ಬೆಳಗಾವಿ
ವರದಿ -ರವಿ ಬಿ ಕಾಂಬಳೆ
ಬೆಲಗಾವಿ :ಜಿಲ್ಲೆಯ ಕಳೆದ ವರ್ಷ ಡಿಸೆಂಬರ ತಿಂಗಳಲ್ಲಿ ಹುಕ್ಕೇರಿ ಪಟ್ಟಣದ ಜುವೇಲರಿ ಅಂಗಡಿಯಲ್ಲಿ 643 ಗ್ರಾಂ. ಬಂಗಾರದ ಆಭರಣಗಳು ಕಳ್ಳತನವಾಗಿರುತ್ತವೆ ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಗೋಕಾಕ ಉಪವಿಭಾಗದ ಡಿ.ಎಸ್.ಪಿ. ಶ್ರೀ ದೂದಪೀಠ ಮುಲ್ಲಾ ಇವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ಕೈಗೊಂಡ ಹುಕ್ಕೇರಿ ಪೊಲೀಸ್ ಇನ್ಸಪೆಕ್ಟರ ಮತ್ತು ಅವರ ತಂಡದ ಸಿಬ್ಬಂದಿಗಳು ದಿನಾಂಕ: 02-01-2023 ರಂದು ಕಳ್ಳತನವಾದ ಜುವೆಲರಿ ಅಂಗಡಿಯಲ್ಲಿ ಸೆಲ್ಸಮನ್ ಅಂತಾ ಕೆಲಸ ಮಾಡುವ ವ್ಯಕ್ತಿಯನ್ನು ಬಂಧಿಸಿ ಆತನಿಂದ ಅದೇ ದಿನ 121 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಬಂಧಿತ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು.
ನಿನ್ನೆ ದಿನಾಂಕ 23-02-2023 ರಂದು ಕಳ್ಳತನವಾಗಿದ್ದ ಉಳಿದ 522 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಕಾರ್ಯದಲ್ಲಿ ಹುಕ್ಕೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಶ್ರೀ ಎಮ್. ಎಮ್ ತಹಶೀಲ್ದಾರ. ಶ್ರೀ ಎ.ಎಸ್.ಸನದಿ ಎ.ಎಸ್.ಐ ಹಾಗೂ ಸಿಬ್ಬಂದಿ ಜನರಾದ ಶ್ರೀ ಸಿ, ಡಿ. ಪಾಟೀಲ 2.23.2 1361. ಶ್ರೀ. ಲಕ್ಷ್ಮಣ ಎಸ್. ಕೋಚರಿ 2541 ಮಂಜುನಾಥ.ಎಸ್. ಕಬ್ಬೂರ ಸಿಪಿಸಿ, 3042, ಶ್ರೀ ಗಜಾನನ,ಎಸ್. ಕಾಂಬಳೆ ಸಿಪಿಸಿ 3255, ಶ್ರೀ ಸದ್ದಾಂ. ಆರ್. ರಾಮದುರ್ಗ ಸಿಪಿಸಿ 1512, ಶ್ರೀ ಅಜೀತ. ಎಲ್ ನಾಯಿಕ ಸಿ.ಪಿ.ಸಿ. 3277, ಕು. ಸಾವಿತ್ರಿ ಆರ್. ಡಬ್ಲ್ಯು.ಪಿ.ಸಿ 3513 ಸಿಬ್ಬಂಧಿಗಳ ಕಾರ್ಯವನ್ನು ಶ್ಲಾಘಿಸಿ, ಅರ್ಹ ನಗದು ಬಹುಮಾನವನ್ನು ಮಂಜೂರಿಸಲಾಗಿದೆ.