ಭ್ರಷ್ಟತೆಯ ವಿಚಾರವಾಗಿ ಪಾಲಿಕೆ ಅಧಿಕಾರಿಯ ಮನೆಗಳ ಮೇಲೆ ಲೋಕಾಯುಕ್ತ ದಾಳಿ

Share the Post Now

ಬೆಳಗಾವಿ : ಗುರುವಾರ ದಿನಾಂಕ 17/08/2023 ರಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ

ಸಂತೋಷ ಆನಿಶೆಟ್ಟರ ಅವರ ಧಾರವಾಡದ ಮತ್ತು ಬೆಳಗಾವಿಯ ಮನೆ ಮೇಲೆ ಬೆಳಿಗ್ಗೆನೆ ಲೋಕಾಯುಕ್ತರು ದಾಳಿಯನ್ನು ನಡೆಸಿದ್ದಾರೆ..

ಧಾರವಾಡದ ಸಪ್ತಾಪೂರದ ಮಿಚಿಗನ್ ಲೇಔಟ್ ನಲ್ಲಿರುವ ಮನೆಯಲ್ಲಿ ಇಲಾಖೆ ಶೋಧಕಾರ್ಯ ನಡೆಸಿದ್ದು, ಈ ವೇಳೆ ಮಹತ್ವದ ದಾಖಲೆಗಳು ಲಭಿಸಿರುವ ಬಗ್ಗೆ ಮಾಹಿತಿ ದೊರಕಿದೆ..

ಸಂತೋಷ ಆನಿಶೆಟ್ಟಿ ಅವರ ಬೆಳಗಾವಿಯ ಮನೆಯಲ್ಲಿ ಪರಿಶೀಲನೆ ಮಾಡಲಾಗಿ, ಈ ವೇಳೆ ಹಲವು ಬ್ರ್ಯಾಂಡ್ ನ ಮದ್ಯದ ಬಾಟಲಿ ಪತ್ತೆ ಆಗಿದ್ದು,

ಬೆಳಗಾವಿಯ ಸುಭಾಷ್ ನಗರದ ಅಪಾರ್ಟ್ಮೆಂಟ್‌ನಲ್ಲಿ

ಬ್ಲ್ಯಾಕ್ ಆ್ಯಂಡ್ ವೈಟ್, ರಾಯಲ್ ಸ್ಟ್ಯಾಗ್, ಹಾಗೂ ಹಲವು ತಂಪು ಪಾನೀಯ ಬಾಟಲಿ ಪತ್ತೆಯಾಗಿವೆ, ಇವುಗಳ ಜೊತೆ

ದುಬಾರಿ ಬೆಲೆಯ ವಿದೇಶಿ ಬ್ರ್ಯಾಂಡನ ಬೆಲ್ಟ್‌ಗಳು ಹಾಗೂ ಆಸ್ತಿ ಪತ್ರಗಳು ಪತ್ತೆ‌ಯಾಗಿವೆ..

ಲೋಕಾಯುಕ್ತ ಪಿಐ ಉಸ್ಮಾನ್ ಅವರ ನೇತೃತ್ವದಲ್ಲಿ, ಲೋಕಾಯುಕ್ತ ಸಿಬ್ಬಂದಿಗಳ ಜೊತೆಯಾಗಿ ಶೋಧಕಾರ್ಯ ಮುಂದುವರೆದಿದೆ..

Leave a Comment

Your email address will not be published. Required fields are marked *

error: Content is protected !!