ಮಾಲಗತ್ತಿ ಅವರ “ಇಳಿಹೊತ್ತು ” ಕಥಾ ಸಂಕಲನ ಲೋಕಾರ್ಪಣೆ ಸಮಾರಂಭ

Share the Post Now

ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರ: ಮಂಗಲಾ ಮೆಡಗುಡ್ಡ

ಬೆಳಗಾವಿ:  ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಪಾತ್ರ ಅಪಾರವಾಗಿದೆ. ಪ್ರಕೃತಿಯ ಸೌಂದರ್ಯ ,  ಸಮಾಜದ ಬದಲಾವಣೆ ಹಾಗೂ ಪ್ರಗತಿಗೆ ಸಾಕಷ್ಟು ಕೃತಿಗಳನ್ನು ಬರೆದಿದ್ದಾರೆ ಎಂದು ಕ.ಸಾ.ಪ ಅಧ್ಯಕ್ಷರಾದ ಮಂಗಲಾ ಮೆಡಗುಡ್ಡ ಹೇಳಿದರು.

ನಗರದ ಕನ್ನಡ ‌ಸಾಹಿತ್ಯ ಭವನದಲ್ಲಿ ಬುಧವಾರ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಹಾಗೂ  ಮಾಲಗತ್ತಿ ಪ್ರಕಾಶನದ ವತಿಯಿಂದ ಆಯೋಜಿಸಲಾದ
ಅನಿತಾ ಮಾಲಗತ್ತಿ ಅವರ ” ಇಳಿಹೊತ್ತು”  ಕಥಾ ಸಂಕಲನ ಲೋಕಾರ್ಪಣೆಗೊಳ್ಳಿಸಿ ಅವರು ಮಾತನಾಡಿದರು.

ಕೃತಿ ಗಳಿಂದ ಮಹಿಳೆಯರು ಇಂದು ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಹೊಂದಿದ್ದು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದರು.   ಕ್ರೀಡೆ, ಸಾಹಿತ್ಯ, ಕಲೆ, ಸಾಂಸ್ಕೃಂತಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಮಹಿಳೆಯರು ಪುರುಷರಿಗೆ ಸಾವಲೊಡ್ಡಿ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ. ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ಮಹಿಳೆಯರು ಸೇವೆ ನೀಡಿದ್ದಾರೆ ಎಂದರು.

ಅನಿತಾ ಮಾಲಗತ್ತಿಯವರ ” ಇಳಿಹೊತ್ತು ” ಕೃತಿಯಲ್ಲಿ
ಬದುಕಿನ ಸರಳತೆ ಅರಳಿದೆ. ಇಂತಹ ಕೃತಿಗಳಿಂದ ಮಹಿಳೆಯರು ಸಮ- ಸಮಾಜದಲ್ಲಿ ಪ್ರಗತಿ ಹೊಂದಲು ಈ ಕೃತಿ ಆಸರೆಯಾಗಿದೆ ಎಂದು ಹೇಳಿದರು.

ರಂಗ ಸಂಪದ ಅದ್ಯಕ್ಷರಾದ ಅರವಿಂದ ಕುಲಕರ್ಣಿ ಅವರು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು,  ಸಮಾಜದಲ್ಲಿ ನಾವು ಹೇಗೆ ಸರಳವಾಗಿ ಬದುಕಬೇಕೆಂಬ ಉತ್ತಮ ಸಂದೇಶವನ್ನು ಮಾಲಗತ್ತಿ ಕೃತಿಯಲ್ಲಿ  ಮನೆ- ಮನಗಳ ಮುಟ್ಟುವಂತೆ ತಿಳಿಸಿದ್ದಾರೆ.  ಅನಿತಾ ಮಾಲಗತ್ತಿಯವರ ಸರಳೆಯಂತೆ ಕೃತಿ ಸರಳವಾಗಿದೆ ಎಂದರು.

ಕೃತಿಯಲ್ಲಿ ಸರಳತ ಇದ್ದರೆ ನಾಟಕಕ್ಕೆ ಬಳಸಿಕೊಳ್ಳಲು ಸರಳವಾಗಿರುತ್ತದೆ. ಮಾಲಗತ್ತಿಯವರ ಕೃತಿ ಜೀವನದ ಪಾಠಗಳನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ.  ಮನಸ್ಸನ್ನು ಅರಳಿಸುವ ಕೃತಿ ಇದಾಗಿದೆ ಎಂದರು.

ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರವರ ಕಾವ್ಯಗಳಲ್ಲಿ ಅಪಾರ ಜ್ಞಾನ ಅಡಗಿಕೊಂಡಿರುವ ಹಾಗೆಯೇ ಮಾಲಗತ್ತಿಯವರ ಕೃತಿ ಸರಳತೆಯ ಅಡಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಡಾ.ಭಾರತಿ ಮಠದ ಅವರು ಮಾತನಾಡಿ,  ಕೌಟುಂಬಿಕ ನೆಲಗಟ್ಟ, ಸ್ವಾಭಿಮಾನ ಹಾಗೂ ನಮ್ಮೆಲ್ಲರ ಭಾವನೆಗಳನ್ನು ಮಾಲಗತ್ತಿಯವರು ಕೃತಿ ಮೂಲಕ ಪರಿಚಯಿಸುತ್ತಿರುವುದು ಹೆಮ್ಮೆಯಾಗಿದೆ. ಕುಟುಂಬದೊಂದಿಗೆ , ಸಮಾಜವನ್ನು ಪ್ರೀತಿಯಿಂದ ಕಾಣುವ ಸರಳತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಂದೆ- ತಾಯಿಯ ವಾತ್ಸಲ್ಯದ ಮುಂದೆ ಎಲ್ಲವೂ ಚಿಕ್ಕದ್ದು ಎಂದು ಮಾಲಗತ್ತಿಯವರು ತಿಳಿಸಿದ್ದಾರೆ ಎಂದರು.

ಈ ವೇಳೆ ಸಂಘ- ಸಂಸ್ಥೆಗಳಿಂದ ” ಇಳಿಹೊತ್ತು”  ಕಥಾ ಸಂಕಲನ  ಸಾಹಿತಿ ಅನಿತಾ ಮಾಲಗತ್ತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಚನ್ನಬಸಪ್ಪ ಮಾಲಗತ್ತಿ, ಜಯಶೀಲಾ ಬ್ಯಾಕೋಡ್ ಅಧ್ಯಕ್ಷತೆ ವಹಿಸಿದರು.  ಹಿರಿಯ ಸಾಹಿತಿ ಡಾ.ಭಾರತಿ ಮಠದ ಪುಸ್ತಕ ಪರಿಚಯಿಸುವರು. ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕರಾದ ಶೈಲಗಾ ಭಿಂಗೆ , ಶಶಿಕಲಾ ಬಸವರಾಜ, ಆಶಾ ಕಡಪಟ್ಟಿ, ನೀಲಗಂಗಾ ಚರಂತಿಮಠ , ನಂದಾ ಗಾರ್ಗಿ, ಜ್ಯೋತಿ ಮಾಳೆ,
ಆಶಾ ಯಮಕನಮರಡಿ ಸ್ವಾಗತಿಸಿ,  ನಿರೂಪಿಸಿದರು. ಅನ್ನಪೂರ್ಣಾ ಹಿರೇಮಠ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!