ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಕಾಗವಾಡ: ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ ವಿಜಯ ಸಂಕಲ್ಪ ಅಭಿಯಾನಕ್ಕೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಶನಿವಾರ ದಿ. ೨೧ ರಂದು ಚಾಲನೆ ನೀಡಿದರು.
ಈ ಸಮಯದಲ್ಲಿ ಶಾಸಕ ಶ್ರೀಮಂತ ಪಾಟೀಲ, ಮುಖಂಡರಾದ ರಾಕೇಶ ಪಾಟೀಲ, ಅರುಣ ಜೋಶಿ, ಜಿಲ್ಲಾ ಯುವಮೋರ್ಚಾದ ಅಧ್ಯಕ್ಷ ದೀಪಕ ಪಾಟೀಲ, ಜಿಲ್ಲಾ ರೈತ ಮೊರ್ಚಾದ ಕಾರ್ಯದರ್ಶಿ ಶಿವಾನಂದ ನವಿನ್ಯಾಳ, ತಮ್ಮಣ್ಣ ಪಾರಶೆಟ್ಟಿ, ದುಂಡಪ್ಪಾ ತುಗಶೆಟ್ಟಿ, ಮಂಜು ಕೋಳಿ, ಕಲ್ಲಪ್ಪ ಬೋರಾಗಾಂವೆ, ಪ್ರಕಾಶ ದೊಂಡಾರೆ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.