ಬೆಳಗಾವಿ.
ಮೋದಿಯವರ ಸರ್ವಾಧಿಕಾರಿ ಆಡಳಿತದಲ್ಲಿ ಕಳ್ಳರನ್ನ ಕಳ್ಳರು ಅನ್ನುವ ನೈತಿಕತೆ ಇಲ್ಲದಾಗಿದೆ.ನೀರವ ಮೋದಿ ಹಾಗೂ ಲಲಿಯ ಮೋದಿ ಸ್ವಾತಂತ್ಯ ಹೋರಾಟಗಾರರಾ ಎಂದು ಪ್ರಶ್ನಿಸಿ ರಾಜ್ಯ ಯುವ ಕಾಂಗ್ರೆಸ್ ವಕ್ತಾರರಾದ ರಾಹುಲ ಮಾಚಕ ತೀವ್ರವಾಗಿ ಫೇಸ್‌ಬುಕ್ ಲೈವ್ ನಲಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಅವರು ರಾಹುಲ್ ಗಾಂಧಿ ಸಂಸದ ಸ್ಥಾನದ ಅನರ್ಹತೆ ಪ್ರಶ್ನಿಸಿ ಮಾತನಾಡುತ್ತಾ,ಮೋದಿಯವರು ದೇಶದಲ್ಲಿ ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ.ಬಿಜೆಪಿ ಸರ್ಕಾರದ ಸಚಿವ ಡಾ.ಅಶ್ವಥನಾರಾಯಣ್ ಅವರು ಸಿದ್ದರಾಮಯ್ಯ ಅವರನ್ನು ಮುಗಿಸಿ ಬಿಡಿ ಎಂದಾಗ ಅವರ ಮೇಲೆ ಕ್ರಮ ವಹಿಸದೇ ಇರೋ ನೀವುಗಳು ನಿಮ್ಮ ಭೃಷ್ಟ ಆಡಳಿತವನ್ನು ಪ್ರಶ್ನೆ ಮಾಡಿದರೇ ಅಂತಹವರನ್ನ ಜೈಲಿಗೆ ಕಳುಹಿಸ್ತೀರಿ ಇದ್ಯಾವ ನ್ಯಾಯ ಮೋದಿಜಿ ? ಇನ್ನೊಬ್ಬ ಸಚಿವ ಸಿಟಿ.ರವಿ ದಿನ ಬೆಳಗಾದರೆ ಸೋನಿಯಾ ಗಾಂಧಿಯವರ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ ಅವರ ಮೇಲೆ ಕೇಸ್ ಯಾಕ ಹಾಕಿಲ್ಲ? ಇವರಿಗೆ ಶಿಕ್ಷೆ ಯಾಕಿಲ್ಲ ಬಿಜೆಪಿಯವರಿಗೊಂದು ನ್ಯಾಯ. ಕಾಂಗ್ರೆಸ್ ನವರಿಗೊಂದು ನ್ಯಾಯಾನಾ ಮೋದಿಜಿ? ನಿಮ್ಮ ಬಿಜೆಪಿ ಶಾಸಕನಿಂದ ನಿಮ್ಮ ಪ್ರಾಯೋಜಿಕತ್ವದಲ್ಲಿ ತನುಮನ ಧನದಿಂದ ಸಹಾಯ ಮಾಡಿ ಕೇಸ್ ಹಾಕಿಸೋದಕ್ಕೆ ಹೇಳಿದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ