ಸಚಿವ ಶಿವರಾಜ ತಂಗಡಗಿ ಭೇಟಿ:ಹಲವು ಅಭಿವೃದ್ಧಿ ಕೆಲಸಗಳ ಪ್ರಸ್ಥಾಪ.

Share the Post Now


ಗಂಗಾವತಿ: ಹಿಂದುಳಿದ ವರ್ಗ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಅವರನ್ನು ಮಂಗಳವಾರ ಭೇಟಿಯಾಗಿ ಜಿಲ್ಲೆಯ ಹಲವು ಅಭಿವೃದ್ಧಿ ಕೆಲಸಗಳನ್ನು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪ್ರಸ್ಥಾಪಿಸಿದರು.



ಗಂಗಾವತಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ(ಎ.ಆರ್.ಟಿ.ಓ),ಸಹಾಯಕ ಆಯುಕ್ತರ ಕಚೇರಿ ಆರಂಭಿಸಲು ಮತ್ತು ಗಂಗಾವತಿ-ದರೋಜಿ ನೂತನ ರೇಲ್ವೆ ಲೈನ್ ರಚನೆಯ ಕಾಮಗಾರಿಗಾಗಿ ವೆಚ್ಚವಾಗುವ ಮೊತ್ತದಲ್ಲಿ ರಾಜ್ಯದ ಪಾಲನ್ನು ಮಂಜೂರು ಮಾಡುವಂತೆ ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು.

ಗಂಗಾವತಿ-ಮುದಗಲ್,ಕುಷ್ಟಗಿ ಹಾಗೂ ಆನೆಗುಂದಿ ರಸ್ತೆಗಳಲ್ಲಿನ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರುವುಗಿಳಿಸಲು ಕ್ರಮ ಕೈಗೊಳ್ಳಲು ಈ ಸಂಧರ್ಬದಲ್ಲಿ ಅಶೋಕಸ್ವಾಮಿ ಹೇರೂರ ಕೋರಿದರು.



ಹೇರೂರ-ಆರ್ಹಾಳ ರಸ್ತೆಯ ಅಗಲಿಕರಣ,ಹೇರೂರ-ಮರಳಿ ರಸ್ತೆಗಳ ದುರಸ್ತಿಗೆ ಹೇರೂರ ಸಚಿವರಲ್ಲಿ ವಿನಂತಿಸಿದರು.

ಕಾಂಗ್ರೇಸ್ ಪಕ್ಷದ ನಾಯಕಿ ಶ್ರೀಮತಿ ಶೈಲಜಾ ಹಿರೇಮಠ
ಡಾ.ಶಿವಕುಮಾರ ಮಾಲಿಪಾಟೀಲ್,ಪತ್ರಕರ್ತರಾದ
ಮಂಜುನಾಥ ಗುಡ್ಲಾನೂರ್,ಹರನಾಯಕ
ವೀರೇಶ ಅಂಗಡಿ ಬೆಣಕಲ್,ಪ್ರಹ್ಲಾದ್ ಕುಲಕರ್ಣಿ
ವಿಜಯ ಬಳ್ಳಾರಿ,ಸಿಬಿಎಸ್ ಚ್ಯಾನಲ್ ಪ್ರತಿನಿಧಿ ಮಲ್ಲಿಕಾರ್ಜುನ‌ ಮುಂತಾದವರಿದ್ದರು.

Leave a Comment

Your email address will not be published. Required fields are marked *

error: Content is protected !!