ಡಾ.ಜಯವೀರ ಎ.ಕೆ ಅವರ ಬದುಕು ಬರಹ ಸಿರಿವಂತಗೊಳ್ಳಲಿ:ವಿ.ಎಂ.ಪಾಟೀಲ ಆಶಯ

Share the Post Now

ಬೆಳಗಾವಿ.ರಾಯಬಾಗ:* ಡಾ.ಜಯವೀರ ಎ.ಕೆ ಗುರುಗಳು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು.ಕ್ರಿಯಾಶೀಲ ಪತ್ರಕರ್ತರಾಗಿ,ಜನಮಾನಸದಲ್ಲಿ ಗುರುತಿಸಿಕೊಂಡಿರುವ ಡಾ.ಜಯವೀರ ಗುರುಗಳು ವಿದ್ಯಾರ್ಥಿಗಳ ಮನಮೆಚ್ಚುವ ಆದರ್ಶ ಪ್ರಾಧ್ಯಾಪಕರು. ತನು ಮನ ಭಾವದಿಂದ ಪ್ರತಿಷ್ಠಿತ ಕೆ.ಎಲ್.ಇ. ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಅನುಪಮ ಸೇವೆ ಸಲ್ಲಿಸುತ್ತಿರುವ ಡಾ.ಜಯವೀರ ಗುರುಗಳ ಬದುಕು ಬರಹ ಸಿರಿವಂತಗೊಳ್ಳಲಿ ಎಂದು ಹಾರೂಗೇರಿ ಕ್ರಾಸ್ ನ ಜ್ಞಾನಸಾಗರ ನವೋದಯ ಹಾಗೂ ಸೈನಿಕ ವಸತಿ ಶಾಲೆಯ ಮುಖ್ಯ ಸಂಚಾಲಕರಾದ ಶ್ರೀ ವಿ.ಎಂ.ಪಾಟೀಲ ಆಶಿಸಿದರು.

ಅವರು ಮಂಗಳವಾರ ದಿನಾಂಕ 12 ರಂದು ಸಂಜೆ 6 ಗಂಟೆಗೆ ಖೇಮಲಾಪುರದ ಡಾ ಜಯವೀರ ಎ.ಕೆ.ಗುರುಗಳ ಜನುಮ ದಿನದ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇದಕ್ಕೂ ಮೊದಲು ಡಾ.ಜಯವೀರ ಎ.ಕೆ.ಅವರು ಕೇಕ್ ಕಟ್ ಮಾಡುವ ಮೂಲಕ ಪಾಲ್ಗೊಂಡ ಎಲ್ಲರಿಗೂ ಕೇಕ್ ವಿತರಿಸಿದರು. ಉಪಸ್ಥಿತರಿದ್ದ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಚಾಕಲೇಟ್ ವಿತರಣೆ ಮಾಡಲಾಯಿತು. ಡಾ.ಜಯವೀರ ಎ.ಕೆ.ಅವರ ಧರ್ಮಪತ್ನಿ ಶರಣೆ ಶ್ರೀಮತಿ ಭಾರತಿ ಜಯವೀರ, ಡಾ.ಜಯವೀರ ಅವರ ಪರಮ ಶಿಷ್ಯ ಕು.ಸಿದ್ದು ಕೋಳಿ,ವಿ.ಎಂ.ಪಾಟೀಲ ಅವರ ಸ್ನೇಹಿತರು ವೇದಿಕೆ ಮೇಲೆ ಉಪಸ್ಥಿತರಿದರು

Leave a Comment

Your email address will not be published. Required fields are marked *

error: Content is protected !!