ಮಾದನ ಹಿಪ್ಪರಗಿ ಗ್ರಾಮವು ಪುಣ್ಯ ಪುರುಷರ ನಾಡು ಮಾಳಿ ಮಾಲಗಾರ ಸಮಾಜದ ಅಧ್ಯಕ್ಷ ಕಾಡು ಮಾಳಿ

Share the Post Now


ಮಾದನಹಿಪ್ಪರಗಿ: ಕಲ್ಯಾಣ ಕರ್ಣಾಟಕದಲ್ಲಿ ಸಾಕಷ್ಟು ಮಹಾತ್ಮರು ಜನಿಸಿದ ಪುಣ್ಯ ಪುರುಷರ ನಾಡು ಜಾತ್ರೆ ದಾರ್ಮಿಕ ಕಾರ್ಯಕ್ರಮಗಳು ಬಾಂಧವ್ಯ ಬೆಸೆಯುವ ಅಸ್ತ್ರವಾಗಿದೆ ಭಕ್ತಿಯಿಂದ ಮಹಾತ್ಮರ ಮಾತುಗಳನ್ನು ಕೇಳಿದರೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆತು ಜೀವನವು ಸುಖಮಯವಾಗಿರುತ್ತದೆಂದು ಮಾಳಿ,ಮಾಲಗಾರ ಸಮಾಜದ ರಾಜ್ಯಾಧ್ಯಕ್ಷ ಕಾಡು ಮಾಳಿ ಹೇಳಿದರು.


ಅವರು ಕಲ್ಯಾಣ ನಾಡಿನ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಿಯಲ್ಲಿ ನಡೆದ ಸಂಗಮೇಶ್ವರ ಹಾಗೂ ಖಂಡೇಶ್ವರ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆ ಹಾಗೂ ಕಳಸಾರೋಹಣ, ಅಕ್ಕಮಹಾದೇವಿ, ನಂದಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಜರುಗುತ್ತಿರುವ  ಬಸವ ಮಹಾಪುರಾಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿಬಾಗವಹಿಸಿ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಕೆಲವೊಂದು ಕಡೆ ಪುರಾಣ ಪ್ರವಚನ ಅಧ್ಯಾತ್ಮದ ಕಡೆಗೆ ಲಕ್ಷ್ಯ ಕೊಡದೆ ಟಿವಿ ಮೋಬೈಲ್ ಫೋನುಗಳ ಮಾರುಹೋಗಿ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ.ಮಾದನ ಹಿಪ್ಪರಗಿಯಲ್ಲಿ ಸಹಸ್ರಾರು ಭಕ್ತರು ಕೂಡಿದ್ದು ನೋಡಿದರೆ ಹೆಮ್ಮಯ ಸಂಗತಿಯಾಗಿದೆ ಎಂದು ಹೇಳಿದರು.


ಮುಖಂಡರಾದ ಡಾ ಸಿ ಬಿ ಕೂಲಿಗೊಡ ಮಾತನಾಡಿ
ಮನುಷ್ಯನಿಗೆ ಪುರಾಣ ಪ್ರವಚನಗಳು, ಗುರುಗಳ ಹಿತನುಡಿಗಳು ಮನದಲ್ಲಿ ಭದ್ರವಾಗಿ ನೆಲೆಸಲು ಮಹಾತ್ಮರ ಕೃಪೆಗೆ ಪಾತ್ರರಾದರೆ ಮನಸ್ಸು ದುರ್ಬಲವಾಗುತ್ತದೆ.
ದುಶ್ಚಟಗಳಿಂದ ಶರೀರ ಮತ್ತು ಸಂಸಾರ ನಾಶವಾಗುತ್ತದೆ. ವ್ಯಕ್ತಿಯ ಜೀವನ ಪೂರ್ಣಗೊಳ್ಳಲು ತಾಯಿಯ ಜೋಗುಳ ತಂದೆಯ ಬೈಗುಳ ಗುರುವಿನ ಆಶೀರ್ವಾದ  ಇರಲೇಬೇಕು ಮನಸ್ತಾಪವಿಲ್ಲದೆ, ನಂಬಿಕೆ ಪರಸ್ಪರ ಪ್ರೇಮದಿಂದ ಕೂಡಿ ಬಾಳುವ ಮನೆ ಸ್ವರ್ಗಕ್ಕೆ ಸಮಾನ. ಗುರುಗಳ ಮಹಾತ್ಮರ ಮನ ಗೆದ್ದಿರುವ ಮಾದನಹಿಪ್ಪರಗಿಯ ಭಕ್ತರು ನಿಜಕ್ಕೂ ಧನ್ಯರು. ಇಂತಹ ಆಧ್ಯಾತ್ಮಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ತಾವುಗಳು ಪುಣ್ಯವಂತರು ಎಂದು ಬಣ್ಣಿಸಿದರು.


ಅಭಿನವ ಶಿವಲಿಂಗ ಮಹಾಸ್ವಾಮಿಗಳು ಮಾದನ ಹಿಪ್ಪರಗಿ.ಶಾಂತವೀರ ಶಿವಾಚಾರ್ಯ ಮಹಾ  ಸ್ವಾಮೀಜಿಗಳು ಮಾದನ ಹಿಪ್ಪರಗಿ.ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಮೂರು ಸಾವಿರ ಮಠ ಉಪ್ಪಿನ ಬೆಟಗೇರಿ.
ಗುರುಶಾಂತೇಶ್ವರ ಹಿರೇಮಠದ ಶಿವಾಚಾರ್ಯರು, ಶಿವಲಿಂಗೇಶ್ವರ ವಿರಕ್ತ ಮಠದ ಅಭಿನವ ಶಿವಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು.


ಕೇರೂರ ದರ್ಗಾಶಿರೂರ, ಮದಗುಣಕಿ, ಝಳಕಿ, ಚಲಗೇರಾ ಹಡಲಗಿ, ನಿಂಗದಳ್ಳಿ ಮೈಂದರಗಿ, ಅಕ್ಕಲಕೋಟ್ ಸುತ್ತ
ಮುತ್ತಲಿನ ಅನೇಕ ಗ್ರಾಮಗಳ ಸಾವಿರಾರು ಜನ ಸೇರಿದ್ದರು. ಈ ಸಮಯದಲ್ಲಿ ದೇವಸ್ಥಾನ ಕಮಿಟಿ ಅಡ್ಯಕ್ಷ ಸಾತಪ್ಪ ಕೊಳಶೆಟ್ಟಿ.ಕಾರ್ಯದರ್ಶಿ ಮಲ್ಲಿನಾಥ ಬಂಬಾಸೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಪತ್ರಕರ್ತ ಮುರಿಗೆಪ್ಪ ಮಾಲಗಾರ,ಮುಖಂಡರಾದ ಪಂಡಿತ ಶೇರಕಾರ .ಸುಭಾಸ ಬಳುರಗಿ.ಸಂಜು ಅಥಣಿ.ಸದಾಶಿವ ಹೊಸಮನಿ.ಮಹಾಂತೇಶ ಮಾಳಿ.ಮಾದೇವ ಹೊಸಟ್ಟಿ.ರಾಜೇಂದ್ರ ಮಾಳಿ ಸಿದ್ಧಪ್ಪ ಹಡಲಗಿ ಕೆ ಎಸ್ ಆರ್ ಟಿ ಸಿ.ಮಲ್ಲಿನಾಥ ಪ್ಯಾಟಿ ಶಿಕ್ಷಕ.ಬಸವರಾಜ ಪ್ಯಾಟಿ.ಶಿವಲಿಂಗ ಪೆರೆನಿ ಸಾತಪ್ಪ ಕೋಳಶೆಟ್ಟಿ ಮಲ್ಲಿಕಾರ್ಜುನ ವನದೆ.ಸಿದ್ದರಾಮ ತೋಳನೂರ, ವಿಶ್ವನಾಥ ಪರೇಣಿ,  ಬಸವರಾಜ ಪ್ಯಾಟಿ ಮುಂತಾದ ಮುಖಂಡರುಗಳು ಇದ್ದರು.

Leave a Comment

Your email address will not be published. Required fields are marked *

error: Content is protected !!