ಪರಮಾನಂದವಾಡಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾಗಿ ಮಹಾದೇವಿ ಲಕ್ಷ್ಮಪ್ಪ ಹೇಳವಿ ಆಯ್ಕೆ

Share the Post Now

ಬೆಳಗಾವಿ.

ಕುಡಚಿ.
ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮ ಪಂಚಾಯತ ಉಳಿದ ಅವಧಿಗೆ ಉಪಾಧಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹಾದೇವಿ ಹೇಳವಿ ಹೆಚ್ಚು ಮತ ಪಡೆಯುವುದೊಂದಿಗೆ ಉಳಿದ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಪರಮಾನಂದವಾಡಿ ಗ್ರಾಮ ಪಂಚಾಯತಗೆ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಮಹಾದೇವಿ ಲಕ್ಕಪ್ಪಾ ಹೇಳವಿಯವರು 15 ಸದಸ್ಯರ ಪೈಕಿ 11ಮತಗಳನ್ನು ಪಡೆಯುವುದರೊಂದಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಬಸವರಾಜಪ್ಪ ಆರ್. ಘೋಷಣೆ ಮಾಡಿದರು.

ನಂತರ ನೂತನ ಉಪಾಧ್ಯಕ್ಷೆ ಮಹಾದೇವಿ ಹೇಳವಿ ಮಾತನಾಡಿ ಅಧ್ಯಕ್ಷರು, ಸರ್ವಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ, ಚರಂಡಿ, ಬೀದಿ ದೀಪ ಹಾಗೂ ಕುಡಿಯುವ ನೀರು ಹಾಗೂ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು.

ಈ ಸಮಯದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ದಶರಥ ಕುರಣೆ, ಸದಸ್ಯರಾದ ದಿಲೀಪ ಗಂಡೋತಿ, ಅಪ್ಪಾಸಾಬ ಮುಕಾಶಿ, ಬಾಷಾ ಢಾಂಗೆ, ಪಿ.ಎಸ.ಮಿರ್ಜಿ, ಸಲೀಮ ಮುಲ್ಲಾ, ಮಹಾವೀರ ಚಂಡಕೆ, ಸುಮಿತ್ತಾ ಪಟ್ಟಣಕೋಡಿ, ಸುಜಾತಾ ಭಜಂತ್ರಿ, ಜ್ಯೋತಿ ಭಜಂತ್ರಿ, ಪಾಕೀಜಾ ತಾಂಬೋಳಿ, ಗೀತಾ ಖಿಲಾರೆ, ಸಯದಾಬಿ ಸೈಯ್ಯದ ಮುಖಂಡರಾದ ಸಂಜೀವಕುಮಾರ ಭಾಂಡಿ, ಸುರೇಶ ಹೇಳವಿ, ಮಹಾದೇವ ಹೇಳವಿ, ಕುಶಾಲ ಸಿಬ್ಬಂದಿ ಮಹೇಶ ಪಾಟೀಲ ಇತರರು ಉಪಸ್ಥಿತರಿದ್ದರು. ಹೇಳವಿ, ಲಕ್ಕಪ್ಪ ಹೇಳವಿ, ರಾಮು ಖೀಲಾರೆ, ಸದಾಶಿವ ಭಜಂತ್ರಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಉಮೇಶ ಪೋಳ, ಮಹೇಶ ಪಾಟೀಲ ಇತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!