ಅಯೋಧ್ಯೆಯಲ್ಲಿ ಶಿವ ಮಂದಿರ ಸ್ಥಾಪಿಸುವಂತೆ ಮಂಗಳಾ ಅಂಗಡಿ ಅವರಿಗೆ ಮನವಿ

Share the Post Now

ಬೆಳಗಾವಿ :ಭಾರತ ದೇಶ ಆಧ್ಯಾತ್ಮದ ತಾಣವಾಗಿದೆ. ಶರಣ ಸಂಪ್ರದಾಯದ ಮನೆ ಮಾಡಿದೆ. ಪ್ರತಿಯೊಬ್ಬರ ಹೃದಯದಲ್ಲಿ ಭಕ್ತಿಯ ಸೆಲೆ ಅಡಗಿದೆ. ಶಿವರಾಮ ದೇವತೆಗಳಿಬ್ಬರೂ ಭಕ್ತರ ಆರಾಧ್ಯ ದೇವರಾಗಿದ್ದಾರೆ. ರಾಮನು ವನವಾಸಕ್ಕೆ ಹೋದಾಗ ಪ್ರತಿಯೊಂದು ಸೂಕ್ತ ಸ್ಥಳಗಳಲ್ಲಿ ಶಿವನ ಲಿಂಗ ಪ್ರತಿಷ್ಠಾಪಿಸಿ ತನ್ನ ಭಕ್ತಿಯನ್ನು ಶಿವನಿಗೆ ಅರ್ಪಿಸಿದ್ದಾನೆ.

ರಾಮನು ಸ್ಥಾಪಿಸಿದ ಲಿಂಗಗಳೆಲ್ಲವೂ ರಾಮಲಿಂಗೇಶ್ವರ ದೇವಸ್ಥಾನಗಳೆಂದು ಪ್ರಖ್ಯಾತಿ ಪಡೆದಿವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಡಿಪಾಯ ತೆಗೆಯುವಾಗ ಶಿವಲಿಂಗವು ಸಿಕ್ಕಿದೆ. ರಾಮನು ಅಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಪೂಜೈಗೈದಿದ್ದನೆಂಬುದು ಇದರಿಂದ ತಿಳಿಯುತ್ತದೆ. ಈ ಕುರಿತು ರಂಭಾಪುರಿ ಜಗದ್ಗುರುಗಳ ನೇತೃತ್ವದಲ್ಲಿ ಸಭೆ ನಡೆಸಿ ಶಿವಲಿಂಗ ದೇವಸ್ಥಾನ ನಿರ್ಮಾಣ ಮಾಡಬೇಕೆಂಬ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ ರಾಮ ಮಂದಿರದಲ್ಲಿ ಶಿವನ ಮಂದಿರ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟು ಎಲ್ಲ ಶಿವನ ಭಕ್ತರ ಪ್ರೀತಿಗೆ ಪಾತ್ರರಾಗಬೇಕೆಂದು ಶ್ರೀಗಳು ಮನವಿಯಲ್ಲಿ ತಿಳಿಸಿದ್ದಾರೆ.

ಶಿವನ ಹೃದಯದಲ್ಲಿ ರಾಮ ಇರುವುದರಿಂದ ಅವರಿಬ್ಬರಲ್ಲಿ ಅವಿನಾಭಾವ ಸಂಬಂಧವಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ವಿಷ್ಣುವಿನ ಅವತಾರ ಶ್ರೀರಾಮನು ಇರುವುದರಿಂದ ಅವರಿಬ್ಬರ ಆಶೀರ್ವಾದವನ್ನು ಎಲ್ಲರೂ ಆಪೇಕ್ಷಿಸುತ್ತಾರೆ. ರಾಮನ ಜನ್ಮಭೂಮಿ ಅಯೋಧೆಯಾಗಿರುವುದರಿಂದ ಅಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ. ಗುರು ಕಾಟಾಪುರಿಮಠ ಸೇರಿದಂತೆ ಮೊದಲಾದವರು ಇದ್ದರು.

Leave a Comment

Your email address will not be published. Required fields are marked *

error: Content is protected !!