ಬೆಳಗಾವಿ
ವರದಿ: ಶಶಿಕಾಂತ ಪುಂಡಿಪಲ್ಲೆ
ಅಥಣಿ ತಾಲೂಕಿನ ಬನ್ನೂರು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಸಹಕಾರದಿಂದ ನಾನು ಸುಮಾರು 24 ಲಕ್ಷ ರೂಪಾಯಿ ಖರ್ಚು ಮಾಡಿ ಎರಡು ಎಕರೆ ಭೂಮಿ ಖರೀದಿಸಿ ಸರಕಾರಿ ಹೈಸ್ಕೂಲಿಗೆ ದಾನ ಮಾಡಲಾಗಿದ್ದು. ಇಂದು ಆ ಜಾಗದಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುತ್ತಿರುವುದು ಖುಷಿಯ ಸಂಗತಿ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು.
ಅವರು ತಾಲೂಕಿನ ಯಲಿಹಡಲಗಿ ಗ್ರಾಮದಲ್ಲಿ 40 ಲಕ್ಷ ರೂ ವೆಚ್ಚದ ಅಥಣಿ ಮುಖ್ಯ ರಸ್ತೆಯಿಂದ ಖೋತನಟ್ಟಿಗೆ ಹೋಗುವ ರಸ್ತೆ ನಿರ್ಮಾಣ.
ಬನೂರ ಗ್ರಾಮದಲ್ಲಿ 17 ಲಕ್ಷ 75 ಸಾವಿರ ರೂ ವೆಚ್ಚದ ಸರಕಾರಿ ಪ್ರೌಡಶಾಲೆಯ 1 ಶಾಲಾ ಕೊಠಡಿ ಕಾಮಗಾರಿ ಭೂಮೀ ಪೂಜೆ.
ತೆಲಸಂಗ ಗ್ರಾಮದಲ್ಲಿ 5 ಲಕ್ಷ ದುರ್ಗಾದೇವಿ ದೇವಸ್ಥಾನ ಸಮುದಾಯ ಭವನ ಕಾಮಗಾರಿ ಪೂಜೆ. 5 ಲಕ್ಷ ರೂ ವೆಚ್ಚದ ಹೊರಟಿ ಬಸವೇಶ್ವರ ದೇವಸ್ಥಾನ ಸಮುದಾಯ ಕಾಮಗಾರಿ ಭೂಮೀ ಪೂಜೆ.
5 ಲಕ್ಷ
ವೆಚ್ಚದ ಹಾಜಿಮಸ್ತಾನ ದರ್ಗಾ ಸಮುದಾಯ ಭವನ ಕಾಮಗಾರಿ ಭೂಮೀ ಪೂಜೆ.5 ಲಕ್ಷ ರೂ ವೆಚ್ಚದ S. B ಪಾಟೀಲ ಅವರ
ಹೊಲದ ಹತ್ತಿರ ಚಿಕ್ಕ ಡ್ಯಾಮ ನಿರ್ಮಾಣ.
1 ಕೋಟಿ 35 ಲಕ್ಷ ರೂ ವೆಚ್ಚದ ತೆಲಸಂಗ ಗ್ರಾಮದಲ್ಲಿ ಸೇತುವೆ ಸಹಿತ ಬಾಂದಾರ ನಿರ್ಮಾಣ ಕಾಮಗಾರಿ. ಭೂಮೀ ಪೂಜೆ.
ಅರಟಾಳ ಗ್ರಾಮದಲ್ಲಿ 14 ಲಕ್ಷ ರೂ ವೆಚ್ಚದಲ್ಲಿ ಘಾಟಗೆ ತೋಟದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1 ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಅಥಣಿ ಮತಕ್ಷೇತ್ರಕ್ಕೆ ಈಗಾಗಲೇ ನಾನು ಹಾಗೂ ವಿ.ಪ ಸದಸ್ಯ ಲಕ್ಷ್ಮಣ ಸವದಿ ಅವರು ಸಾಕಷ್ಟು ಅನುದಾನ ತಂದು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ನಮ್ಮಲ್ಲಿ ಟಿಕೆಟ್ ವಿಷಯವಾಗಿ ಯಾವುದೇ ರೀತಿಯಾದ ಭಿನ್ನಾಭಿಪ್ರಾಯವಿಲ್ಲ. ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬಾರದು. ಹೈಕಮಾಂಡ್ ನಿರ್ಣಯಕ್ಕೆ ನಾವಿಬ್ಬರೂ ಬದ್ಧರಾಗಿದ್ದೇವೆ.ಪಕ್ಷ ಇಬ್ಬರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೆ ಎಂದರು.
ಈ ವೇಳೆ ಗುತ್ತಿಗೆದಾರರಾದ ಎಸ್ ಬಿ ನ್ಯಾಮಗೌಡರ P, M ಜಂಬಗಿ, S B ಬೆವನೂರ, N Y ಪಾಟೀಲ, ಅಪಾಸಾಬ ಶಿಂದೂರ, ನಾನಸಾಹೇಬ ಜಾಧವ ಹಾಗೂ ಮುಖಂಡರಾದ ನಿಂಗಪ್ಪ ನಂದೇಶ್ವರ, ಸಿದ್ದರಾಯ ನಾಯಿಕ ಅಧಿಕಾರಿಗಳಾದ ವೀರಣ್ಣ ವಾಲಿ, ಭರತೇಶ ಮಹಿಷವಾಡಗಿ, ಸೇರಿದಂತೆ ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.