ಬೆಳಗಾವಿ
ವರದಿ :ಶಶಿಕಾಂತ ಪುಂಡಿಪಲ್ಲೇ
ಅಥಣಿ :
ಕಳೆದ 15 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿ ಉಳಿದಾಗ,2018 ರ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೆರಿ ಭಾರಿಸಲು ಅಥಣಿ ಮತಕ್ಷೇತ್ರದ ಪ್ರಜ್ಞಾವಂತ ಮತದಾರರು,ಆಗ ಶಾಸಕರಾಗಿದ್ದ ಈಗ ಮಾಜಿ ಡಿಸಿಎಂ, ವಿಧಾನ ಪರಿಷತ್ ಸದಸ್ಯರು ಆಗಿರುವ ಬಿಜೆಪಿಯ ಲಕ್ಷ್ಮಣ ಸವದಿ ಅವರ ಸೋಲಿಸಲು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ,ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ ಮತ್ತು ಎಂಬಿ ಪಾಟೀಲ್ ಸೇರಿದಂತೆ ಹಲವರು ದಿಗ್ಗಜರ ಪ್ರಾಮಾಣಿಕ ಮತ್ತು ಸಂಘಟನಾತ್ಮಕ ಪ್ರಯತ್ನದ ಫಲವೇ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಾರಣವಾಯಿತು. ಗೆದ್ದ ಕೆಲವೇ ತಿಂಗಳಗಳಲ್ಲಿ ಆಪರೇಷನ್ ಕಮಲಕ್ಕೆ ಬಲಿಯಾಗಿ ಬಾಂಬೆಗೆ ಓಡಿ ಹೋಗಿ, ಅಥಣಿ ಜನತೆಗೆ, ಕಾಂಗ್ರೆಸ್ ಪಕ್ಷಕ್ಕೆ, ಕಾಂಗ್ರೆಸ್ ಮುಖಂಡರಿಗೆ ದ್ರೋಹ ಬಗೆದು ಬಿಜೆಪಿ ಗೆ ಓಡಿ ಹೋದದ್ದು ಹಾಲಿ ಶಾಸಕ ಮಹೇಶ ಕುಮಟಳ್ಳಿ..ಇಂತಹ 17ಕ್ಕೂ ಮಿಕ್ಕಿ ಅನರ್ಹ ಶಾಸಕರ ಬೆಂಬಲದಿಂದ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಮೈತ್ರಿ ಸರ್ಕಾರ ಬಿದ್ದು ಕೋಮುವಾದಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು.. ನಂತರ ಜನರಿಗೆ ದ್ರೋಹ ಬಗೆದು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ,2019 ರಲ್ಲಿ ಬಿಜೆಪಿ ಯಿಂದ ಮಹೇಶ ಕುಮಠಳ್ಳಿ ಸ್ಪರ್ಧೆ ಮಾಡಿದಾಗ ಕಾಂಗ್ರೆಸ್ ಆಯ್ಕೆ ಮಾಡಿದ್ದು ಹಿರಿತನ, ಎಲ್ಲಾ ಜನರ, ಸಮುದಾಯದ, ವಯೋಮಾನದವರ ಜೊತೆಗೆ ಬೆರೆಯುವ ನಿರ್ಗವಿ ಗಜಾನನ ಮಂಗಸೂಳಿ ಅವರನ್ನು.. ಗಜಾನನ ಮಂಗಸೂಳಿ ಅವರನ್ನು 2019 ರ ವಿಧಾನ ಸಭಾ ಉಪ ಚುನಾವಣೆ ಅವಧಿಯಲ್ಲಿ ಅಭ್ಯರ್ಥಿ ಅಂತಾ ಘೋಷಣೆ ಮಾಡಿದಾಗ ಸಿಕ್ಕಿದ್ದು ಕೆಲವೇ ಕೆಲವು ದಿನಗಳ ಅವಕಾಶ.. ಅಂತಹ ಸಂದರ್ಭದಲ್ಲಿ ಪಕ್ಷ ಸಂಘಟನೆ ಮಾಡಿ, ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು, ತುಂಬಾ ಕಡಿಮೆ ಮತಗಳ ಅಂತರದಲ್ಲಿ ಸೋತರು. *ಸೋತ ನಂತರವೂ ಮನೆಯಲ್ಲಿ ಕೂಡದೆ, ಹಾಲಿ ಶಾಸಕರ ಜೊತೆಗೆ ದೋಸ್ತಿ ಬೆಳೆಸದೆ,ಪಕ್ಷ, ಸಿದ್ಧಾಂತ, ಸಂಘಟನೆ ಅಂತಾ ಬೀದಿ ಬೀದಿಯಲ್ಲಿ ಹೋರಾಟ ಮಾಡಿದ್ರು. ಹಳ್ಳಿ ಹಳ್ಳಿಗಳನ್ನು ತಿರುಗಿದರು. ಎಲ್ಲಾ ಸಮುದಾಯದ ಜನರನ್ನು ವಿಶ್ವಾಸಕ್ಕೆ ತಗೊಂಡು ಮುನ್ನಡೆದು, ನಿರಂತರವಾಗಿ ಜನರ ಮಧ್ಯೆದಲ್ಲಿ , ಎಲ್ಲರ ಮನೆಯ ಮಗನಾಗಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧಿಸುವ ಜನಸೇವಕನಾಗಿ, ದುಡಿದರು*. ತಾವು, ತಮ್ಮ ಬಂಧು ಬಳಗ ಅನ್ನೋ ಈ ಯುಗದಲ್ಲೂ ಎಲ್ಲರ ಹಿತಕ್ಕೆ, ಏಳಿಗೆಗೆ ಶ್ರಮಿಸುತ್ತಿರುವ ಗಜಾನನ ಮಂಗಸುಳಿ ಅವರೇ ಸಮರ್ಥ ಅಭ್ಯರ್ಥಿ ಎಂದು ಕಾಂಗ್ರೆಸ್ ದ ಉನ್ನತ ವಲಯದ ಸಮೀಕ್ಷೆಯಲ್ಲಿ ಕಂಡು ಬಂದ ಅಭಿಪ್ರಾಯ ಆಗಿದೆ.
ಅದರ ಜೊತೆಗೆ ಸಾಮಾಜಿಕ ನ್ಯಾಯ, ಹಿರಿತನ , ಪಕ್ಷ ಸಂಘಟನೆ, ಬಿಜೆಪಿ ವಿರುದ್ಧ ನಿರಂತರ ಹೋರಾಟ, ಗಜಾನನ ಮಂಗಸುಳಿ ಅವರಿಗೆ ಟಿಕೆಟ್ ದೊರಕಲು ಪ್ರಮುಖ ಅಂಶಗಳಾಗಿವೆ. 2019ರ ಉಪ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಪಕ್ಷದ ಪರವಾಗಿ ಪಕ್ಷದ ಅಭ್ಯರ್ಥಿ ಪರವಾಗಿ ಕಾರ್ಯ ನಿರ್ವಹಿಸಿದ ಕಾರ್ಯಕರ್ತರ, ಮುಖಂಡರ ವಿವರ ಮತ್ತು ಅವರ ಕಾರ್ಯಗಳ ಸವಿಸ್ತಾರ ವರದಿ ರಾಷ್ಟ್ರೀಯ ನಾಯಕರೊಬ್ಬರ ಕೈ ಸೇರಿದ್ದು ಅವರು ಮಾತ್ರ ಟಿಕೆಟ್ ನಿರ್ಧಾರ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರ ಜೊತೆಗೆ ಕರ್ನಾಟಕ ಮೂಲದವರೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರೋದು ಇದನ್ನು ಗಂಭೀರವಾಗಿ ಪರಿಗಣಿಸಿರೋದು ಅಂತೂ ಸತ್ಯವಾಗಿದೆ. *18 ವರ್ಷಗಳ ನಂತರ ಮಾಜಿ ಉಪ ಮುಖ್ಯಮಂತ್ರಿ & ಹಾಲಿ ಶಾಸಕರ ಕ್ಷೇತ್ರದಲ್ಲಿ ನಡೆದ ಅಥಣಿ ಪುರಸಭೆ ಚುನಾವಣೆಯಲ್ಲಿ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದ್ದು ಇತಿಹಾಸ.* ಶಾಸಕರಾಗಿದ್ದ ಮಹೇಶ ಕುಮಟಳ್ಳಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಅವರ ಜೊತೆ ಅಥಣಿ ಮತಕ್ಷೇತ್ರದ ಪ್ರಭಾವಿ ಮುಖಂಡರು ಕಾಂಗ್ರೆಸ್ ತೊರೆದಾಗ ತಳ ಮಟ್ಟದಿಂದ ಕಾಂಗ್ರೆಸ್ ಸಂಘಟಿಸಿದ್ದು ಗಜಾನನ ಮಂಗಸೂಳಿ. *ಸೋತ ಮರುದಿನದಿಂದಲೇ ತನು, ಮನ, ಧನದಿಂದ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಿದ್ದು ಗಜಾನನ ಮಂಗಸೂಳಿ.* ಕಳೆದ 20 ವರ್ಷಗಳಿಂದ ಟಿಕೆಟ್ ಸಿಗದೇ ಇದ್ದಾಗ ಯಾರ್ರ್ಯಾರು ಏನೇನು ಮಾಡಿದ್ದಾರೆ & ಎಷ್ಟು ವರ್ಷದಿಂದ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ, ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಯಾರ್ರ್ಯಾರು ಕೈ ಜೋಡಿಸಿದ್ದರು ಎಂಬ ಮಾಹಿತಿ ಹೈಕಮಾಂಡ್ ಕೈ ಸೇರಿದೆ. ಪಕ್ಷ ಸಂಘಟಿಸದೆ, ಹಣ ಖರ್ಚು ಮಾಡದೇ ಚುನಾವಣೆ ಬಂದಾಗ ಮಾತ್ರ MLA ಅಭ್ಯರ್ಥಿ ಅಂತಾ ಪೋಸ್ ಕೊಡುವ ನಾಯಕರ ಬಗ್ಗೆ ಹೈಕಮಾಂಡ್ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ .ಅಥಣಿ ವಿಧಾನಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿ 11 ಜನ ಅರ್ಜಿ ಸಲ್ಲಿಸಿದ್ರು ಪಕ್ಷ ನಿಷ್ಟರಿಗೆ ಮಾತ್ರ ಟಿಕೆಟ್ ಸಿಗುತ್ತೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಕೇವಲ ಅಥಣಿ ಕ್ಷೇತ್ರ ಒಂದೆಯಲ್ಲ ರಾಜ್ಯದ ಎಲ್ಲಾ ವಿಧಾನಸಭಾ ಮತಕ್ಷೇತ್ರದಲ್ಲೂ *ರಾಷ್ಟ್ರೀಯ ನಾಯಕರು ತಮ್ಮದೇ ವಿಶ್ವಾಸರ್ಹ ಮೂಲಗಳಿಂದ ಸರ್ವೇ ನಡೆಸಿ, ಮಾಹಿತಿ ತರೆಸಿಕೊಂಡಿದ್ದು ಅದರಂತೆ ನಡೆದರೆ ಗಜಾನನ ಮಂಗಸೂಳಿ ಅವರೇ ಬಿಜೆಪಿ ಟಕ್ಕರ ಕೊಡಲಿಕ್ಕೆ, ಅಥಣಿ ಅಲ್ಲಿ ಸೊರಗಿದ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ಕೊಡಲಿಕ್ಕೆ, ಕಾಂಗ್ರೆಸ್ ಗತ ವೈಭವಕ್ಕೆ ಕಾರಣ ಆಗಲಿದೆ ಎಂದು ಜನರ ಅಭಿಪ್ರಾಯ ಕೂಡಾ ಆಗಿದೆ.*