ಬೆಳಗಾವಿ.ರಾಯಬಾಗ: ತಾಲ್ಲೂಕಿನ ಸುಕ್ಷೇತ್ರ ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಲಿಂಗೈಕ್ಯ ಪೂಜ್ಯ ಶ್ರೀ ಸಿದ್ದೇಶ್ವರ ಶಿವಯೋಗಿಗಳ ಮಹಾಸಮಾಧಿಮಹೋತ್ಸವ ಗುರುವಾರ ದಿನಾಂಕ 6 ರಂದು ನಡೆಯಲಿದೆ. ಮಹೋತ್ಸವ ನಿಮಿತ್ಯ ಬೆಳಿಗ್ಗೆ ಗುರುದೇವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಉಪಸ್ಥಿತ ಮಹಾತ್ಮರಿಂದ ಪ್ರವಚನ ನಡೆಯಲಿದೆ.ನಂತರ ಮಂಗಳಾರತಿ,ಮಹಾಪ್ರಸಾದ ನೆರವೇರಲಿದೆ ಎಂದು ಗುರುದೇವ ಬ್ರಹ್ಮಾನಂದ ಆಶ್ರಮದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*





