ಕಣಕುಂಬಿ ಗೋವಾದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 27,52,398 ರೂ ಮೌಲ್ಯದ ಮದ್ಯ ಹಾಗೂ 25ಲಕ್ಷದ ಮೌಲ್ಯದ ಟ್ರಕ್ ವಶಕಳ್ಳತನಕ್ಕೆ ನೂರಾರು ದಾರಿ ನಾವು ಎಲ್ಲಿಬೇಕಾದರೂ ಮುಚ್ಚಿಕೊಂಡು ಅಕ್ರಮ ಮದ್ಯ ಸಾಗಾಟ ಮಾಡುತೇವೆ ಎಂದು ತಿಳಿದುಕೊಂಡು ಬರುವವರಿಗೆ ಕಾದಿತ್ತು ದೊಡ್ಡ ಶಾಕ್ ಖಾನಾಪೂರ ಪ್ರವೇಶದ ಕಣಕುಂಬಿ ಬಳಿ ಇರುವ ಚೆಕ್ ಪೋಸ್ಟ್ ನಲ್ಲಿ
ಗೋವಾದಿಂದ ಅಕ್ರಮ ಮದ್ಯ ಸಾಗಿಸುತ್ತಿದ್ದ ಲಾರಿಯೊಂದು ಖಾನಾಪೂರ ತಾಲೂಕಿನ ಕಣಕುಂಬಿ ಬಳಿಯ ಅಬಕಾರಿ ಚೆಕ್ ಪೋಸ್ಟ್ ಬಳಿ ಸಿಕ್ಕಿಬಿದ್ದಿದೆ.ಇದರಲ್ಲಿ 2752398 ಮೌಲ್ಯದ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ಟ್ರಕ್ ಮೌಲ್ಯ 250000 ಲಕ್ಷದ ವರೆಗೆ ಎಂದು ಅಂದಾಜಿಸಲಾಗಿದ್ದು ಒಟ್ಟಿನಲ್ಲಿ 5252398 ಲಕ್ಷದಷ್ಟು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲಾ ಅಬಕಾರಿ ಆಯುಕ್ತ ಮಂಜುನಾಥ್ ಅವರಿಗೆ ಅಕ್ರಮ ಮದ್ಯ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರಿಗೆ ಇದನ್ನು ಗಂಭೀರವಾಗಿ ಪರಿಗಣಿಸಿದ ಅವರು ಖಾನಾಪೂರ ಮತ್ತು ಬೆಳಗಾವಿಯಿಂದ ಅಬಕಾರಿ ಇಲಾಖೆ ಅಧಿಕಾರಿಗಳ ತಂಡವನ್ನು ಕಣಕುಂಬಿ ಬಳಿಯ ಇರುವ ಚೆಕ್ ಪೋಸ್ಟ್ ಬಳಿ ಇರುವ ವಾಹನಗಳನ್ನು ಪರಿಶೀಲನೆ ನಡೆಸಲು ಆದೇಶಿಸಿದರು ಅದರಂತೆಯೇ ಒಂದು ಲಾರಿಯನ್ನು ಪರಿಶೀಲನೆ ನಡೆಸಿದಾಗ ಲಾರಿಯ ಹಿಂಬದಿ ಟ್ಯಾಂಕ್ ನಲ್ಲಿ ಪಾಕೆಟ್ ಗಳು ಪತ್ತೆಯಾದವು ಈ ಕಂಪಾರ್ಟ್ ಮೆಂಟ್ ನಲ್ಲಿ ಅಪಾರ ಪ್ರಮಾಣದ ಮದ್ಯವನ್ನು ಬಚ್ಚಿಟ್ಟಿದ್ದರು ಆದರೆ ಈ ಕಂಪಾರ್ಟ್ ಮೆಂಟ್ ವೆಲ್ಡಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ ತದನಂತರದಲ್ಲಿ ಖಾನಾಪೂರ ಅಬಕಾರಿ ಕಚೇರಿಗೆ ಈ ಟ್ರಕ್ ತೆಗೆದುಕೊಂಡು ಹೋಗಿ ಜೆಸಿಬಿಯ ಸಹಾಯಕದ ಮೂಲಕ ಲಾರಿಯ ಹಿಂಭಾಗದ ವಿಭಾಗವನ್ನು ತೆರೆಯಲಾಯಿತು.ಇದರಲ್ಲಿ ಇರುವ ಅಕ್ರಮ ಮದ್ಯ ವಶಪಡಿಸಿಕೊಂಡು ಚಾಲಕ ಮತ್ತು ಕ್ಲೀನರ್ ಇಬ್ಬರನ್ನು ಬಂಧಿಸಿ ಖಾನಾಪೂರದ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.ಈ ಕಾರ್ಯಾಚರಣೆಯಲ್ಲಿ ಬೆಳಗಾವಿ ಮತ್ತು ಖಾನಾಪೂರದ ಅಬಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.