ರಾಯಬಾಗ :ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಕುಡಚಿ ಕ್ಷೇತ್ರದ ಶಾಸಕರಾದ ಮಹೇಂದ್ರ ತಮ್ಮಣ್ಣವರ ಅವರು ಶಾಸಕರ ಅನುದಾನದಲ್ಲಿ ಕುರಬ ಸಮಾಜದ ಸ್ಮಶಾನ ಭೂಮಿಯಲ್ಲಿ ಅಂದಾಜು 5ಲಕ್ಷ ರೂಗಳ ವೆಚ್ಚದಲ್ಲಿ ಪಿವರ್ ಬ್ಲಾಕ್ ಅಳವಡಿಸುವ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸುವ ಮುಖಾಂತರ ಕಾಮಗಾರಿಗೇ ಚಾಲನೆ ನೀಡಿದರು
ನಂತರ ಪುರಸಭೆ ವ್ಯಾಪ್ತಿಯ ವಾರ್ಡ್ ನಂ 12ರಲ್ಲಿ ಮೊರಬ ರಸ್ತೆಯಿಂದ ಸಣ್ಣಕ್ಕಿನವರ ತೋಟದ ವರಗೆ ಪುರಸಭೆ ಅನುದಾನದಲ್ಲಿ 6ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಗೇ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ವಸಂತ ಲಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಹಾಲಗುಣಿ ಪುರಸಭೆ ಸದಸ್ಯರಾದ ಬಸವರಾಜ್ ಚೌಗಲಾ ಬಾಬು ನಡೋಣಿ ಮಾಳು ಹಾಡಕರ ಎನ್ ಎಸ್ ಚೌಗಲಾ ಆನಂದ ಪಾಟೀಲ ಪುರಸಭೆ ಮುಖ್ಯಧಿಕಾರಿ ಅಭಿಷೇಕ್ ಪಾಂಡೆ ಆರೋಗ್ಯ ನೀರಿಕ್ಷಕ ರವಿಂದ ಸನಗೊಂಡ ಶಂಕರ ಪಾಗೆ ಗುತ್ತಿಗೆದಾರ ಶಶಿದರ ಶಿಂಗೆ ಮತ್ತಿತರು ಉಪಸ್ಥಿತರಿದ್ದರು
ವರದಿ :ಕೆ ಎಸ್ ಕಾಂಬಳೆ