ಹಳ್ಳೂರ .
ಸಮೀಪದ ಶಿವಾಪೂರ ಗ್ರಾಮದಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ಅತೀ ವಿಜೃಂಭಣೆಯಿಂದ ಜರುಗುತ್ತಿರುವ ಪವಾಡ ಪುರುಷ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸಾಯಂಕಾಲ ಗ್ರಾಮದ ಶ್ರೀ ಮಹಾದೇವ ದೇವಸ್ಥಾನದಿಂದ ಅಡವಿಸಿದ್ದೇಶ್ವರ ದೇವಸ್ಥಾನದವರೆಗೆ ಹೊರಡುವ ಶ್ರೀ ಬಸವ ಬುತ್ತಿ ಕಾರ್ಯಕ್ರಮಕ್ಕೆ ಶ್ರೀ ಮಠದ ಪೀಠಾಧಿಪತಿಗಳಾದ ಅಡವಿಸಿದ್ದರಾಮ ಮಹಾಸ್ವಾಮಿಗಳು ಚಾಲನೆ ನೀಡಿದರು.
ಗ್ರಾಮದ ಸಹಸ್ರಾರು ಹೆಣ್ಣುಮಕ್ಕಳು ರೊಟ್ಟಿ ಬುತ್ತಿಯನ್ನು ಹೊತ್ತುಕೊಂಡು ವಿವಿಧ ವಾಧ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಅಡವಿಸಿದ್ದೇಶ್ವರ ಮಠಕ್ಕೆ ಬಂದು ತಲುಪಿತು. ಈ ಸಮಯದಲ್ಲಿ ಅಭಿನವ ಚನ್ನಬಸವ ಮಹಾಸ್ವಾಮೀಜಿಗಳು.ಶ್ರೀ ಪಾದಬೋಧ ಸ್ವಾಮಿಜಿಗಳು ಸೇರಿದಂತೆ ಗ್ರಾಮದ ಗುರು ಹಿರಿಯರಿದ್ದರು.