ಬೆಳಗಾವಿ, ರಾಯಬಾಗ
ವರದಿ :ಶ್ರೀನಾಥ ಶಿರಗೂರ
ಪರಮಾನಂದವಾಡಿ :ಮುಂಬರುವ ತಾಲೂಕ ಪಂಚಾಯತ, ಜಿಲ್ಲಾ ಪಂಚಾಯತ ಹಾಗೂ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಬಗ್ಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದ ವಿದ್ಯುನ್ಮಾನಗಳ ಬಗ್ಗೆ ಚರ್ಚಿಸಿ ಪ್ರತಿಯೊಬ್ಬರು ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಭೂತ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು. ಗ್ರಾಮಸ್ಥರ ಮನೆಗಳಿಗೆ ಭೇಟಿಕೊಟ್ಟು ಜನರಿಗೆ ಬಿಜೆಪಿ ಪಕ್ಷದ ಸಾಧನೆ ದೇಶದಲ್ಲಿ ಆಗಿರುವ ಬದಲಾವಣೆ ದೇಶಕ್ಕೆ ಮೋದಿಜೀ ಅವರ ನೀಡಿರುವ ಕೊಡುಗೆಗಳನ್ನು ಪ್ರತಿಯೊಬ್ಬರಿಗೆ ಮನ ಮುಟ್ಟುವಂತೆ ಜಾಗೃತಿ ವಹಿಸಬೇಕು. ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ಯಾವುದೇ ವ್ಯಕ್ತಿಗೆ ಯಾವುದೇ ಸೌಲಭ್ಯಗಳು ದೊರಕದೇ ಇದ್ದಲ್ಲಿ ಅಂತಹ ಸೌಲಭ್ಯಗಳನ್ನು ಒದಗಿಸುವ ಕ್ರಮ ಕೈಗೊಳ್ಳಬೇಕು. ಮೇಲಿಂದ ಮೇಲೆ ಬೂತ್ ಮಟ್ಟದ ಕಾರ್ಯಕರ್ತರನ್ನು ಸಭೆ ಕರೆದು ಎಲ್ಲರಿಗೂ ಪ್ರತಿಯೊಂದು ಪ್ರತಿಯೊಬ್ಬ ಕಾರ್ಯಕರ್ತರಿಗೆ ಒಂದೊಂದು ಜವಾಬ್ದಾರಿಯನ್ನು ವಹಿಸಬೇಕು ಯಾವುದೇ ಸಮಯದಲ್ಲಿ ಏನಾದರೂ ಕುಂದು ಕೊರತೆಗಳಿದ್ದರೆ ಸದಾ ನನ್ನನು ಸಂಪರ್ಕಿಸಿ ಹಾಗೂ ಈ ಎಲ್ಲ ಜವಾಬ್ದಾರಿಯನ್ನು ಕಾರ್ತಿಕ ಪಾಲಭಾವಿ ಅವರು ವಹಿಸಿಕೊಂಡು ತಮ್ಮ ಮುಂದಾಳತ್ವದಲ್ಲಿ ಕಾರ್ಯಕರ್ತನು ವಿಶ್ವಾಸಕ್ಕೆ ತೆಗೆದುಕೊಂಡು ಬೂತ ಮಟ್ಟದ ಪದಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಇನ್ನೂ ಹೆಚ್ಚಿಗೆ ತಳಮಟ್ಟದಿಂದ ಬಿಜೆಪಿ ಪಕ್ಷವನ್ನು ಬಲಪಡಿಸಿ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಕೆಲಸ ಮಾಡಬೇಕು ಎಂದು ಮಾಜಿ ಲೋಕಸಭಾ ಸದಸ್ಯ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಹೇಳಿದರು.
ಅವರು ಸಮೀಪದ ಖೇಮಲಾಪೂರ ಗ್ರಾಮದ ತೋಟದಲ್ಲಿ ಇರುವ ಪಾಲಭಾವಿ ಅವರ ತೋಟಕ್ಕೆ ಭೇಟಿ ನೀಡಿ ಬಿಜೆಪಿ ಪಕ್ಷದ ಪದಾಧಿಕಾರಿಗಳ ಸಭೆ ಕರೆದು ಪಕ್ಷದ ಬಲವರ್ಧನೆಗೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.