ಹಳ್ಳೂರ: ಸಮಾಜದ ಸುಧಾರಕರಾಗಿ ಸಮಾನತೆಯ ಹರಿಕಾರರು, ದೀನ, ದಲಿತ ಹಾಗೂ ಎಲ್ಲಾ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿ ದೇಶದ ಸಾಮಾಜಿಕ ಕ್ರಾಂತಿಯ ಮೂಲ ಪುರುಷರಲ್ಲಿ ಪ್ರಮುಖರಾದವರು ಮಹಾತ್ಮ ಜ್ಯೋತಿಭಾ ಪುಲೆ ಎಂದು ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಹೇಳಿದರು.
ಅವರು ಗ್ರಾಮದ ಜೈ ಹನುಮಾನ ದೇವಸ್ಥಾನದಲ್ಲಿ ಮಹಾತ್ಮ ಜ್ಯೋತಿಭಾ ಪುಲೆ ಯವರ 197 ನೇ ಜಯಂತಿ ಆಚರಣೆಯಲ್ಲಿ ಮಾತನಾಡಿ ಕ್ರಾಂತಿ ಜ್ಯೋತಿ ಶಿಕ್ಷಣದ ಕ್ರಾಂತಿ ಮಾಡಿ ಡಾಂಬಿಕ, ಧರ್ಮ, ಮತ,ಪಂಥ ಮೌಢ್ಯಗಳು ಕಂದಾಚಾರಗಳು ಹಣದ ಆಸೆಗಾಗಿ ದೇವರ ಹೆಸರಿನಲ್ಲಿ ನಡೆಸಿದ ಅವ್ಯವಹಾರ ವಿಸಂಗತ ಆಚರಣೆಗಳನ್ನು ಖಂಡಿಸಿ ಸಮಾಜದ ಐಕ್ಯತೆಗಾಗಿ ಸತ್ಯಶೋದಕ ಸಮಾಜ ಕಟ್ಟಿದ ಮಾಹಾನ ಪುರುಷರಿವರು ಎಂದು ಹೇಳಿದರು.
ಯುವ ಮುಖಂಡ ಲಕ್ಷ್ಮಣ ಕೌಜಲಗಿ ಮಾತನಾಡಿ ಸಮಾಜದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಕಂಕಣಬದ್ಧರಾದವರು 1848 ರಲ್ಲಿ ಪುಣೆ ಯಲ್ಲಿ ಪ್ರಥಮ ಬಾರಿಗೆ ಶಾಲೆಯನ್ನು ತೆರೆದು ಸ್ತ್ರೀಯರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು.
1888 ರಲ್ಲಿ ಮಹಾತ್ಮ ಎಂಬ ಬಿರುದು ಪಡೆದ ಮಹಾನ್ ಮೇಧಾವಿ ಮಹಾತ್ಮ ಜ್ಯೋತಿಭಾ ಫುಲೆಯವರ ಅವರ ತತ್ವ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಪ್ರಾರಂಭದಲ್ಲಿ ಮಹಾತ್ಮ ಜ್ಯೋತಿಭಾ ಪುಲೆಯವರ ಭಾವ ಚಿತ್ರಕ್ಕೆ ಪೂಜೆಯನ್ನು ಯಮನಪ್ಪ ನಿಡೋಣಿ ಹಾಗೂ ಲಕ್ಷ್ಮಣ ದುರದುಂಡಿ ನೆರವೇರಿಸಿದರು.
ಈ ಸಮಯದಲ್ಲಿ ಲಕ್ಷ್ಮಣ ಹೊಸಟ್ಟಿ. ಶಂಕರ ನಿಡೋಣಿ. ಹಣಮಂತ ಕೂಲಿಗೋಡ. ಗಿರಮಲ್ಲಯ್ಯ ಗಿರಮಲ್ಲಯ್ಯಗೊಳ. ಮಾದೇವ ಹೊಸಟ್ಟಿ. ಸಿದ್ದಪ್ಪ ಕೂಲಿಗೋಡ. ಭೀಮಪ್ಪ ಹೊಸಟ್ಟಿ.ಹಣಮಂತ ಹಳ್ಳೂರ.ಸುಭಾಸ ಅಂಗಡಿ. ಮಲ್ಲಪ್ಪ ಹೊಸಟ್ಟಿ. ಅಡಿವೆಪ್ಪ ಕೌಜಲಗಿ ಮಹೇಶ ಮಠಪತಿ. ಬಾಳಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.