಬೆಳೆಸೋಣ ಪರಿಸರ ರಕ್ಷಿಸೋಣ ” ಎಂದು ಪ್ರಾಚಾರ್ಯರಾದ ಲಕ್ಷ್ಮಣ ಬಿ ಪಾಟೀಲ ಅಭಿಮತ ವ್ಯಕ್ತಪಡಿಸಿದರು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುನಂದಾ ಕ ಬೀಳಗಿ ಮಾತನಾಡಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಪರಿಸರವು ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಪರಿಸರಕ್ಕೆ ನಮ್ಮೆಲ್ಲರ ಕೊಡುಗೆ ಏನಿದೆ ಎಂಬುದರ ಬಗ್ಗೆ ನಾವೆಲ್ಲ ಆಲೋಚಿಸಿ ಪರಿಸರ ರಕ್ಷಣೆಗಾಗಿ ನಾವೆಲ್ಲರೂ ಸಾವಿರಾರು ಸಸಿ ನೆಡುವುದರೊಂದಿಗೆ ಪರಿಸರ ರಕ್ಷಣೆ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಶಿಕ್ಷಣ ಪ್ರೇಮಿಗಳಾದ ಶ್ರೀ ಮಲಗೌಡ ಪಾಟೀಲ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ‘ಸಕಲ ಜೀವರಾಶಿಗಳಿಗೆ ವಾಸಿಸಲು ಯೋಗ್ಯವಾಗಿರುವ ಈ ಪರಿಸರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ’ಎಂದು ಹೇಳಿದರು.
ವಿಶ್ವ ಪರಿಸರ ದಿನವನ್ನು “ಜಾಗೃತ ದಿನ”ವೆಂದೇ ಕರೆಯಲಾಗುವ ಪರಿಸರ ಕಾಳಜಿಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಆಚರಿಸಲಾಗುತ್ತಿದೆ ನಮಗೆ ಪರಿಸರವಾದಿ ಸಾಲುಮರದ ತಿಮ್ಮಕ್ಕನವರ ಸಾಧನೆ ಸ್ಫೂರ್ತಿಯಾಗಿದೆ. ಸಾಲುಮರದ ತಿಮ್ಮಕ್ಕ ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಪರಿಸರ ಪ್ರೇಮಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಪಾಲನೆ ಮಾಡಿದ ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಹಾಗೂ ಪದ್ಮಶ್ರೀ ಪ್ರಶಸ್ತಿ ಪಡೆದ ಸಾಲುಮರದ ತಿಮ್ಮಕ್ಕನ ಸಾಧನೆ ನಮಗೆಲ್ಲ ಸ್ಫೂರ್ತಿ ಅವರನ್ನು ನಾವೆಲ್ಲ ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಕಾರ್ಯಕ್ರಮದಲ್ಲಿಮುಖ್ಯಗುರುಗಳಾದ ಶ್ರೀ ಎಮ್ ಬಿ ಒಡೆಯರ, ಪ್ರಧಾನ ಗುರುಗಳಾದ ಶ್ರೀ ಬಿ ಕೆ ಕೊಡಗಾನೂರ, ಶ್ರೀಮತಿ ವಿದ್ಯಾ ಮಸ್ಕೆ, ಶ್ರೀಮತಿ ದೀಪಕುಮಾರಿ ಟಿ ಪಿ,ವಿದ್ಯಾರ್ಥಿಗಳು ಹಾಗೂ ಉಪಸ್ಥಿತರಿದ್ದರು ಪ್ರೊ ಗೋಪಾಲ ಜಾಧವ ನಿರೂಪಿಸಿದರು ಎನ್ ಎಸ್ ಎಸ್ ಕಾರ್ಯಕ್ರಮಧಿಕಾರಿ ಶ್ರೀ ಎಲ್ ಬಿ ಘಂಟಿ ವಂದಿಸಿದರು.