ವರದಿ:ಕುಮಾರ ಕಾಂಬಳೆ
ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸುಮಾರು ಮೂರು ಕೋಟಿ ರೂಪಾಯಿ ಅನುದಾನದಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು.
ಮತಕ್ಷೇತ್ರದ ಮುಗಳಖೋಡ ಪಟ್ಟಣದ ವಾರ್ಡ್ ನಂ.10ರಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶ್ರೀ ಸಂಗೊಳ್ಳಿ ರಾಯಣ್ಣ ಸರ್ಕಲದಿಂದ ಹುಲ್ಲೋಳ್ಳಿ ತೋಟದ ವರೆಗೆ 5ಲಕ್ಷ ರಸ್ತೆ ಸುಧಾರಣೆ ಕಾಮಗಾರಿ , ಪಾಲಭಾವಿ ಗ್ರಾಮ ಪಂಚಾಯಿತಿಯಲ್ಲಿ ಫಲಾನುಭವಿಗಳಿಗೆ ಮನೆಗಳ ಮಂಜೂರಾತಿ ಆದೇಶ ಹಂಚಿಕೆ,
ಇಟನಾಳ ಗ್ರಾಮದ 5ಲಕ್ಷ ವೆಚ್ಚದಲ್ಲಿ ಶ್ರೀ ಮೌನೇಶ್ವರ ದೇವಸ್ಥಾನದ ಹತ್ತಿರ ತಡೆಗೋಡೆ ನಿರ್ಮಾಣ ಕಾಮಗಾರಿ, ಬಸ್ತವಾಡ ಗ್ರಾಮದ ಆರ್.ಎಂ.ಎಸ್.ಎ ಪ್ರೌಢಶಾಲೆ ಶಾಲೆಗೆ 17.70 ಲಕ್ಷ ರೂ ವೆಚ್ಚದಲ್ಲಿ ಪ್ರಯೋಗಾಲಯ ಕಾಮಗಾರಿ,
ಅಳಗವಾಡಿ ಗ್ರಾಮದ ಜನತಾ ಕಾಲೋನಿಯಲ್ಲಿ ಅಂದಾಜು 10 ಲಕ್ಷ ವೆಚ್ಚದಲ್ಲಿ ಸಿ ಸಿ ರಸ್ತೆ ಕಾಮಗಾರಿ, ನಿಡಗುಂದಿ ಗ್ರಾಮದ ಬಸ್ತವಾಡ ರಸ್ತೆಯಿಂದ ಸಿಮಿ ಲಕ್ಕವ್ವ ದೇವಸ್ಥಾನದ ವರೆಗೆ ಅಂದಾಜು 60 ಲಕ್ಷ ರೂ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ, ಮೊರಬ ಬೆಕ್ಕೇರಿ ರಸ್ತೆಗೆ ಅಂದಾಜು 1ಕೋಟಿ ವೆಚ್ಚದಲ್ಲಿ ಬ್ರಿಜ್ ನಿರ್ಮಾಣ ಕಾಮಗಾರಿ,
ನಿಲಜಿ ಗ್ರಾಮದ ಕೆ.ಪಿ.ಎಸ್ ಶಾಲೆಗೆ 5ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣ, ಸಿದ್ದಾಪುರ ಗ್ರಾಮದ ಮೂಲೆಯಿಂದ ಬುಲಬುಲೆ ತೋಟದ ವರೆಗೆ ಅಂದಾಜು 20ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ಹಾಗೂ ಕೋಳಿಗುಡ್ಡ ಗ್ರಾಮದ ರಾಯಬಾಗ ಅಥಣಿ ಗೋಕಾಕ ರಸ್ತೆಯಿಂದ ಕೊಳಿಗುಡ್ಡ ಯಲ್ಪಾರಟ್ಟಿ ಕೂಡುವ ರಸ್ತೆ ಅಂದಾಜು 80ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಸೇರಿದಂತೆ ಸುಮಾರು ಮೂರು ಕೋಟಿ ಅನುದಾನ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಂಕರ ನರಗಟ್ಟಿ, ವರ್ಧಮಾನ ಶಿರಹಟ್ಟಿ, ಕಲ್ಮೇಶ್ವರ ಕಾಂಬಳೆ, ಅಜ್ಜಪ್ಪ ಹಸರೆ, ಅಭಿಯಂತರರಾದ ಆರ.ಎಂ.ಮನವಡ್ಡರ,ಶಶಿಧರ ಪಾಟೀಲ, ಗುತ್ತಿಗೆದಾರರಾದ ಚೇತನ ದಳವಾಯಿ, ರಾಯಮಾನೆ, ಮಹಾಂತೇಶ ಜತ್ ಊರಿನ ಪ್ರಮುಖರು, ಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು





