ಹಳ್ಳೂರ . ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರೆಯು ಬಹಳ ವೈಭವದಿಂದ ನಡೆಯುತ್ತಿದೆ. ಹಳ್ಳೂರ ಗ್ರಾಮವು ಹೆಚ್ಚು ಸಂಪತ್ತನ್ನು ಪಡೆದಿದೆ. ಜಾಗೃತ ದೇವರಿದ್ದಾರೆ ನಂಬಿ ನಡೆದರೆ ಸಕಲ ಸೌಭಾಗ್ಯ ಗಳು ದೊರೆಯುತ್ತವೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಅವರೂ ಹಳ್ಳೂರ ಗ್ರಾಮಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಸನ್ಮಾನ ಸ್ವೀಕರಿಸಿ ಮಾತನಾಡಿ ದೇಶದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಿ ಸುಖ ಸಮೃದ್ಧಿ ನೀಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಯುವಕರು ಕೆಟ್ಟ ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿರಿ. ಸಂಸ್ಕೃತಿ ಸಂಸ್ಕಾರ ಮಾನವನಿಗೆ ಮುಖ್ಯವಾದದ್ದು. ಜಾತ್ರೆಯಿಂದ ಸಹಬಾಳ್ವೆ ನೆಮ್ಮದಿಯಿಂದ ಬದುಕಲು ಸಹಕಾರ ನಿಡುತ್ತದೆಂದು ಹೇಳಿದರು. ಪ್ರಾರಂಭದಲ್ಲಿ ದ್ಯಾಮವ್ವ ದೇವಿ ಹಾಗೂ ಮಹಾಲಕ್ಷ್ಮೀ ದೇವರ ದರ್ಶನ ಪಡೆದು ದೇವರಿಗೆ ಉಡಿ ತುಂಬಿ ಭಕ್ತಿಯಿಂದ ನಮಿಸಿ ಭಕ್ತಿ ಪರಾಕಾಷ್ಟೆ ಮೆರೆದಿದ್ದಾರೆ. ಈ ಸಮಯದಲ್ಲಿ ದೇವಸ್ಥಾನ ಕಮೀಟಿ ಅಧ್ಯಕ್ಷ ಅಡಿವೆಪ್ಪ ಪಾಲಬಾಂವಿ. ಗ್ರಾಮ ಪ ಅಧ್ಯಕ್ಷ ಲಕ್ಷ್ಮಣ ಕತ್ತಿ. ಬಸಪ್ಪ ಸಂತಿ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಮಹಾಂತೇಶ ಕುಡಚಿ. ಕುಮಾರ ಲೋಕಣ್ಣವರ.ದುಂಡಪ್ಪ ಕೂಲಿಗೊಡ. ಮಲ್ಲಿಕಾರ್ಜುನ ಸಂತಿ. ಬಸವರಾಜ ಲೋಕನ್ನವರ. ಭೀಮಪ್ಪ ಹೊಸಟ್ಟಿ. ಹಣಮಂತ ರಾ ಪಾಲಬಾಂವಿ. ಗುರುನಾಥ ಬೋಳನ್ನವರ. ಮುಪ್ಪಯ್ಯ ಹಿಪ್ಪರಗಿ. ಈಸ್ವರ ಪಾಲಬಾಂವಿ. ಅಶೋಕ ತೇರದಾಳ. ಭೀಮಪ್ಪ ಹೊಸಟ್ಟಿ. ಭೀಮಪ್ಪ ಡಬ್ಬಣ್ಣವರ. ಕೆಂಪಣ್ಣ ಅಂಗಡಿ. ರವೀಂದ್ರ ನುಚ್ಚುಂಡಿ. ಶ್ರೀಶೈಲ ಅಂಗಡಿ. ಶಿವಾನಂದ ಹೊಸಮನಿ. ಸೈದುಸಾಬ ಮುಜಾವರ. ಬಸಪ್ಪ ನೇಸುರ. ಸೇರಿದಂತ 2 ದೈವದ ಹಿರಿಯರು ಹಾಗೂ ಕಮೀಟಯವರು ಉಪಸ್ಥಿತರಿದ್ದರು.





