ಬೆಳಗಾವಿ
ವರದಿ :ಸಿದ್ದರೋಡ,ಬಣ್ಣದ
ಮಾರ್ಚ್ 1 ರಿಂದ 21ರ ವರಗೆ ಮನೆಗೊಂದು ಸಸಿ ವಿತರಣ ಅಭಿಯಾನ, ಧಾರ್ಮಿಕ ಜಾಗೃತಿ ಪಾದಯಾತ್ರೆ, ಯೋಗ ಮತ್ತು ತತ್ವಾಮೃತ ಪ್ರವಚನ..
ಬೆಳಗಾವಿ :ಜಿಲ್ಲೆಯಅಥಣಿ ತಾಲೂಕಿನ ರಡ್ಡೆರಹಟ್ಟಿ ಗ್ರಾಮದ ಮಟ್ಟಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಾರ್ಚ್ 1ರಿಂದ 21 ರ ವರೆಗೆ ಪ್ರತಿದಿನ ಸಂಜೆ 7ರಿಂದ 8.30 ಗಂಟೆವರೆಗೆ ಬೃಹತ್ತ ಪ್ರಮಾಣದಲ್ಲಿ ಪರಮ ಪೂಜ್ಯ ಸದ್ಗುರು ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಷಣ್ಮೂಖಾರೂಢಮಠ ವಿಜಯಪುರ, ಶಾಂತಾಶ್ರಮ ಹುಬ್ಬಳ್ಳಿ ಇವರ ಸಯುಕ್ತ ಅಶ್ರಯದಲ್ಲಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ.
ಐತಿಹಾಸಿಕ ಹುಬ್ಬಳ್ಳಿ ಮಹಾನಗರದಲ್ಲಿ ನಿರ್ಮಾಣಗೊಂಡ ಅರೂಢಜ್ಯೋತಿ ಶ್ರೀ ಶಿವಪುತ್ರ ಸ್ವಾಮಿಗಳ ಹಾಗೂ ಆರೂಢ ಚೇತನ ಶ್ರೀಮತ್ ಅಭಿನವ ಶಿವಪುತ್ರ ಸ್ವಾಮಿಗಳ ಸಮಾಧಿಮಂದಿರ ಮತ್ತು ದ್ವಾದಶ ಜ್ಯೋತಿರ್ಲಿಂಗ ಹಾಗೂ ಶ್ರೀ ಸಿದ್ಧಾರೂಢ ಸ್ವಾಮಿ ಅರ್ಟಗ್ಯಾಲರಿ ಲೋಕಾರ್ಪಣ ಸಮಾರಂಭದ ನಿಮಿತ್ತ ಮನೆಗೊಂದು ಸಸಿ ವಿತರಣ ಅಭಿಯಾನ ಧಾರ್ಮಿಕ ಜಾಗೃತಿ ಪಾದಯಾತ್ರೆ ಯೋಗ ಮತ್ತು ತತ್ವಾಮೃತ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಆದರಿಂದ ಅಥಣಿ ತಾಲೂಕಿನ ಸಮಸ್ತ ಭಕ್ತಾಧಿಗಳು ಈ ಬೃಹತ್ತ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮಕ್ಕೆ ಶೋಭೆತರಬೇಕೆಂದು ಹೇಳಿದ್ದಾರೆ