ಹಳ್ಳೂರ. ಶ್ರೀ ಕ್ಷೇತ್ರ ಧರ್ಮಸ್ಥಳ ಬಿಸಿ ಟ್ರಸ್ಟ್ ಮೂಡಲಗಿ ತಾಲೂಕಿನ ರೂರಲ್ ವಲಯದ ಹಳ್ಳೂರ ಕಾರ್ಯಕ್ಷೇತ್ರದಲ್ಲಿ ಶ್ರದ್ಧಾ ಸ್ವಚ್ಛತಾ ಕಾರ್ಯಕ್ರಮದ ನಿಮಿತ್ತ ಪೀರ್ ಸಾಬ್ ದರ್ಗಾದಲ್ಲಿ ಸ್ವಚ್ಛತೆ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ವಲಯದ ಮೇಲ್ವಿಚಾರಕರಾದ ರೇಣುಕಾ ತಿಳುವಳ್ಳಿ ಮಾತನಾಡಿ ಪ್ರತಿಯೊಬ್ಬರೂ ಗ್ರಾಮದ ಸ್ವಚ್ಚತೆ ಕಾಪಾಡುವುದರಿಂದ ಶರೀರಕ್ಕೆ ಹಾಗೂ ಗ್ರಾಮಕ್ಕೆ ಒಳ್ಳೆಯದಾಗಿ ಸೊಳ್ಳೆಗಳ ಕಾಟ ಕಡಿಮೆಯಾಗಿ ರೋಗರುಜಿನಿಗಳು ಬರುವುದಿಲ್ಲ ಎಂದು ಹೇಳುತ್ತಾ ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಈ ಸಮಯದಲ್ಲಿ ಒಕ್ಕೂಟದ ಅಧ್ಯಕ್ಷೆ ಕೌಸರ ಹಣಗಂಡಿ. ಸ್ಥಳೀಯ ಸೇವಾ ಪ್ರತಿನಿಧಿ ಮಾಲಾ ಮೇತ್ರಿ.ಸೇರಿದಂತೆ ಸಂಗದ ಸದಸ್ಯರು, ಭಾಗವಹಿಸಿದ್ದರು.