ಬೆಳಗಾವಿ. ರಾಯಬಾಗ
ವರದಿ: ಸಂಗಮೇಶ ಹಿರೇಮಠ.
ಮುಗಳಖೋಡ: ಪಟ್ಟಣದ ಸಿದ್ದರಾಯನ ಮಡ್ಡಿಯಲ್ಲಿ ಮಾ.26 ರಂದು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಿರಿ ಯೋಜನೆಯಡಿಯಲ್ಲಿ 110 ಕೆವಿ ವಿದ್ಯುತ್ ಪ್ರಸರಣ ಘಟಕಕ್ಕೆ ಕುಡಚಿ ಶಾಸಕ ಹಾಗೂ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಭೂಮಿ ಪೂಜೆ ನೆರವೇರಿಸಿದರು.
ನಂತರ ಸಿದ್ದರಾಯನ ಮಡ್ಡಿಯಿಂದ ಪಟ್ಟಣದ ಶ್ರೀ ಹಣುಮಾನ ದೇವಸ್ಥಾನದ ವರೆಗೆ ಬೈಕ್ ರ್ಯಾಲಿ ನಡೆಯಿತು. ಶ್ರೀ ಹಣುಮಾನ ಮಂದಿರದ ಮುಂದೆ 203 ಜನರಿಗೆ ನಿವೇಶನಗಳ ಹಕ್ಕು ಪತ್ರಗಳನ್ನು ನೀಡಿ, ಪಟ್ಟಣದ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಜನರನ್ನು ಉದ್ದೇಶಿಸಿ ಮಾತನಾಡಿದರು.
ಮುಗಳಖೋಡ ರೈತರ ಬಹುದಿನಗಳ ಬೇಡಿಕೆಯಾಗಿದ್ದ, ವಿದ್ಯುತ್ ಪ್ರಸರಣ ಘಟಕವು ಮಂಜೂರಾಗಿ ಹಲವು ತಿಂಗಳುಗಳೇ ಗತಿಸಿದ್ದವು. ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವಿದ್ಯುತ್ ಪ್ರಸರಣ ನಿಗಮದ ಭೂಮಿ ಪೂಜೆ ನೆರವೇರಿದ್ದು ಸ್ಥಳೀಯ ರೈತರಲ್ಲಿ ಸಂತಸ ತಂದಿದೆ. ಈ ಘಟಕದಿಂದ ರೈತರು ಪ್ರತಿದಿನ 7 ಗಂಟೆಗಳ ಕಾಲ ತ್ರಿ ಪೀಜ್ ವಿದ್ಯುತ್ ಲಭ್ಯವಾಗಲಿದೆ.
ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಂಜಿನೀಯರ್ ಅಬ್ದುಲ ರಹೀಮ್ ಎಸ್, ಕಾರ್ಯ ನಿರ್ವಾಹಕ ಇಂಜಿನಿಯರ್ ಸಂತೋಷಕುಮಾರ ವೈ ಕೆ, ಕಾರ್ಯ ನಿರ್ವಾಹಕ ಇಂಜಿನಿಯರ್ ಶಿವಾಜಿ ಎಸ್ ಕರೆ, ದಿನೇಶ ಬಿರಡೆ ಎಇಇ ಕೆಪಿಟಿಸಿಎಲ್ ಬೆಳಗಾವಿ, ಆಸೀಫ್ ಕಾಗವಾಡ, ಸಿದ್ದಣ್ಣ ಕಂಬ್ಳಿ, ಕೆಂಪಣ್ಣ ಮುಸಿ, ಹನಮಂತ ಹೊಸಪೇಟಿ, ರಾಯಗೌಡ ಖೇತಗೌಡರ, ಗೌಡಪ್ಪ ಖೇತಗೌಡರ, ಕುಡಚಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡರ, ಅಶೋಕ ಖೇತಗೌಡರ, ಶಿವಬಸು ಕಾಫಸಿ,
ಪುರಸಭೆ ಸದಸ್ಯರಾದ ಮಹಾಂತೇಶ ಯರಡತ್ತಿ, ರಾಜಶೇಖರ ನಾಯಿಕ, ಮಂಗಲ ಪಣದಿ, ಚೇತನ ಯಡವಣ್ಣವರ, ಮಾಜಿ ಸದಸ್ಯ ಪದ್ಮಣ್ಣ ಕುರಾಡೆ, ಲತಾ ಹುದ್ದಾರ, ಜ್ಞಾನೇಶ್ವರ ಅಳಗೋಡಿ, ಅಶೋಕ ಗಸ್ತಿ, ಕಲ್ಲಪ್ಪ ಗೌರತ್ತಿನವರ, ದಿಲೀಪ ಗೌಲತ್ತಿನವರ, ಸೇರಿದಂತೆ ಎಲ್ಲ ರೈತರು ಉಪಸ್ಥಿತರಿದ್ದರು.
ಹಾರೂಗೇರಿ ಸಿಪಿಐ ರವಿಚಂದ್ರ ಬಡಪಕೀರಪ್ಪನವರ, ಪಿ.ಎಸ.ಐ ರೇಣುಕಾ ಜಕನೂರ ಸೇರಿದಂತೆ ಹಾರೂಗೇರಿ ಠಾಣಾ ಸಿಬ್ಬಂದಿಯವರು ಜನರನ್ನು ನಿಯಂತ್ರಿಸಿ ಯಾವುದೇ ಸಾರಿಗೆ ದಟ್ಟಣೆ ಉಂಟಾಗದಂತೆ ನೋಡಿಕೊಂಡರು.