ಬೆಳಗಾವಿ. ರಾಯಬಾಗ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಪ್ರಸಿದ್ಧಿ ಹೊಂದಿದ ಸುಕ್ಷೇತ್ರ ಆಲಖನೂರ ಶ್ರೀ ಕರಿಸಿದ್ದೇಶ್ವರ ಜಾತ್ರಾ ಉತ್ಸವ ಪ್ರತಿ ವರ್ಷದಂತೆ ಈ
ವರ್ಷವು ಸಡಗರ ಸಂಭ್ರಮದಿಂದ ಜರುಗಲಿದೆ.
ಕರ್ನಾಟಕ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯದ ಅಪಾರ ಭಕ್ತರ ಸಮೂಹವನ್ನು ಹೊಂದಿರುವ ಸುಕ್ಷೇತ್ರ ಅಲಖನೂರ ಕರಿಶಿದ್ಧೇಶ್ವರ ದೇವರ ಜಾತ್ರಾ ಉತ್ಸವ ಪ್ರತಿ ವರ್ಷ ಯುಗಾದಿ ಮೊದಲು ದಿನ ಜಾತ್ರಾ ಜರುಗುವುದು.
ಇದೇ ಸೋಮವಾರ ಯುಗಾದಿ ಹಬ್ಬದಂದು ಮಾ.21, 22 ರಂದು ಜಾತ್ರೆ ಜರುಗಲಿದೆ. ಮಂಗಳವಾರ ಶ್ರೀ ಕರಿಶಿದ್ಧೇಶ್ವರ ದೇವರ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ, ಮಹಾಪ್ರಸಾದ ಜರುಗಲಿದೆ ಜಾತ್ರೆಯಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವರು. ಜಾತ್ರೆ ಪ್ರಯುಕ್ತವಾಗಿ ನಾಟಕ ಪ್ರದರ್ಶನ ಇರಲಿದೆ ಎಂದು ಅರ್ಚಕರಾದ ನಾಗಪ್ಪಾ ಕಂಠಿಕಾರ ಪ್ರಕಟನೆಯಲ್ಲಿ ಮಾಹಿತಿ ನೀಡಿದರು.
ಈ ಸಮಯದಲ್ಲಿ ಸಿಂಗಾಡಿ ಕಂಠಿಕಾರ, ಹುಚ್ಚಪ್ಪ ಪೂಜಾರಿ, ವಿಠ್ಠಲ ಪೂಜೇರಿ, ಸತ್ಯಪ್ಪ ಪೂಜಾರಿ, ಸುರೇಶ್ ಪೂಜಾರಿ ಉಪಸ್ಥಿತರಿದ್ದರು.





