ಬೆಳಗಾವಿ. ಅಥಣಿ
ಅಥಣಿ : ಅಥಣಿ ವಿಧಾನಸಭೆ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಕುಮಟಳ್ಳಿ ಇಂದು ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನಗೆ ಮತ್ತೊಂದು ಬಾರಿ ಸ್ಪರ್ಧಿಸಲು ಬಿಜೆಪಿ ವರಿಷ್ಠರು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು, ನಮಗೆ ವಿಶ್ವಾಸವಿದೆ. ಈ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸುತ್ತೆವೆ ಎಂದರು.
ನನ್ನ ಮತಕ್ಷೇತ್ರದಲ್ಲಿ ಬಿಜೆಪಿ ನಾಯಕರ ಪ್ರಚಾರಕ್ಕೆ ಇನ್ನೂ ಸಮಯವಿದೆ. ರಾಜ್ಯ, ರಾಷ್ಟ್ರಮಟ್ಟದ ನಾಯಕರು ಬರಲಿದ್ದಾರೆ. ಅಲ್ಲಿವರೆಗೆ ಸ್ಥಳೀಯರನ್ನು ಕರೆದುಕೊಂಡು ಪ್ರಚಾರ ಮಾಡುತ್ತೆವೆ. ಮೋದಿಯವರು ದೇಶದಲ್ಲಿ ಮಾಡಿದ ಕಾರ್ಯಗಳನ್ನು ಹಾಗೂ ನಾನು ಕ್ಷೇತ್ರದಲ್ಲಿ ಮಾಡಿರುವ ಮುಂದೆ ಇಟ್ಟುಕೊಂಡು ಮತ ಕೇಳ್ತಿನಿ ಎಂದರು.
ಪಕ್ಷಾಂತರದಿಂದ ಅಥಣಿ ಜನರಲ್ಲಿ ಉಂಟಾದ ಗೊಂದಲಗಳಿಗೆ ಜನರು ಸರಿಯಾದ ತೀರ್ಪು ನೀಡುತ್ತಾರೆ. ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಅಧಿಕೃತವಾಗಿ ಜನರ ಬಳಿ ಹೋಗಿ ತೋರಿಸ್ತೀನಿ, ಹುಟ್ಟುವ ಮುನ್ನ ಯಾವುದೇ ಜಾತಿ ಗೊತ್ತಿರಲ್ಲ. ನಾನೊಬ್ಬ ಲಿಂಗಾಯತ ಸಮುದಾಯದ ಶಾಸಕನಾಗಿ ಇಲ್ಲಿಯವರೆಗೂ ಜಾತ್ಯಾತೀತವಾಗಿ ಕೆಲಸ ಮಾಡಿದ್ದೇನೆ ಮುಂದೆನೂ ಮಾಡ್ತೀನಿ ಎಂದು ಸ್ಪಷ್ಟಪಡಿಸಿದರು.