ಹಾರೂಗೇರಿ : ಸಮೀಪದ ಹಾರೂಗೇರಿ ಕ್ರಾಸ್ ನಲ್ಲಿ ಜರುಗಲಿರುವ ಮಹಾಶಿವರಾತ್ರಿ ಹಾಗೂ ಹಣಮಂತ ಲಚ್ಚಪ್ಪಾ ಕಲ್ಲೋಳಿಕರ ಅವರ ಸ್ಮರಣೊತ್ಸವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಿ ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಯುವ ಧುರಿಣ ಮಹೇಂದ್ರ ತಮ್ಮಣ್ಣವರ ಅವರ ಧರ್ಮಪತ್ನಿ ಸಚೀನಾ ಮಹೇಂದ್ರ ತಮ್ಮಣ್ಣವರ ಅವರು ಹಾರೂಗೇರಿ ಜನತೆಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರಲ್ಲದೆ ಈ ಬಾರಿ ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ ಮಹೇಂದ್ರ ತಮ್ಮಣ್ಣವರ ಅವರನ್ನು ಬೆಂಬಲಿಸುವಂತೆ ಕ್ಯಾನ್ವಾಸ್ ಮಾಡಿ ವಿನಂತಿಸಿದರು . ಈ ಸಂದರ್ಭದಲ್ಲಿ ಪ್ರಮುಖರಾದ ವರ್ಧಮಾನ ಬದ್ನಿಕಾಯಿ,ಬಾಳೇಶ ಹಾಡಕಾರ,ಭರತೇಶ ಹುಕ್ಕೇರಿ, ಅಕ್ಷಯ ಗುರವ,ಶಿವು ಚಿಂಚಲಿ,ಬಲ್ಲು ತಮದಡ್ಡಿ, ಅಜಿತ ಹಾಡಕಾರ ಮುಂತಾದವರು ಉಪಸ್ಥಿತರಿದ್ದರು.
ವರದಿ : ಸುನೀಲ್ ಕಬ್ಬೂರ