ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಕಾಗವಾಡ:ಶೇಡಬಾಳ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಶೇಡಬಾಳ ಕಲಾಳದಲ್ಲಿ ಸುಮಾರು 24 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಕನ್ನಡ ಶಾಲೆಯ ನೂತನ 2 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಕಾಗವಾಡ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀಮಂತ ಪಾಟೀಲ ಅವರು ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.
ಈ ಸಮಯದಲ್ಲಿ ಸ್ಥಳೀಯ ಮುಖಂಡರು ಮಾತನಾಡಿ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಈಗಾಗಲೇ ಕ್ಷೇತ್ರದಲ್ಲಿ ಹಲವು ಶಾಲಾ ಕೊಣೆಗಳನ್ನು ನಿರ್ಮಿಸಿದ್ದಾರೆ, ಅದೇ ರೀತಿ ಶೇಡಬಾಳ ಪಟ್ಟಣದ ಕಲಾಳದಲ್ಲಿ ನೂತನ 2 ಶಾಲಾ ಕೋಣೆಗಳನ್ನು ನಿರ್ಮಿಸಿಸಲು ಭೂಮಿ ಪೂಜೆ ನೇರವೆರಿಸಿ ಕಾಮಗಾರಿಗೆ ಚಾಲನೆ ನೀಡಿದ್ದು, ಆದ್ದರಿಂದ ಸ್ಥಳೀಯರು ಶಾಸಕರಿಗೆ ಅಭಿನಂದನೆ ಕೋರಿದರು.
ಈ ಸಮಯದಲ್ಲಿ ಸ್ಥಳೀಯ ಬಿಆರ್ ಪಿ ಸಾಗರ ಮಾನೆ,ಇಸಿಒ ಕೆ.ಎಸ್.ಬಾಗೇವಾಡಿ,ಸಿ.ಆರ.ಪಿ.ಜಿ.ಎಮ್.ಶಿಂಧೆ,ಮುಖ್ಯೋಪಾಧ್ಯಾಯರಾದ ಶ್ರೀಮತಿ ಕೆ.ಎಸ್.ನಾಯಕ,sdmc ಅಧ್ಯಕ್ಷ ರಾಜು ನಾಯಕ,ಗ್ರಾಪಂ ಸದಸ್ಯ ಸಚೀನ್ ಪಾಟೀಲ್, ಭರಮು ಗಡದೆ,ಮಲ್ಲಪ್ಪ ಗಡದೆ,ಅಣ್ಣಪ್ಪ ಪಟಾಯತ,ಲಕ್ಷ್ಮಣ ಗಡದೆ,ಸತ್ಯಪ್ಪ ಗಡದೆ,ದೇವೆಂದ್ರ ಟೊಂಕೆ,ನರಸಪ್ಪ ಮುರಗುಂಡೆ,ಪುಂಡಲಿಕ ಪಾಟೀಲ್, ಬಂಡು ಪಾಟೀಲ್, ಸಂಜು ಲಾಂಡಗೆ ಶಕೀಲ ಮುಲ್ಲಾ, ಮುಖಂಡರು, ಶೇಡಬಾಳ ಪಟ್ಟಣ ಪಂಚಾಯತ್ ಸದಸ್ಯರು,ಗುತ್ತಿಗೆದಾರ ಬಿರಾದಾರಪಾಟೀಲ್ ಹಾಗೂ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.