ಬೆಳಗಾವಿ
ವರದಿ:ಸಂಜು ಬ್ಯಾಕುಡೆ. ಕುಡಚಿ
ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಅಜಿತ ಬಾನೆ ಪ್ರಾಥಮಿಕ ಶಾಲೆ ಹಾಗೂ ಹೊಸ ಪ್ರೌಢಶಾಲೆ ಸಂಯುಕ್ತಾಆಶ್ರಯದಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಸಂಸ್ಥೆಯ ನಿರ್ದೇಶಕಿ ರಕ್ಷಿತಾ ಘಾಟಗೆ ಸಂಸ್ಥೆಯಿಂದ ಆಧುನಿಕ ತಂತ್ರಜ್ಞಾನದ ಜೊತೆಗೆ ಒಳ್ಳೆಯ ಶಿಕ್ಷಣ ನೀಡಲು ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಕಾರ್ಯನಿರತರಾಗಿದ್ದು ಪಾಲಕರು ಸಹಕರಿಸಬೇಕು. ನಾವು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದರಿಂದ ಉತ್ತಮ ಆರೋಗ್ಯ ಹಾಗೂ ಬುದ್ಧಿ ಶಕ್ತಿ ಹೊಂದಬಹುದಾಗಿದೆ ವಿದ್ಯಾಭ್ಯಾಸದಿಂದ ಅಷ್ಟೇ ಅಲ್ಲ ನಾವು ಕ್ರೀಡೆಯಿಂದಲು ಒಳ್ಳೆಯ ಜೀವನ ರೂಪಿಸಿಕೊಳ್ಳಬಹುದು ಎಂದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇದೆ ಸಮಯದಲ್ಲಿ ಒತ್ತಕ್ಷರಗಳಿಲ್ಲದ ಕೃತಿಗೆ ವಿವಿಧ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಹಾಗೂ ವಿಶ್ವ ದಾಖಲೆ ಪ್ರಶಸ್ತಿ ಪಡೆದ ಮಕ್ಕ ಸಾಹಿತಿ ಡಾ. ಲಕ್ಷ್ಮಣ ಚೌರಿಯವರನ್ನು ಕಮತೆ ಹಾಗೂ ಇತರ ವಿದ್ಯಾರ್ಥಿಗಳಿಂದ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಸಾಗರ ಘಾಟಗೆ, ಕಾರ್ಯದರ್ಶಿ ಸುಭಾಷ್ ಕುಸನಾಳೆ, ಬಸವರಾಜ ಭಜಂತ್ರಿ, ಪ್ರಾಚಾರ್ಯರಾದ ಎಂ.ಎನ.ದಾನಣ್ಣವರ, ಮಕ್ಕಳ ಸಾಹಿತಿ ಡಾ.ಎಲ.ಎಸ.ಚೌರಿ, ಎ.ಎಸ.ಟೊಣ್ಣೆ, ಬಾಬಾಲಾಲ ಪಿನಿತೋಡ, ಆಶಾ ಗಾಡಿವಡ್ಡರ, ಪ್ರಕಾಶ್ ವಂಟಗೂಡೆ, ಶಿಕ್ಷರು ವಿದ್ಯಾರ್ಥಿಗಳು, ಪಾಲಕರು ಭಾಗಿಯಾಗಿದ್ದರು.
ಕಾರ್ಯಕ್ರಮವನ್ನು ಹೊನ್ನಾಕಟ್ಟಿ ಸರ ನಿರೂಪಿಸಿದರು.