ವರದಿ :ಕರೆಪ್ಪಾ ಎಸ್ ಕಾಂಬ್ಳೆ
ಖಣದಾಳ ಗ್ರಾಮದ ಶ್ರೀ ಹುಲಿಕಾಂತೇಶ್ವರ ದೇವಸ್ಥಾನಕ್ಕೆ 1 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ಮಂಜೂರಾಗಿದೆ: ಶಾಸಕ ಮಹೇಂದ್ರ ತಮ್ಮಣ್ಣವರ;
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಣದಾಳ ಗ್ರಾಮ ಪಂಚಾಯಿತ ಆಶ್ರಯದಲ್ಲಿ ಗ್ರಾಮದ ಶ್ರೀ ಹುಲಿಕಾಂತೇಶ್ವರ ದೇವಸ್ಥಾನದ ದಾಸೋಹ ನಿಲಯದ ಪ್ರಾಂಗಣದಲ್ಲಿ ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಸನ್. 2022- 23ನೇ ಸಾಲಿನ ಹೆಚ್ಚುವರಿಯಾಗಿ ಮಂಜೂರಾಗಿರುವ ಬಸವ ವಸತಿ ಹಾಗೂ ಅಂಬೇಡ್ಕರ್ ವಸತಿ ಯೋಜನೆಯ 180 ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಿದರು.
ನಂತರ ಕಟಕಬಾಂವಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಬಸವ ವಸತಿ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ಸುಮಾರು 192 ಮನೆಗಳ ಅರ್ಹ ಪಲ್ಲಾನುಭವಿಗಳ ಹಕ್ಕು ಪತ್ರ ವಿತರಣೆ ಮಾಡಿದರು.
ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ರವಿ ಹಿಡಕಲ್ಲ, ಪಿಡಿಓ ರಾಮನಗೌಡ ಪಾಟೀಲ ಮಾತನಾಡಿದರು. ಗ್ರಾಮ ಪಂಚಾಯಿತ ಹಾಗೂ ಶ್ರೀ ಹುಲಿಕಾಂತೇಶ್ವರ ದೇವಸ್ಥಾನ ಕಮಿಟಿ ಮತ್ತು, ಶಾಸಕರ ಅಭಿಮಾನಿಗಳು ಸೇರಿಕೊಂಡು ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಟಕಬಾವಿ ಪಿಡಿಓ ಮಂಜು ತಳವಾರ ಗ್ರಾಪಂ ಉಪಾಧ್ಯಕ್ಷ ರವಿ ಚಿಂಚಲಿ, ಸದಸ್ಯ ಶ್ರೀಶೈಲ ಮಾಂಗ, ಕಟಕಬಾಂವಿ ಗ್ರಾಮ ಪಂಚಾಯತಿ ಎಲ್ಲಾ ಅದ್ಯಕ್ಷ ರು ಉಪಾಧ್ಯಕ್ಷ ರು ಸೇರಿದಂತೆ ಸರ್ವ ಸದಸ್ಯರು ಗಳು ಶಾಸಕ ಮಹೇಂದ್ರ ತಮ್ಮಣ್ಣವರ ಅಭಿಮಾನಿಗಳು ಉಪಸ್ಥಿತರಿದ್ದರು.