ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಬಸವ ನಗರದಲ್ಲಿ ಧರಿದೇವರ ಹಾಗೂ ಸಹೋದರಿ ಜಕ್ಕಮ್ಮದೇವಿಯ ಜಾತ್ರಾ ಮಹೋತ್ಸವ ಅತಿ ಅದ್ದೂರಿಯಾಗಿ
ಜರುಗಿತು
ಜಾತ್ರಾ ಮಹೋತ್ಸವದಲ್ಲಿ ಮುತೈದೆಯರಿಂದ ಪೂರ್ಣ ಕುಂಭ ಆರತಿ ಹಿಡಿದು ಸಕಲ ವಾದ್ಯ ಮೇಳದೊಂದೊಂದಿಗೆ ಧರಿದೇವರ ಕುದುರೆ ನಂದಿ ಕೋಲು ಹಾಗೂ ಆಲಗುರ ಗ್ರಾಮದ ಧರಿದೇವರ ದೇವರುಷಿಗಳಾದ ಶಾಂತ ಮೂರ್ತಿ ಲಕ್ಷ್ಮಣ ಮುತ್ಯಾ ಅವರನ್ನು ಸಕಲ ವಾದ್ಯಮೇಳ ದೊಂದಿಗೆ ಭವ್ಯ ಮೆರವಣಿಗೆ ಮೂಲಕ ಪತ್ರಿಗಿಡದ ಬಸವೇಶ್ವರ ಕಟ್ಟಿಯಿಂದ ಧರಿದೇವರ ದೇವಸ್ಥಾನದವರೆಗೆ ಪೂಜ್ಯರನ್ನು ಸ್ವಾಗತಿಸಲಾಯಿತು .
ದಾರಿಯುದ್ದಕ್ಕೂ ಎಲ್ಲಾ ಭಕ್ತರು ಧರಿದೇವರ ಕಿ ಚಂಗ್ ಬಲೋ ಜಾಕ್ಕಮ್ಮದೇವಿಕಿ ಚಂಗ್ ಬಲೋ ಎಂದು ಹೆಳುತ್ತಾ ಧರಿದೇವರ ದೇವಸ್ಥಾನ ಮೆರವಣಿಗೆ ತಲುಪಿತ್ತು.
ಜಾತ್ರಾ ಕಮೀಟಿಯ ಸದಸ್ಯರು ಗಳಿಂದ 108 ಕ್ಕೂ ಹೆಚ್ಚು ಮುತೈದಿಯರಿಯಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ನಂತರ ಅಡವಿಸಿದ್ದರಾಮ ಮಹಾಸ್ವಾಮಿಗಳು.ಶಿವಾಪೂರ ಮಠ ಅವರಿಂದ ಅದ್ಯಕ್ಷಿಯ ಆರ್ಶಿವಚನ ಜರುಗಿತು.
ನಂತರ ನಡೆದಾಡುವ ದೇವರು ಶಾಂತ ಮುರ್ತಿಗಳು ಪರಮ ಪೂಜ್ಯ ಲಕ್ಷ್ಮಣ ಮೂತ್ಯಾ ಭಕ್ತರನ್ನು ಉದ್ದೇಶಿಸಿ ಧರಿದೇವರ ಜೀವನ ಚರಿತ್ರೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಉನಬಡಿಸಿದರು…
ಈ ಸಂದರ್ಭದಲ್ಲಿ ಹಳ್ಳೂರ ಗ್ರಾಮದ ಸುತ್ತಮುತ್ತಲಿನ ಭಕ್ತರು
ಆಗಮಿಸಿದ್ದರು ಜಾತ್ರೆಗ ಬಂದ ಎಲ್ಲಾ ಭಕ್ತರಿಗೆ ಅಣ್ಣ ಪ್ರಸಾದ ವಿನಿಯೋಗ ಜಾತ್ರಾಕಮಿಟಿಯ ವರಿಂದ ಜರುಗಿತು..