ವರದಿ: ಪ್ರೊ ರಾಜಶೇಖರ ಶೇಗುಣಸಿ.
ಹರ್ಷಗೊಂಡ ವಿದ್ಯಾರ್ಥಿಗಳು, ಸಿಹಿ ಹಂಚಿದ ಪಾಲಕರು, ಶುಭ ಹಾರೈಸಿದ ಸಿಬ್ಬಂದಿ ವರ್ಗ.
ಬೆಳಗಾವಿ.
ಮುಗಳಖೋಡ : ಪ್ರಸಕ್ತ ಸಾಲಿನ ಎಸ.ಎಸ.ಎಲ್.ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ಇದರಲ್ಲಿಯೂ ಹೆಣ್ಣು ಮಕ್ಕಳ ಸಾಧನೆಯೇ ಅಪಾರವಾಗಿದೆ. ಹೆಣ್ಣು ಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲ ಎಂಬುದು ಮತ್ತೆ ಸಾಧಿಸಿ ತೋರಿಸಿದ್ದಾರೆ.
ಅದರಂತಯೇ ಪಟ್ಟಣದ ಬ. ನೀ. ಕುಲಿಗೋಡ ಪ್ರೌಢ ಶಾಲೆಯ ವಿದ್ಯಾರ್ಥಿಗಳು 2025ರ ಫಲಿತಾಂಶದಲ್ಲಿಯೂ ಸಹ ಹೆಚ್ಚು ಜನ ವಿದ್ಯಾರ್ಥಿನಿಯರೇ ಶ್ರೇಷ್ಠತೆಯ ಸ್ಥಾನದಲ್ಲಿ ತೇರ್ಗಡೆಯಾಗಿರುವುದು ವಿಶೇಷವಾಗಿದೆ.
ಇಲ್ಲಿಯ ಒಟ್ಟು 194 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 163 ಜನ ತೆರ್ಗಡೆ ಹೊಂದಿ ಒಟ್ಟು ಶಾಲೆಯ ಫಲಿತಾಂಶ 84.04% ರಷ್ಟಾಗಿದೆ.
ಇದರಲ್ಲಿ ಕುಮಾರಿ ಮಧುರಾ ಪ್ರಕಾಶ ಮಗದುಮ್ಮ 622 ಅಂಕ ಪಡೆದು 99.52% ರಷ್ಟು ಫಲಿತಾಂಶ ಹೊಂದಿ ಶಾಲೆಗೆ ಪ್ರಥಮ ಸ್ಥಾನ ಪಡೆಯುವುದರ ಜೊತೆಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದು ರಾಜ್ಯದ ಗಮನ ಶಾಲೆಯತ್ತ ಸೆಳೆಯುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾಳೆ.
ಅದರಂತೆ ಕುಮಾರಿ ಕಾವೇರಿ ಮಹಾಲಿಂಗ ಮೂಶಿ 613 ಅಂಕ ಪಡೆದು 98.08% ದ್ವಿತೀಯ ಸ್ಥಾನ, ಲಕ್ಮೀಭಾಯಿ ಲಕ್ಷ್ಮಣ ಸಪ್ತಸಾಗರ 611 ಅಂಕ ಪಡೆದು 97.76% ಫಲಿತಾಂಶ ಹೊಂದಿ ಮೂರನೇ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಶಾಲೆಯಲ್ಲಿ ಒಟ್ಟು ಅತ್ಯುನ್ನತವಾಗಿ 47, ಪ್ರಥಮ ಸ್ಥಾನದಲ್ಲಿ 89, ದ್ವೀತಿಯ ಸ್ಥಾನ 26, ತೃತೀಯ ಸ್ಥಾನದಲ್ಲಿ 1 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿ ವೃಂದವು ಶುಭ ಹಾರೈಸಿದ್ದಾರೆ. ನಿಕಟ ಪೂರ್ವ ಅಧ್ಯಕ್ಷರಾದ ಡಾ. ಸಿ. ಬಿ. ಕುಲಿಗೋಡ ವಿದ್ಯಾರ್ಥಿಗಳಿಗೆ ಶಾಲು ಹೊಂದಿಸಿ ಸತ್ಕರಿಸಿ ಶುಭ ಹಾರೈಸಿದ್ದಾರೆ
” ಗ್ರಾಮೀಣ ಭಾಗದ ನಮ್ಮ ಶಾಲೆಯ ವಿದ್ಯಾರ್ಥಿಗಳು ಸಾಧನೆಯೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ ಪಡೆಯುವುದರೊಂದಿಗೆ ನಮ್ಮ ಸಂಸ್ಥೆಯ ಹೆಸರನ್ನು ರಾಜ್ಯದೂದ್ದಕ್ಕೂ ಪಸರಿಸಿ ಬೆಳವಣಿಗೆಯತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ಬೆಳೆಯಲಿ ಎಂದು
*ಸಂಜಯ ಕುಲಿಗೋಡ
ಅಧ್ಯಕ್ಷರು, ಬ ನೀ ಕುಲಿಗೋಡ ಪ್ರೌಢಶಾಲೆ ಮುಗಳಖೋಡ ತಿಳಿಸಿದರು.
” ಹೆಚ್ಚು ಜನ ಶ್ರೇಷ್ಠತೆಯಲ್ಲಿ ತೇರ್ಗಡೆಯಾಗಿದ್ದು ನಮ್ಮ ಸಿಬ್ಬಂದಿ ವರ್ಗಕ್ಕೆ ಸಂತೋಷ ತಂದಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಶ್ರೇಷ್ಠತೆಯಲ್ಲಿ ಬರುವಂತೆ ಕಲಿಕೆಯಲ್ಲಿ ವೈಯಕ್ತಿಕ ಕಾಳಜಿ ವಹಿಸುತ್ತೇವೆ ಎಂದು
ಮುಖ್ಯೋಪಾಧ್ಯಾಯ. ಎಸ್.ಎಸ್.ಮಧಾಳೆ
ಬ. ನೀ. ಕುಲಿಗೋಡ ಪ್ರೌಢಶಾಲೆ ಮುಗಳಖೋಡ ತಿಳಿಸಿದರು. ನಂತರ
“ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗಮನವಿಟ್ಟು ಓದಿದರೆ ಯಾವ ನಗರದ ದೊಡ್ಡ ದೊಡ್ಡ ಸಂಸ್ಥೆಗಳ ಕಲಿಕೆಗೆ ಕಡಿಮೆ ಇಲ್ಲ ಎಂಬುದನ್ನು ಗ್ರಾಮದ ಶಾಲೆಯಲ್ಲಿಯೇ ಸಾಧಿಸಿ ತೋರಿಸಿದ್ದಾರೆ. ಅವರ ಮುಂದಿನ ಭವಿಷ್ಯ ಅತ್ಯುನ್ನತದಿಂದ ಕೂಡಿರಲಿ.
ಡಾ.ಸಿ.ಬಿ.ಕುಲಿಗೋಡ. ಜಿಪಂ ಮಾಜಿ ಸದಸ್ಯರು ಹಾಗೂ ಸಂಸ್ಥಾಪಕ ಅಧ್ಯಕ್ಷರು ಪದವಿ ಮಹಾವಿದ್ಯಾಲಯ ಮುಗಳಖೋಡ ಇವರು ಹರ್ಷ ವ್ಯಕ್ತ ಪಡಿಸಿದರು..