ಮಹಾತ್ಮಾ ಜ್ಯೋತಿಬಾ ಫುಲೆ ಅವರ ಜನ್ಮದಿನಾಚರಣೆ ಆಚರಣೆ!

Share the Post Now

ಹಳ್ಳೂರ.

ಸಮಾಜ ಸುದಾರಕರಾಗಿ ಸಮಾನತೆಯ ಹರಿಕಾರರು ಬಡವ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿ ಸಾಮಾಜಿಕ ಸುಧಾರಣೆ ಮತ್ತು ಸಾಮಾಜಿಕ ಅಸಮಾನತೆಗಳ ನಿವಾರಣೆಗಾಗಿ ಅವಿರತವಾಗಿ ದುಡಿದ ದೀಮಂತ ನಾಯಕ ಕ್ರಾಂತಿಕಾರಿ ಮಹಾನ ಪುರುಷ ಮಹಾತ್ಮಾ ಜ್ಯೋತಿಬಾ ಫುಲೆ ಅವರು ಸಮಾಜ ಸುಧಾರಣೆಗೆ ನೀಡಿದ ಕೊಡುಗೆ ಅಪಾರವಾದದ್ದು ಎಂದು  ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಹೇಳಿದರು.     

                                 ಅವರು ಗ್ರಾಮದ ತೋಟಗೆರ್ ದೈವದ ಹತ್ತಿರ ಮಹಾತ್ಮಾ ಜ್ಯೋತಿಬಾ ಫುಲೆ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ  ಮಾತನಾಡಿ ಜ್ಯೋತಿಬಾ ಫುಲೆ ಅವರು ಜನ ಸಾಮಾನ್ಯರು ಡಾಂಬಿಕ,  ಧರ್ಮ, ಪಂಥ ಸಂಪ್ರದಾಯ ಮುಂತಾದ ಸಂಕುಚಿತ ಭಾವನೆಗಳಿಗೆ ಮರುಳಾಗದೆ ಮಾನವ ಧರ್ಮವನ್ನು ಅಂಗೀಕರಿಸಬೇಕೆಂದು ಅಪೇಕ್ಷೆ ಪಟ್ಟವರು. ಭಾರತ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಮಹಿಳಾ ಶಿಕ್ಷಕಿಯನ್ನಾಗಿ ಮಾಡಿದವರು

ಮಹಾತ್ಮಾ ಜ್ಯೋತಿಬಾ ಫುಲೆ ಅವರು. ಮಹಾನ ಪುರುಷರು ಕೇವಲ ಒಂದೇ ಜಾತಿಗೆ ಸೇರಿದವರಲ್ಲ ಮಾನವ ಕುಲವನ್ನು ಉದ್ದಾರ ಮಾಡಿದ್ದಾರೆ ಅದಕ್ಕಾಗಿ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕೆಂದು ಹೇಳಿದರು.                               ಮುಖಂಡ ಕುಮಾರ ಲೋಕನ್ನವರ ಮಾತನಾಡಿ ಸಾಮಾಜಿಕ ಪರಿವರ್ತನಾ ಚಳುವಳಿ ರೂವಾರಿ ಸತ್ಯಶೋಧಕ ಸಾಮಾಜದ ಸಂಸ್ಥಾಪಕ ಅರಿವಿನ ಮಹಾಗುರು ಶಿಕ್ಷಣದ ಹರಿಕಾರ ಮಹಿಳೆಯರನ್ನು ಅಕ್ಷರಸ್ಥರನ್ನಾಗಿಸಲು ಶ್ರಮಿಸಿ ದಣಿವರಿಯದ ದುಡಿದ ಮಹಾನ ಧೀಮಂತ ನಾಯಕನೆಂದು ಹೇಳಿದರು. ಮಹಾತ್ಮಾ ಜ್ಯೋತಿಬಾ ಫುಲೆ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ನುಡಿ ನಮನಗಳನ್ನು ಸಲ್ಲಿಸಿದರು.   

                  ಈ ಸಮಯದಲ್ಲಿ ಮಾಜಿ ಗ್ರಾ ಪ ಅಧ್ಯಕ್ಷ ಲಕ್ಷ್ಮಣ ಕತ್ತಿ. ಭೀಮಪ್ಪ ಹೊಸಟ್ಟಿ.ಯಮನಪ್ಪ ನಿಡೋಣಿ.ಹನಮಂತ ತೇರದಾಳ. ತುಕಾರಾಮ ಸನದಿ. ಮಹಾಂತೇಶ ಕುಡಚಿ. ಬಸಪ್ಪ ಸಂತಿ. ಭೀಮಶಿ ಡಬ್ಬನ್ನವರ. ರವಿ ಪಾಟಿಲ. ಸಂಜು ಕೂಲಿಗೋಡ. ಡಾ ಪಂಡಿತ್ ಉಪಾದ್ಯೆ. ಶಂಕರ ಕೂಲಿಗೋಡ. ಶಿವಯ್ಯ ಹಿಪ್ಪರಗಿ. ಅಪ್ಪಾಸಾಬ ಮುಜಾವರ.ಅಶೋಕ ಮೊರೆ. ಪರಪ್ಪ ಮಾಲಗಾರ. ಶ್ರೀಶೈಲ ಹೀರೆಮಠ.. ಶಿವಪ್ಪ ಅಟ್ಟಮಟ್ಟಿ.ದುಂಡಪ್ಪ ಸೊಲ್ಲಾಪುರ. ಶ್ರೀಶೈಲ ನುಚ್ಚುಂಡಿ ಸೇರಿದಂತೆ ಅನೇಕರಿದ್ದರು. 

Leave a Comment

Your email address will not be published. Required fields are marked *

error: Content is protected !!