ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಅಥಣಿ: ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಸುಮಾರು
2 ಕೋಟಿ 87 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಮಹೇಶ್ ಕುಮಟಳ್ಳಿ ಭೂಮಿ ಪೂಜೆ ನೆರವೇರಿಸಿದರು.
ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಹಳ್ಯಾಳ ಗ್ರಾಮದಲ್ಲಿ ಸುಮಾರು 5 ಕೊಟಿಗಿಂತ ಹೆಚ್ಚು ಕಾಮಗಾರಿ ಪ್ರಗತಿಯಲ್ಲಿದ್ದು ಇವತ್ತು 2 ಕೋಟಿ 20 ಲಕ್ಷ ರೂ. ವೆಚ್ಚದ ಹಲ್ಯಾಳ – ರಡ್ಡೇರಹಟ್ಟಿ ವ್ಹಾಯಾ (ಶೇಡಶಾಳ ವಸತಿ) ರಸ್ತೆ ಹಾಗೂ 57 ಲಕ್ಷ ರೂ. ವೆಚ್ಚದ ಗೋಕಾಕ್ ಮುಖ್ಯರಸ್ತೆಯಿಂದ ಮಂಗಸೂಳಿ ತೋಟದ ವರೆಗೆ (ಸಿ.ಸಿ) ರಸ್ತೆ,ಮತ್ತು 5 ಲಕ್ಷ ರೂ. ವೆಚ್ಚದ ಇಂಚಗೇರಿ ಮಠದ ಸಮುದಾಯ ಭವನದ ಕಾಮಗಾರಿ,5 ಲಕ್ಷ ರೂ. ವೆಚ್ಚದ ಶ್ರೀ ಲಕ್ಷ್ಮಿ ದೇವಸ್ಥಾನದ ಸಮುದಾಯ ಭವನ ಭೂಮಿ ಪೂಜೆ ನೆರವೇರಿಸಲಾಗಿದೆ ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಗಳಲ್ಲೊಂದಾದ ಮನೆಮನೆಗೆ ಶುದ್ದ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಅತೀ ಶೀಘ್ರದಲ್ಲೇ ಅದನ್ನೂ ಕಾಮಗಾರಿ ಪ್ರಾರಂಭ ಮಾಡಲಾಗುವದು ಎಂದರು.
ಇದೆ ವೇಳೆ ಗ್ರಾಮಸ್ಥರು ಶಾಸರನ್ನ ಸತ್ಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕುಮಾರಗೌಡಾ ಪಾಟೀಲ್, ಸುರೇಶ ವಾಡೆದ,ಗ್ರಾಪಂ ಅಧ್ಯಕ್ಷರಾದ ಮುದಕಣ್ಣ ಶೇಗುಣಶಿ,ರಾಜು ಮುಲ್ಲಾ,ಶಿವಾನಂದ ಇಂಗಳಿ,ಚಂದ್ರಕಾಂತ ಕಾಗವಾಡ,ವಿಠ್ಠಲ ಮಲಾಬಾದ,ಸದಾಶಿವ ಬನಸೊಡೆ,ಅಣ್ಣಪ್ಪ ಠಕ್ಕಣ್ಣವರ,ವಿಠ್ಠಲ ಮಂಗಸೂಳಿ, ರಾಹುಲ ಮಾದರ,ಗೋಪಾಲ ಹುಲ್ಲಿಮನಿ,ರುದ್ರಗೌಡಾ,ಪ್ರವೀಣ ಪಾಟೀಲ್ ಹಾಗೂ ಪಕ್ಷದ ಕಾರ್ಯಕರ್ತರು, ಯುವಕರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.