ಬೆಳಗಾವಿ
Editor :kareppa s kamble
ಅಲಖನೂರಿನ ಕಾರ್ಯಾಲದಲ್ಲಿ ಶಾಸಕ ಪಿ ರಾಜೀವ್ ಅವರು ಸುದ್ದಿಗೋಷ್ಠಿ ನಡೆಸಿದರು
ಬೆಳಗಾವಿ : ಕುಡಚಿ ಶಾಸಕರಾದ ಪಿ ರಾಜೀವ್ ಅವರು ತಮ್ಮ ಅಲಖನೂರಿನ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಸಿಸಿ ಮಾತನಾಡಿ ಕ್ಷೇತ್ರ ಬದಲಾವಣೆ ಮಾಡುತ್ತಾರೆಂದು ಮಾಧ್ಯಮ ಮತ್ತು ವಿರೋಧ ಪಕ್ಷದದವರು ಸೃಷ್ಟಿ ಮಾಡಿದ್ದಾರೆ ನನಗೆ ಹೈಕಮಾಂಡನಿಂದ ಕುಡಚಿ ಮತಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸ್ಪಷ್ಟವಾದ ನಿರ್ದೇಶನ ಕೊಟ್ಟಿದೆ ಹಾಗಾಗಿ ಬರುವಂತಹ 2023ರ ಚುನಾವಣೆಯಲ್ಲಿ ಕುಡಚಿ ಮತಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ಕುಡಚಿ ಮತಕ್ಷೇತ್ರವು ನನಗೆ ಜೀವನ ಆದರ್ಶ ಗುರಿಯನ್ನು ಕೊಟ್ಟಂತ ಕ್ಷೇತ್ರ ಇಲ್ಲಿ ಸಿಕ್ಕಂತ ಪ್ರೀತಿ ವಾತ್ಸಲ್ಯ ಮಮತೆ ಅಕ್ಕರೆ ಯಾವ ರಾಜಕಾರಣಿಗೂ ಸಿಕ್ಕಿರಲಿಕ್ಕಿಲ್ಲ ಹಾಗಾಗಿ ಕುಡುಚಿ ಜನತೆಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು
ಮಾರ್ಚ್ 4ರಂದು ಫಲಾನುಭವಿಗಳ ಸಮ್ಮೇಳನ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಪ್ರಾರಂಭವಾಗಿರುವ ಬಿಜೆಪಿ ಸರ್ಕಾರದ ಆಡಳಿತ ಬಸವರಾಜ್ ಬೊಮ್ಮಾಯಿ ಅವರ ನಾಯಕತ್ವದ ಜನಪರ ಕೆಲಸಗಳನ್ನು ಮಾಡುವಲ್ಲಿ ಯಶಸ್ವಿಯಾಗಿದೆ ಇಲ್ಲಿಯವರೆಗೆ ಎರಡು ಕೋಟಿಗಿಂತಲೂ ಹೆಚ್ಚು ಪಲಾನುಭವಿಗಳಿಗೆ ನೆರೆವಾಗಿ ಸೌಲಭ್ಯಗಳನ್ನು ತಲುಪುವಂತೆ ನಮ್ಮ ಸರಕಾರ ಮಾಡಿದ್ದು ಹಾಗಾಗಿ ರಾಜ್ಯಾದ್ಯಂತ ಮಧ್ಯವರ್ತಿಗಳ ಹಾವಳಿ ಇಲ್ಲದೆ ಹಲವಾರು ಯೋಜನೆಗಳು ಬಡವರಿಗೆ ತಲುಪಿದ್ದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಅದಕ್ಕಾಗಿ ಮಾರ್ಚ್ 4 ನೇ ತಾರೀಕು ಚಿತ್ರದುರ್ಗದಲ್ಲಿ ಫಲಾನುಭವಿಗಳ ಸಮ್ಮೇಳನ ಉದ್ಘಾಟನೆ ಆಗಲಿದೆ ಕರ್ನಾಟಕದಲ್ಲಿ ಒಟ್ಟು ನಾಲ್ಕು ತಂಡಗಳು ರಚನೆಯಾಗಲಿವೆ ನನ್ನ ಕುಡಚಿ ಮತಕ್ಷೇತ್ರದಲ್ಲಿ ಒಟ್ಟು 75 ಸಾವಿರಕ್ಕಿಂತ ಹೆಚ್ಚು ವಿವಿಧ ಯೋಜನೆಯ ಸೌಲಭ್ಯ ಪಡೆದಪಲಾನುಭವಿಗಳು ಇದ್ದು ಅವರನ್ನ ಭೂತ ಮಟ್ಟದ ಕಾರ್ಯಕರ್ತರು ಸಂಪರ್ಕಿಸುತ್ತಿದ್ದಾರೆ ಎಂದರು
ಅಭಿವೃದ್ಧಿ ಪರ್ವ : ಐವತ್ತು ವರ್ಷಗಳಲ್ಲಿ ಅಭಿವೃದ್ಧಿ ಕಾಣದ ಮತಕ್ಷೇತ್ರದಲ್ಲಿ ಕೇವಲ ನಾನು ಬಂದು ಹತ್ತು ವರ್ಷದಲ್ಲಿ ಹಲವಾರು ಅಭಿವೃದ್ಧಿ ಕೆಲವನ್ನ ಮಾಡಿದ್ದೇನೆ ಕ್ಷೇತ್ರದಲ್ಲಿ 6ಪದವಿ ಪೂರ್ವ ಕಾಲೇಜು 1 ಪದವಿ ಕಾಲೇಜನ್ನು ಸಂಚಾರ ಮಾಡಲಿಕ್ಕೆ ಉತ್ತಮ ರಸ್ತೆಗಳು,ಹಾರೂಗೇರಿಮತ್ತು ಕುಡಚಿ ಪಟ್ಟಣಕ್ಕೆ ಹೊಸದಾಗಿ ಬಸ್ ತಂಗುಧಾನವನ್ನು ಮಂಜೂರು ಮಾಡಿದ್ದು ಅದರ ಕಾಮಗಾರಿ ಪ್ರಗತಿಯಲ್ಲಿದೆ
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ನ್ಯಾಯಾಲಯದ ಸಂಕೀರ್ಣವನ್ನ ಹಾರೂಗೇರಿ ಪಟ್ಟಣಕ್ಕೆ ತರಬೇಕೆಂದು ಪ್ರಯತ್ನಗಳು ನಡೆದಿದ್ದು ಸರ್ಕಾರದ ಹಂತದಲ್ಲಿ ಪರಿಶೀಲಿನಲ್ಲಿ ಇದ್ದು ಆದಷ್ಟು ಬೇಗ ಅವುಗಳನ್ನು ಪ್ರಾರಂಭ ಮಾಡುತ್ತೇವೆ ಎಂದರು
ಈ ಸಂದರ್ಭದಲ್ಲಿ ಬಸನಗೌಡ ಆಸಂಗಿ ಕುಡಚಿ ಪುರಸಭೆ ಅಧ್ಯಕ್ಷ ದತ್ತಾ ಸಣ್ಣಕ್ಕಿ ಬಸವರಾಜ ಕೋತ ಹನುಮಂತ ಯಲಶೇಟ್ಟಿ ಸದಾಶಿವ ದಳವಾಯಿ ವಿನಾಯಕ ಮೂಡಸಿ ಹನುಮಂತ ಕುರಿ ಮತ್ತಿತರರು ಉಪಸ್ಥಿತರಿದ್ದರು





