ಮರಿಯಮ್ಮನಹಳ್ಳಿ :ವಿಜಯ ನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಸ್.ಸಿ.ಮೀಸಲು ಕ್ಷೇತ್ರ ವ್ಯಾಪ್ತಿಯ ಮರೆಯಮ್ಮನಹಳ್ಳಿ ಪಟ್ಟಣದಲ್ಲಿ ಪಕ್ಷೇತರ ಅಭ್ಯರ್ಥಿ ಡಾ.ಎ.ಎ.ಎ.ಸುರೇಶ ಕುಮಾರ ಅವರ ಪರ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಕೈಕೊಂಡರು.
ಹೇರೂರ ಅವರ ಜೊತೆಗೆ ಶ್ರೀಮತಿ ಸಂಧ್ಯಾ ಪಾರ್ವತಿ, ಪಶುಪತಿ ಪಾಟೀಲ್ ಕನಕಗಿರಿ,ಡಾ.ವಿಲಾಸ ಮರೆಯಮ್ಮನಹಳ್ಳಿ ,ಔಷಧ ವ್ಯಾಪಾರಿಗಳಾದ ಪ್ರಭು ದೇವರು,ವಿನಯ ಕುಮಾರ, ಸಿ.ಚಿದಾನಂದ, ಕೀರ್ತನಾ ಫ಼ಾರ್ಮಾ ಸುರೇಶ, ಮಲ್ಲಯ್ಯ ಸ್ವಾಮಿ ಗಂಗಾವತಿ ಜೊತೆಯಲ್ಲಿದ್ದರು.
ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ದಿಸಿರುವ
ಬೇಡ ಜಂಗಮ ಸಮಾಜದ ಡಾ.ಎ.ಎಮ್.ಎ.ಸುರೇಶ ಕುಮಾರ ಮೂಲತಃ ಹಗರಿಬೊಮ್ಮನಹಳ್ಳಿ ನಿವಾಸಿಯಾಗಿದ್ದು ಕೊಟ್ಟೂರು ತಾಲೂಕಿನ ಅಯ್ಯನಹಳ್ಳಿ ಗ್ರಾಮದವರು.
ಡಾ.ಸುರೇಶ ಅವರು ಬಿ.ಜೆ.ಪಿ ಪಕ್ಷದ ಆಕಾಂಕ್ಷಿಯಾಗಿದ್ದರು, ಆ ಪಕ್ಷದಿಂದ ಟಿಕೆಟ್ ದೊರೆಯದಿದ್ದಕ್ಕಾಗಿ,ಜನಾರ್ಧನ ರೆಡ್ಡಿ ನೇತೃತ್ವದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಟಿಕೆಟ್ ಪಡೆಯಲು ಪ್ರಯತ್ನಿಸಿ,ಕೊನೆಯ ಹಂತದಲ್ಲಿ ಸದ್ರಿ ಪಕ್ಷದ ಬಿ.ಫ಼ಾರ್ಮ ಕೈ ತಪ್ಪಿದ್ದರಿಂದ ಈಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾರೆ.ಅವರ ಚಿನ್ಹೆ ಅಟೋರಿಕ್ಷಾ ಅಗಿದ್ದು ,ಅವರೂ ಸಹ ಭರ್ಜರಿ ಪ್ರಚಾರ ಕೈಕೊಂಡಿದ್ದಾರೆ.
ಹಗರಿಬೊಮ್ಮನಹಳ್ಳಿಯಲ್ಲಿ ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿರುವ ಡಾ.ಸುರೇಶ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು ,ಪಕ್ಷೇತರ ಅಭ್ಯರ್ಥಿಯಾಗಿ ಪುರಸಭೆಯಿಂದ ಆಯ್ಕೆಯಾಗಿದ್ದರು.