ಬೆಳಗಾವಿ. ರಾಯಬಾಗ
🖊️Kareppa s Kamble
ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಕ್ಷೇತ್ರದ ಶಾಸಕ ಪಿ.ರಾಜೀವ ಅವರು 35.52 ಕೋಟಿ ರೂಪಾಯಿ ವೆಚ್ಚದಲ್ಲಿ ಕಟಕಬಾವಿ ಗ್ರಾಮದಲ್ಲಿ ಏತನೀರಾವರಿ ಕಾಮಗಾರಿಗೆಯ ಭೂಮಿ ಪೂಜೆಯನ್ನು ನೆರವೇರಿಸಿದರು
ರಾಯಬಾಗ ತಾಲೂಕೀನ ಕುಡಚಿ ಮತಕ್ಷೇತ್ರದ ಕೊನೆಯ ಗ್ರಾಮ ಕಟಕಬಾವಿ ಆಗಿದ್ದು ಗ್ರಾಮದ ರೈತರು ಇಲ್ಲಿಯವರೆಗೂ ಸಹಿತ ಕೇವಲ ಮಳೆ ಅಶ್ರಿತ ಬೆಳೆಗಳನ್ನು ಬೆಳೆಯುತ್ತ ಬಂದಿದ್ದರು ಈ ಒಂದು ಯೋಜನೆ ಕಾಮಗಾರಿ ಮುಗಿದರೆ ಗ್ರಾಮದ ರೈತರಿಗೆ ಅನುಕುಲವಾಗಲಿದೆ ಕರ್ನಾಟಕ ಸರಕಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಬೆಳಗಾವಿ ಇವರ ಅನುದಾನದಲ್ಲಿ ಗ್ರಾಮದ ರೈತರ ಜಮಿನುಗಳಿಗೆ ಜಾಗನೂರ ಗ್ರಾಮದ ಬಳಿಯಿರುವ ಹೀರೆಹಳ್ಳದಿಂದ ಏತನೀರಾವರಿ ಯೋಜನೆಯ ಕಾಮಗಾರಿಗೆ 35,52 ಕೋಟಿ ರೂಪಾಯಿ ಕಾಮಗರಿಗೆ ಚಾಲನೆ ನೀಡಲಾಗಿದೆ
ಕುಡಚಿ ಶಾಸಕ ಪಿ. ರಾಜೀವ ಅವರು ಮಾತನಾಡಿ ಅಂದಾಜು200ರಿಂದ 300 ರೈತರ 500ರಿಂದ 600ಎಕರೆ ಜಮೀನಿಗೆ ಈ ಒಂದು ನೀರಾವರಿ ಯೋಜನೆಯಿಂದ ಕಟಕಭಾವಿ ಗ್ರಾಮದ ರೈತರಿಗೆ ಉಪಯೋಗವಾಗಿ ಬಂಗಾರದದಂತಹ ಬೆಳೆಗಳನ್ನು ಬೆಳೆಯಬಹುದು ಎಂದು ಹೇಳಿದರು
ಕುಡಚಿ ಮತಕ್ಷೇತ್ರದ ಸಮಸ್ತ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮವಹಿಸಿದ್ದೇನೆ ಹಾಗಾಗಿ ಬರುವಂತಹ ವಿಧಾನಸಭಾ ಚುನಾವಣೆಯಲ್ಲಿ ನೀವೆಲ್ಲರೂ ಮತ್ತೊಮ್ಮೆ ಆಶೀರ್ವಾದ ಮಾಡಬೇಕೆಂದು ಕೇಳಿಕೊಂಡರು
ಇನ್ನು ವೇದಿಕೆ ಕಾರ್ಯಕ್ರಮವನ್ನು ವೇದಿಕೆ ಮೇಲಿದ್ದ ಗಣ್ಯರಿಂದ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಬೆಂಡವಾಡದ ಶ್ರೀ ಮುರಸಿದೇಶ್ವರ ಸ್ವಾಮಿಜಿ,ಕಟಕಬಾವಿಯ ಅಭಿನವ ಬಿರೇಶ್ವರ ಸ್ವಾಮಿಜಿ, ಪರಶುರಾಮ ಪಿಡಾಯಿ,ನಿಂಗಪ್ಪಾ ಪಕಾಂಡಿ, ಪುಂಡಲಿಕ ಕುರಬೇಟ,ನಿಂಗಪ್ಪಾ ಪಾತ್ರೊಟ, ಬಾಪು ಪಿಡಾಯಿ,ಸಂಜು ಹಳದಮನಿ, ಮಹಾದೇವ ಪಿಡಾಯಿ, ರಾಜು ಮಾಳಿಗೆ,ಬಸಪ್ಪಾ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.