ಗುಣಮಟ್ಟದ ರಸ್ತೆ ನಿರ್ಮಿಸಿ ಶಾಸಕ ಮಹೇಂದ್ರ ತಮ್ಮನವರ

Share the Post Now



ಸಾರ್ವಜನಿಕರ ಬಳಕೆ ವ್ಯಾಪ್ತಿ ಬರುವ ರಸ್ತೆಗಳು ಸಂಚಾರಕ್ಕೆ ಅನುಕೂಲ ಆಗಿರಬೇಕು ಆ ನಿಟ್ಟಿನಲ್ಲಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಅದಕ್ಕೆ ಸರ್ವರ ಕಾಳಜಿ ಅಗತ್ಯ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮನವರ ಹೇಳಿದರು

ಶುಕ್ರವಾರ ಕುಡಚಿ ಮತಕ್ಷೇತ್ರದ ಅಲಕನೂರ. ಶಿರಗುರ. ಪರಮಾನಂದವಾಡಿ. ಕೇಮಲಾಪುರ್. ಮತ್ತು ಯಬರಟ್ಟಿ.ಗ್ರಾಮಗಳಲ್ಲಿ ಅಂದಾಜು 2.ಕೋಟಿ ರೂ ಗಳಲ್ಲಿ ವೆಚ್ಚ ದಲ್ಲಿ ರಸ್ತೆ ಡಾಂಬರಿಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು

ನಂತರ ಕುಡಚಿ ಗ್ರಾಮೀಣ ಭಾಗದ ಹಲವು ವರ್ಷಗಳ ಬೇಡಿಕೆಯಾದ  7 ಕೋಟಿ 36ಲಕ್ಷ ರೂಗಳ ವೆಚ್ಚದಲ್ಲಿ 2900 ಮನೆಗಳಿಗೆ ಕ್ರಿಯಾತ್ಮಕ ನಳ ಜೋಡಿಸುವ ಕಾಮಗಾರಿಗೆ ಚಾಲನೆ ನೀಡಿ ಶಾಸಕರು ಮಾತನಾಡಿದರು




ಕ್ಷೇತ್ರದಲ್ಲಿ ಅನೇಕ ಕಾಮಗರಿಗಳನ್ನು ಕೈಗೊಂಡಿದ್ದು ಅವುಗಳ ಹೆಚ್ಚು ಬಾಳಿಕೆ ಬರುವಂತೆ ಗಮನಹರಿಸುವುದು ಗುತ್ತಿಗೆದಾರ ಸೇರಿದಂತೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಬರುವಂತಹ ದಿನಗಳಲ್ಲಿ ಇನ್ನುಳಿದ ಕಾಮಗರಿಗಳನ್ನು ಹಂತ ಹಂತ ವಾಗಿ ಮಾಡಲಾಗುವುದು ಎಂದರು

ಈ ಸಂದರ್ಭದಲ್ಲಿ ಕುಡಚಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ಪ ಹಾಲ್ಗುಣಿ, ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜು ಹೊರಟ್ಟಿ ,ಕುಮಾರ ಯಲ್ಲಟ್ಟಿ,ನಾಗಪ್ಫ ಚೌಗಲ್ಲಾ,ಹನಮಂತ ಸನದಿ,ಕರೆಪ್ಪ ಪೂಜಾರಿ ಗಡ್ಡಿ,ಗುತ್ತಿಗೆದಾರ ಮಧುಸುಧನ ಬಿಳಗಿ, ಖೇಮಲಾಪುರ ಗ್ರಾಮದ 
ಕಾರ್ತಿಕ ಪಾಲಬಾವಿ. ಸಿದ್ದು ಸನದಿ. ಸಿದ್ದು ಕೋಳಿ. ಸಿದ್ದು ನಾಗರಾಳ . ರಾವಸಾಬ ಚುಗಲಾ. ಮಾದೇವ ಕಡಕಬಾವಿ. ಮಹದೇವ್. ಮಗದುಮ.ಚಿದು ಕಾಂಬ್ಳೆ. ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು

ವರದಿ :ಕೆ ಎಸ್ ಕಾಂಬ್ಳೆ

Leave a Comment

Your email address will not be published. Required fields are marked *

error: Content is protected !!