ಬೆಳಗಾವಿಯಲ್ಲಿ ಇಂದು ಲಿಂಗಾಯತ ಧರ್ಮ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ದಳದ ವತಿಯಿಂದ ಮಹಾದಂಡನಾಯಕರ ಸಂಸ್ಮರಣೆ ಹಾಗೂ ಲಿಂಗಾಯತ ಧರ್ಮ ಚಿಂತನ ಗೋಷ್ಠಿ ಕಾರ್ಯಕ್ರಮ ನಡೆಸಲಾಯಿತು.
ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಪರಮಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಸ್ಮರಣಾರ್ಥ ಲಿಂಗಾಯತ ಧರ್ಮ ಚಿಂತನ ಗೋಷ್ಠಿ ಕಾರ್ಯಕ್ರಮವನ್ನು ಸಂಭ್ರಮದಿಂದ ನಡೆಸಲಾಯಿತು. ಈ ಸಂದರ್ಭದಲ್ಲಿ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಗುರುತಿಸುವುದು, ಪ್ರಶಸ್ತಿ ವಿತರಣೆ ಹಾಗೂ ವಿವಿಧ ಪುಸ್ತಕಗಳ ಪ್ರಕಟಣೆ ಕುರಿತು ವಿಚಾರ ಸಂಕಿರಣ ನಡೆಯಿತು. ಬೆಂಗಳೂರಿನ ಕುಂಬಳಗೋಡು ಚನ್ನಬಸವೇಶ್ವರ ಜ್ಞಾನಪೀಠದ ಅಧ್ಯಕ್ಷ ಡಾ. ಚನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.
ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಪರಮಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಅವರಿಂದಾಗಿ ಬಸವತತ್ವದ ಪ್ರಚಾರ, ಅದ್ಧೂರಿಯಾಗಿ ನಡೆದಿದೆ ಎಂದರು. ಅವರನ್ನು ಸ್ಮರಿಸುವುದಕ್ಕಾಗಿ ಈ ಚಟುವಟಿಕೆಯನ್ನು ಮಾಡಲಾಯಿತು. ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಯುತ್ತಿರುವ ಹಿನ್ನಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಬೆಳಗಾವಿಯಲ್ಲಿ ಮಹಾದಂಡನಾಯಕ ಸ್ಮರಣೋತ್ಸವ ಹಾಗೂ ಲಿಂಗಾಯತ ಧರ್ಮ ಚಿಂತನ ಗೋಷ್ಠಿ ಕಾರ್ಯಕ್ರಮಗಳು ನಡೆಯುತ್ತಿವೆ. ಇಂದು ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗಾವಿ, ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳ ಲಿಂಗಾಯತ ಬಂಧುಗಳು ಉಪಸ್ಥಿತರಿದ್ದರು.
ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ಆನಂದ ಗುಡಾಸ್ ಮಾತನಾಡಿ, 21ನೇ ಶತಮಾನದ ಆರಂಭದಲ್ಲಿ ಪರಮಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿಯವರಿಂದಾಗಿ ದೇಶ ವಿದೇಶಗಳಲ್ಲಿ ಬಸವತತ್ವದ ಪ್ರಚಾರ, ಪ್ರಸಾರ ವ್ಯಾಪಕವಾಗಿ ಹರಡಿತ್ತು. ಅವರಿಂದಲೇ ಲಿಂಗಾಯತ ಧರ್ಮಕ್ಕೆ ನಿಜವಾದ ಮನ್ನಣೆ ದೊರೆತಿದೆ. ಹಾಗಾಗಿ ಅವರನ್ನು ಸ್ಮರಿಸುವುದು ಲಿಂಗಾಯತ ಸಮುದಾಯದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಅದಕ್ಕಾಗಿಯೇ ರಾಷ್ಟ್ರೀಯ ಬಸವದಳ ಇಂದು ಅವರ ಪುಣ್ಯಸ್ಮರಣೆಯನ್ನು ಹಮ್ಮಿಕೊಂಡಿದೆ.
ಈ ಸಂದರ್ಭದಲ್ಲಿ ಸತ್ಯದೇವಿ ಮಾತೆಯ ಆಶೀರ್ವಚನ ನಡೆಯಿತು. ಲಿಂಗಾಯತ ಧರ್ಮ ಸಂಘರ್ಷ ಸಮಿತಿ ರಾಷ್ಟ್ರೀಯ ಸಂಯೋಜಕ ಅವಿನಾಶ ಭೂಷಿಕರ, ಬಸವ ಸೇವಾದಳದ ಅಧ್ಯಕ್ಷ ಶಂಕರ ಗುಡಸ್ , ಮಹಾಂತೇಶ ತೋರಣಗಟ್ಟಿ, ಅಶೋಕ ಭೆಂಡಿಗೇರಿ ಮೊದಲಾದವರು ಉಪಸ್ಥಿತರಿದ್ದರು.