ಮಹಾತ್ಮಾ ಜ್ಯೋತಿಬಾ ಫುಲೆ ಅವರ 197ನೇ ಜಯಂತಿ ಆಚರಣೆ!

Share the Post Now

ಹಳ್ಳೂರ .

ಆಧುನಿಕ ಕಾಲದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು ಸಮಾಜ ಸುಧಾರಕ ಸಮಾನತೆಯ ಹರಿಕಾರರಾಗಿ ದೀನ ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿ ಬಾಳಿಗೆ ಬೆಳಕನ್ನು ನೀಡಿದವರು ಮಹಾತ್ಮಾ ಜ್ಯೋತಿಬಾ ಫುಲೆ ಎಂದು ಮುಖಂಡ ಸಿದ್ದಪ್ಪ ಕೂಲಿಗೊಡ ಹೇಳಿದರು.         

                                             ಅವರು ಗ್ರಾಮದಲ್ಲಿ ನಡೆದ ಮಹಾತ್ಮಾ ಜ್ಯೋತಿಬಾ ಫುಲೆ ಅವರ 197ನೇ ಜಯಂತಿ ಆಚರಣೆಯಲ್ಲಿ ಮಾತನಾಡುತ್ತಾ ಜ್ಯೋತಿಬಾ ಫುಲೆ ಅವರು ಜನಸಾಮಾನ್ಯರು ಶಿಕ್ಷಣದ ಮೂಲಕ ದಮನಿತರನ್ನು ಮೇಲಕ್ಕೆತ್ತಿ ಮಹಿಳೆಯರಿಗೂ ಶಾಲೆ ತೆರೆದು ಸಮಾನತೆಯ ಕನಸು ಬಿತ್ತಿ ಮಹಾತ್ಮಾ ಎಂದೇ ಖ್ಯಾತಿಯನ್ನು ಪಡೆದಿದ್ದಾರೆಂದು ಹೇಳಿದರು.                           

             ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಮಾತನಾಡಿ ಡಾಂಭಿಕ ಧರ್ಮ ಪಂಥ ಮುಂತಾದ ಸಂಕುಚಿತ ಭಾವನೆಗಳಿಗೆ ಮರುಳಾಗದೆ ಮಾನವ ಧರ್ಮವನ್ನು ಅಂಗೀಕರಿಸಬೇಕೆಂದು ಅಪೇಕ್ಷೆ ಪಟ್ಟವರು ಬಡ ಹಿಂದುಳಿದ ಜನರ ಬಾಳಿಗೆ ಬೆಳಕು ನೀಡಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು ಮಹಾತ್ಮಾ ಜ್ಯೋತಿಬಾ ಫುಲೆ ಎಂದು ಹೇಳಿದರು.                 ಪ್ರಾರಂಭದಲ್ಲಿ ಜ್ಯೋತಿಬಾ ಫುಲೆ ಅವರ ಜನ್ಮ ಜಯಂತಿಯನ್ನು ಭಾವ ಚಿತ್ರಕ್ಕೆ ಪೂಜೆಯನ್ನು ಉದಯ ಮಠಪತಿ ನೆರವೇರಿಸಿದರು.               

                     ಈ ಸಮಯದಲ್ಲಿ ಯಮನಪ್ಪ ನಿಡೋಣಿ. ಭೀಮಪ್ಪ ಸಪ್ತಸಾಗರ. ಶಿವಪ್ಪ ಅಟ್ಟಮಟ್ಟಿ. ರಾಮಣ್ಣ ನಿಡೋಣಿ. ಶ್ರೀಶೈಲ ಹಿರೇಮಠ್. ಕಲ್ಲಪ್ಪ ಹುಬ್ಬಳ್ಳಿ.ಸಿದ್ಮಲ್ ನಿಡೋಣಿ. ರಾಮಣ್ಣ ಅಥಣಿ.ಲಕ್ಷ್ಮಣ ಕೌಜಲಗಿ. ನಾಗಪ್ಪ ಗೋಸಬಾಳ.ಹಣಮಂತ ಗೋಲಬಾಂವಿ. ವಿಠ್ಠಲ ತೋಟಗಿ. ಅನೀಲ ಕತ್ತಿ. ಶ್ರೀಶೈಲ ನಾವಿ. ಆನಂದ ಮೂಡಲಗಿ. ಸೋಮು ನಿಡೋಣಿ. ಮಹಾಂತೇಶ ಗರಗ. ದುಂಡಪ್ಪ ಕುಳ್ಳೊಳ್ಳಿ. ಭೀಮಪ್ಪ ನಿಡೋಣಿ ಪುಂಡಲೀಕ ಲಕ್ಷ್ಮೇಶ್ವರ.ಸಿದಗಿರಿ ಬಡಿಗೇರ್ ಸೇರಿದಂತೆ ಅನೇಕರಿದ್ದರು.

Leave a Comment

Your email address will not be published. Required fields are marked *

error: Content is protected !!